ಗಂಭೀರ್ ಹಠ.. ಶ್ರೇಯಸ್‌ಗೆ ಸಂಕಟ- ವೈಭವ್‌ಗಾಗಿ ಸಂಜುಗೆ ಅನ್ಯಾಯ
ಸೋತ ಭಾರತ, ಗೆದ್ದ ದ್ರಾವಿಡ್ ಪುತ್ರ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬರುವ ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತೀಯ ಪುರುಷರ ತಂಡವನ್ನು ಪ್ರಕಟಿಸಿದೆ. ಇದರಲ್ಲೂ 15 ವರ್ಷದ ವೈಭವ್ ಸೂರ್ಯವಂಶಿ ಅವರು ಸ್ಥಾನ ಪಡೆದಿದ್ದು, ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಹರಾರೆಯಲ್ಲಿ ಈ ತಿಂಗಳ 23, 25 ಮತ್ತು 27 ರಂದು ಮೂರು ಟಿ-20 ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:ದಸರಾ ಗಜಪಡೆಗೆ ಇಸಿಜಿ ಟೆಸ್ಟ್ –ಇತಿಹಾಸದಲ್ಲೇ ಇದೇ ಮೊದಲ ಬಾರಿ ಆನೆಗಳ ಹೃದಯ ತಪಾಸಣೆ
ಭಾರತದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಎರಡನೇ ಟಿ20ಐ ಪಂದ್ಯದ ಪ್ಲೇಯಿಂಗ್ XIನಿಂದ ಕೈಬಿಟ್ಟ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಟೀಕಿಸಿದ್ದಾರೆ. ಸೂರ್ಯ ನಂತರ, ಈಗ ಸಂಜು ಅವರನ್ನು ಸಹ ಕೈಬಿಡಲಾಗಿದೆ.ಇದು ಎಲ್ಲಾ ಆಟಗಾರರು ತಾವು ಮುಂದಿನವರಾಗಬಹುದು ಎಂದು ಭಾವಿಸುವಂತೆ ಮಾಡಬಹುದು. ಇದು ತಂಡಕ್ಕೆ ಒಳ್ಳೆಯದಲ್ಲ ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಟಿ20 ವಿಶ್ವಕಪ್‌ನ ಮ್ಯಾಚ್ ವಿನ್ನರ್ ಸ್ಯಾಮ್ಸನ್‌ನನ್ನು ಕೇವಲ 3 ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ದಿಢೀರ್ ಆಗಿ ಕೈಬಿಟ್ಟಿರುವುದು ಅಚ್ಚರಿಯ ನಿರ್ಧಾರ . ಸೂರ್ಯವಂಶಿ ಅವರಿಗೆ ಪಾದಾರ್ಪಣೆ ಮಾಡಲು ಮ್ಯಾನೇಜ್‌ಮೆಂಟ್ ಬಯಸಿದ್ದರೆ, ಅದಕ್ಕೆ ಸ್ಯಾಮ್ಸನ್ ಅವರನ್ನು ಬಲಿಪಶು ಮಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ.
ಟಿ20ಐ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟಿರುವ ಬಗ್ಗೆ ಕೇಳಿಬರುತ್ತಿರುವ ಗೊಂದಲದ ಬಗ್ಗೆ BCCIನ ಮೂಲಗಳು ಸ್ಪಷ್ಟನೆ ನೀಡಿದೆ. ಜಿಂಬಾಬ್ವೆ ವಿರುದ್ಧ ಟಿ20ಐ ಸರಣಿಗೆ ಸಂಜು ಸ್ಯಾಮ್ಸನ್ ನೀಡಿಲ್ಲ. ಈ ಬಗ್ಗೆ ಬಗ್ಗೆ ಬಿಸಿಸಿಐ ಮೂಲಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಂಜು ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ ಮತ್ತು ಅವರನ್ನು ಕೈಬಿಡಲಾಗಿಲ್ಲ ಎಂದಿವೆ.
ನಾವು ಹೇಳಿದ್ದೇ ನಡೆಯಬೇಕು, ನಾವು ಹೇಳಿದವರನ್ನೇ ಆಡಿಸಬೇಕು ಅನ್ನೋ ಅಗರ್ಕರ್ ಮತ್ತು ಗಂಭೀರ್ ಹಠದಿಂದ ನಾಯಕ ಶ್ರೇಯಸ್ ಅಯ್ಯರ್‌ನನ್ನ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮ್ಯಾನೇಜ್‌ಮೆಂಟ್ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡ್ತಾ ಇರುವುದ್ದರಿಂದ ಟೀಂ ಇಂಡಿಯಾ ಸಾಲು ಸಾಲು ಸೋಲು ಅನುಭವಿಸುತ್ತಿದೆ. ಅದರಲ್ಲೂ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ ಮೇಲೆ ಒಂದೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಶ್ರೀಲಂಕಾದ ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ Vs ಶ್ರೀಲಂಕಾ ಅಂಡರ್ -19 ಪಂದ್ಯವನ್ನ 2 ವಿಕೆಟ್‌ಗಳಿಂದ ಲಂಕಾ ಗೆದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 285 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಆದರೆ ಶ್ರೀಲಂಕಾ ಎಂಟು ವಿಕೆಟ್‌ಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು. 286 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 48 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.
ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಶ್ರೀಲಂಕಾ ಅಂಡರ್ -19 ವಿರುದ್ಧ ನಡೆದ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. ಕೇವಲ 67 ಎಸೆತಗಳನ್ನೆದುರಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ತಮ್ಮ ಒಂದು ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳ ನೆರವಿನೊಂದಿಗೆ 87 ರನ್ ಗಳಿಸಿದರು. ಆದ್ರೆ ಈ ಪಂದ್ಯದಲ್ಲಿ ಭಾರತ ಸೋತಿದೆ.
ಜುಲೈ 14 ರಿಂದ ಏಕದಿನ ಇಂಗ್ಲೆಂಡ್ ಮತ್ತು ಭಾರತದ ನಡುವೆ ಏಕದಿನ ಸರಣಿ ನಡೆಯಲಿದ್ದು, ಟೀಂ ಇಂಡಿಯಾ ತಂಡದಲ್ಲಿ BCCI ಪ್ರಮುಖ ಬದಲಾವಣೆ ಮಾಡಿದೆ. ಟೀಂ ಇಂಡಿಯಾ ಮುಂಬೈನ ಸ್ಟಾರ್ ಆಲ್ ರೌಂಡರ್ ಶಿವಂ ದುಬೆ ಸುಮಾರು ಎರಡು ವರ್ಷಗಳ ನಂತರ ಭಾರತೀಯ ಏಕದಿನ ತಂಡಕ್ಕೆ ಮರಳಿದ್ದಾರೆ. ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ನಿತೀಶ್ ಕುಮಾರ್ ರೆಡ್ಡಿ ಅವರ ಬದಲಿಗೆ ಬಿಸಿಸಿಐ ಆಯ್ಕೆ ಸಮಿತಿ ದುಬೆ ಅವರನ್ನು ಹೆಸರಿಸಿದೆ.
ಪೃಥ್ವಿ ಶಾ ಹಾಗೂ ನಟಿ ಆಕೃತಿ ಅಗರ್ವಾಲ್ ಅವರ ರಿಲೇಶನ್‌ಶಿಪ್ ನಿಶ್ಟಿತಾರ್ಥ ಆದ ಕೇವಲ ನಾಲ್ಕೇ ತಿಂಗಳಲ್ಲಿ ಮುರಿದುಬಿತ್ತಾ ಅನ್ನೋ ಪ್ರಶ್ನೆ ಎದ್ದಿದೆ. ನಟಿ ಆಕೃತಿ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದು, ನನಗೆ ಮೋಸ ಆಗಿದೆ ಅಂತ ಹೇಳಿದ್ದಾರೆ. ನನಗೆ ತುಂಬಾ ಬಾರಿ ಮೋಸ ಮಾಡಲಾಗಿದೆ, ಆದರೂ ನಾನು ಎಂದಿಗೂ ಒಂದು ಮಾತನ್ನೂ ಆಡಲಿಲ್ಲ. ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಮೇಲೂ ಹೀಗಾಗುತ್ತದೆ ಎಂಬುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಇದು ಉಹಾಪೋಹಗಳಿಗೆ ಕಾರಣವಾಗಿದೆ.
ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 21ನೇ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ vs ಟೆಕ್ಸಾಸ್ ಸೂಪರ್ ಕಿಂಗ್ಸ್ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಸಿಯಾಟಲ್ ಓರ್ಕಾಸ್ ಪರಕೊನೆಯ ಓವರ್ನಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ದಸುನ್ ಶಾನಕ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಬಳಿಸಿದ್ರು. ಒಟ್ಟಿಗೆ ನಾಲ್ಕು ವಿಕೆಟ್ ಪಡೆದು ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧ ಸಿಯಾಟಲ್ ಓರ್ಕಾಸ್ ತಂಡಕ್ಕೆ 9 ರನ್‌ಗಳ ರೋಚಕ ಜಯ ತಂದುಕೊಟ್ಟಿದ್ದಾರೆ.

ನೋಡಿರಿ

