ಕರಾವಳಿ ಸಿನಿಮಾ ಟ್ರೈಲರ್ ಲಾಂಚ್ ವೇಳೆ ಕಿರಿಕ್ – ಪ್ರಜ್ವಲ್ ದೇವರಾಜ್‌ಗೆ ಖಡಕ್ ಸಂದೇಶ ಕೊಟ್ಟ ರಾಜ್ ಬಿ ಶೆಟ್ಟಿ

ಜುಲೈ 24ಕ್ಕೆ ಕರಾವಳಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಬಿಡುಗಡೆಗೆ 2 ವಾರ ಇರುವಾಗಲೇ ದೊಡ್ಡ ಕಂಟ್ರಾವರ್ಸಿ ನಡೆಯುತ್ತಿದೆ . ಗಾಂಧಿನಗರದ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೀತಿತ್ತು. ಈ ವೇಳೆ ಅಲ್ಲಿಗೆ ನುಗ್ಗಿದ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಕಿರಿಕ್ ಮಾಡಿದ್ದಾರೆ.
ಇದನ್ನೂ ಓದಿ: ಒಮ್ಮೆ HERO.. ಮತ್ತೊಮ್ಮೆ ZERO! – ಸಂಜುಗೆ ಸಂಜುನೇ ವಿಲನ್ ಆದ್ರಾ?
ಅನುಶ್ರೀ ‘ಕರಾವಳಿ’ ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಹೋಗಿರುವ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಕಿರುಚಾಡಿ ಹೈಡ್ರಾಮಾ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕಾರ್ಯಕ್ರಮಕ್ಕೆ ಸ್ವತಃ ಪ್ರಜ್ವಲ್ ದೇವರಾಜ್ ಅವರನ್ನು ಆಹ್ವಾನಿಸಿಲ್ಲ, ಚಿತ್ರದಲ್ಲಿ ಅವರ ಧ್ವನಿ ಬಳಸಿಕೊಳ್ಳುತ್ತಿಲ್ಲ, ಬದಲಿಗೆ ಬೇರೆಯವರಿಂದ ಡಬ್ ಮಾಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾತ್ರಿವರೆಗೂ ಕಾರ್ಯಕ್ರಮಕ್ಕೆ ಬರುವುದಾಗಿ ಪ್ರಜ್ವಲ್ ಹೇಳುತ್ತಿದ್ದರು. ಈಗ ಯಾಕೆ ಬರಲಿಲ್ಲ ಎನ್ನುವುದು ಗೊತ್ತಿಲ್ಲ ಎಂದು ನಿರ್ದೇಶಕ ಗುರುದತ್ ಗಾಣಿಗ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ.
ಪ್ರಜ್ವಲ್ ಅವರಿಗೆ 1 ಕೋಟಿ 25 ಲಕ್ಷ ರೂ. ಸಂಭಾವನೆ ಕೊಡುವ ಬಗ್ಗೆ ಮಾತುಕತೆ ಆಗಿದೆ. ಈಗಾಗಲೇ 1 ಕೋಟಿ ರೂ. ಕೊಟ್ಟಿದ್ದೀವಿ.. ಇನ್ನು 25 ಲಕ್ಷ ರೂ. ಕೊಡೋದು ಬಾಕಿ ಇದೆ. ಟ್ರೈಲರ್ ಬಿಡುಗಡೆ ಬಳಿಕ ಡಬ್ ಮಾಡಲು ನಾವು ಅವರಿಗೆ ಹೇಳಿದ್ದೆವು. ಆದ್ರೆ ಅದಕ್ಕೆ ಪ್ರತಿಕ್ರಿಯಿಸಿಲ್ಲ. ರಾಜ್ ಬಿ. ಶೆಟ್ಟಿ ಚಿತ್ರದಲ್ಲಿ ಇರೋದ್ರಿಂದ ಪ್ರಜ್ವಲ್ ದೇವರಾಜ್ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಈ ಪಾತ್ರಕ್ಕೆ ದೊಡ್ಡ ಸ್ಟಾರ್ ನಟ ಬರಬಹುದು ಎಂದು ಮೊದಲೇ ಹೇಳಿದ್ದೆವು. ಅದ್ಕೆ ಪ್ರಜ್ವಲ್ ಒಪ್ಪಿಕೊಂಡಿದ್ದರು. ಎರಡು ತಿಂಗಳಿಂದ ಪ್ರಜ್ವಲ್ ನಮಗೆ ಕನೆಕ್ಟ್ ಆಗಿಲ್ಲ.. ಬ್ಯುಸಿ ಅಂತ ಅವರ ಮ್ಯಾನೇಜರ್ ಹೇಳಿದ್ರು.. ಪ್ರಜ್ವಲ್ ಫ್ಯಾನ್ಸ್ ಬೇಕೆಂದೇ ಗಲಾಟೆ ಮಾಡುತ್ತಿದ್ದಾರೆ ಅನ್ನಿಸ್ತಿದೆ ಎಂದು ಗುರುದತ್ ವಿವರಿಸಿದ್ದಾರೆ.
ನಟ ರಾಜ್. ಬಿ ಶೆಟ್ಟಿ ಈ ಬಗ್ಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾತ್ರ ಮಾಡಿದ್ದೀನಿ. ಪೋಸ್ಟರ್, ಟೀಸರ್ ಎಲ್ಲದರಲ್ಲೂ ಪ್ರಜ್ವಲ್ ಹೆಸರು ಇದೆ. ಅಂದಹಾಗೆ ನಾನು ಈ ಚಿತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. ನನಗಿಂತ ದೊಡ್ಡ ಕಲಾವಿದರ ನಟಿಸ್ಬೇಕಿತ್ತು. ಕಾರಣಾಂತರಗಳಿಂದ ನಾನು ನಟಿಸುವಂತಾಯ್ತು. ನಾನು ಕಾಂಪಿಟೇಷನ್ ಮಾಡಲು ಬಂದಿಲ್ಲ. ನಾನು, ನನ್ನದು ಅಂದ್ರೆ ನಡೆಯಲ್ಲ. ಸಿನ್ಮಾ ನನಗಿಂತ ದೊಡ್ಡದು. ನನ್ನ ಹೆಸರು ಹಾಕದಿದ್ರು ನಾನು ಕೇಳಲ್ಲ. ಕಾರಣ ಸಿನಿಮಾ ಎಲ್ಲಕ್ಕಿಂತ ದೊಡ್ಡದು ಎಂದಿದ್ದಾರೆ.

ನೋಡಿರಿ

