ಕಿಚ್ಚ ಸುದೀಪ್-ಡಿಕೆಶಿ ಭೇಟಿ ನಡುವಿನ ಗುಟ್ಟು ರಟ್ಟು – ‘ಮಾಣಿಕ್ಯ’ನ ರಾಜಕೀಯ ಎಂಟ್ರಿ ಪಕ್ಕಾನಾ..?

ಕಿಚ್ಚ ಸುದೀಪ್-ಡಿಕೆಶಿ ಭೇಟಿ ನಡುವಿನ ಗುಟ್ಟು ರಟ್ಟು – ‘ಮಾಣಿಕ್ಯ’ನ ರಾಜಕೀಯ ಎಂಟ್ರಿ ಪಕ್ಕಾನಾ..?

sudeep-and-dk-shivkumar -meeting-reveal. ರಾಜ್ಯ ರಾಜಕೀಯದಲ್ಲಿ ಇವತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ನಟ ಕಿಚ್ಚ ಸುದೀಪ್​ರದ್ದೇ ಮಾತು. ನಟ ಸುದೀಪ್ ರಾಜಕೀಯಕ್ಕೆ ಬರುತ್ತಾರೆ. ಅದೂ ಕೂಡ ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಹೀಗಾಗೇ ಡಿಕೆಶಿ ಸುದೀಪ್​ರನ್ನ ಭೇಟಿ ಮಾಡಿದ್ದಾರೆ ಅನ್ನೋ ಚರ್ಚೆ ಶುರುವಾಗಿತ್ತು. ಅದಕ್ಕೆ ಕಾರಣ ಇಬ್ಬರ ಫೋಟೋಗಳು ವೈರಲ್ ಆಗಿದ್ದು.

ಇದನ್ನೂ ಓದಿ : ಮಚ್ಚು, ಲಾಂಗ್, ಚಾಕು ಖರೀದಿಗೆ ಆಧಾರ್ ಕಡ್ಡಾಯ – ಪೊಲೀಸರು ಹೊಸ ರೂಲ್ಸ್ ಮಾಡಿದ್ದೇಕೆ..?

ಹೌದು. ಈ ಹಿಂದೆಯೇ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಮೂಲಕ ಸುದೀಪ್‌ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಸುದೀಪ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜೊತೆಗಿರುವ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ.

ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಸುದೀಪ್‌ ಸದ್ಯ CCL ನಲ್ಲಿ ಬ್ಯುಸಿಯಾಗಿದ್ದಾರೆ.  ವಿಕ್ರಾಂತ್‌ ರೋಣ ಬಳಿಕ ಯಾವುದೇ ಹೊಸ ಸಿನಿಮಾ ಬಗ್ಗೆ ಅನೌನ್ಸ್‌ ಮಾಡಿಲ್ಲ. ಈ ನಡುವೆ ಈ ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲ ಅನ್ನೋದು ಗೊತ್ತಾಗಿದೆ. ಡಿಕೆಶಿ ಒಡೆತನದ ಮಾಲ್ ವೊಂದರಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಉದ್ಘಾಟನೆಗೆ ಸುದೀಪ್ ಅವರನ್ನು ಆಹ್ವಾನಿಸಲು ಹೋಗಿದ್ದರು ಎಂದು ಹೇಳಲಾಗುತ್ತಿದೆ(sudeep-and-dk-shivkumar -meeting-reveal.). ಡಿಕೆಶಿ ಜೊತೆ ನಲಪಾಡ್ ಕೂಡ ಇದ್ದರು.

ಇದೇ ವಿಚಾರವಾಗಿ ಕೋಲಾರದಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್ ​ನಟ ಸುದೀಪ್ ಜೊತೆ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗದ ಸಮಸ್ಯೆ ಬಗ್ಗೆ ಪ್ರಣಾಳಿಕೆ ಸಿದ್ಧಪಡಿಸುವ ಬಗ್ಗೆ ಚರ್ಚಿಸಿದ್ದೇವೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ಬನ್ನಿ ಅಂತಾ ನಟ ಸುದೀಪ್​​ಗೆ ಕರೆದಿಲ್ಲ. ಅವರಿಗೆ ರಾಜಕೀಯಕ್ಕೆ ಬರುವಂತೆ ನಾನು ಆಹ್ವಾನ ನೀಡಿಲ್ಲ. ಅನೇಕ ವಿಚಾರವಾಗಿ ಸಲಹೆ ಪಡೆಯಲು ಸುದೀಪ್ ಭೇಟಿಯಾಗಿದ್ದೇನೆ. ಕೊರೊನಾ ಸಂದರ್ಭದಲ್ಲಿ ಚಿತ್ರರಂಗದ ನೆರವಿಗೆ ಸರ್ಕಾರ ಬಂದಿಲ್ಲ. ಮೊದಲಿನಿಂದಲೂ ನಟ ಸುದೀಪ್ ನನಗೆ ಒಳ್ಳೆಯ ಸ್ನೇಹಿತ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

suddiyaana