ರೋನಾಲ್ಡೊ ವಿಶ್ವಕಪ್ ಕನಸು ಭಗ್ನ – ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರಿನ ವಿದಾಯ

ರೋನಾಲ್ಡೊ ವಿಶ್ವಕಪ್ ಕನಸು ಭಗ್ನ – ಕ್ರಿಸ್ಟಿಯಾನೊ ರೊನಾಲ್ಡೊ ಕಣ್ಣೀರಿನ ವಿದಾಯ

ಎರಡು ದಶಕಗಳ ಕಾಲ ಜಗತ್ತನ್ನೇ ಆಳಿದ ಫುಟ್‌ಬಾಲ್ ಕಿಂಗ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವ ಚಾಂಪಿಯನ್ ಕನಸು ಭಗ್ನವಾಗಿದೆ. ನಾಕೌಟ್ ಪಂದ್ಯಕ್ಕೆ ಸ್ವಲ್ಪ ಮೊದಲು ರೊನಾಲ್ಡೊ ಇದೇ ನನ್ನ ಇದು ಅವರ ಕೊನೆಯ ವಿಶ್ವಕಪ್ ಎಂದು ಘೋಷಿಸಿದ್ದರು. ನಂತರ ವಿಶ್ವಕಪ್ ಕನಸು ಭಗ್ನವಾಗುತ್ತಿದ್ದಂತೆ ಕಣ್ಣೀರಿನೊಂದಿಗೆ ವಿದಾಯ ಹೇಳಿದರು.

ಇದನ್ನೂ ಓದಿ:ಫಿಫಾ ವಿಶ್ವಕಪ್‌ನಿಂದ ಹೊರಬಿದ್ದ ಬ್ರೆಜಿಲ್ – ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನೇಮರ್ ಕಣ್ಣೀರ ವಿದಾಯ

ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಪ್ರಯಾಣಕ್ಕೆ ವಿದಾಯ ಹೇಳಿದರು. ಫಿಫಾ ವಿಶ್ವಕಪ್‌ನ 16 ರ ಸುತ್ತಿನ ​​ಪಂದ್ಯದಲ್ಲಿ ಪೋರ್ಚುಗಲ್ ಸಾಂಪ್ರದಾಯಿಕ ಎದುರಾಳಿ ಸ್ಪೇನ್ ವಿರುದ್ಧ 0-1 ಅಂತರದ ಹೀನಾಯ ಸೋಲು ಅನುಭವಿಸಿತು. ಈ ಸೋಲು ಪೋರ್ಚುಗಲ್‌ನ ವಿಶ್ವಕಪ್ ಕನಸನ್ನು ಭಗ್ನಗೊಳಿಸಿದೆ. ಇದರ ಜೊತೆಗೆ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪಯಣವೂ ಕೊನೆಗೊಂಡಿದೆ. ನಾಕೌಟ್ ಪಂದ್ಯಕ್ಕೆ ಸ್ವಲ್ಪ ಮೊದಲು ರೊನಾಲ್ಡೊ ಇದು ತನ್ನ ಕೊನೆಯ ವಿಶ್ವಕಪ್ ಎಂದು ಘೋಷಿಸಿದ್ದರು.  ಡಲ್ಲಾಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಹೆಚ್ಚುವರಿ ಸಮಯದಲ್ಲಿ ಮಿಕೆಲ್ ಮೆರಿನೊ ಗಳಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಸ್ಪೇನ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. ಇದೇ ಗೋಲು ಪೋರ್ಚುಗಲ್‌ನ ವಿಶ್ವಕಪ್ ಅಭಿಯಾನಕ್ಕೆ ತೆರೆ ಎಳೆಯಿತು.

ಡಲ್ಲಾಸ್ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ರೋನಾಲ್ಡೊ ಕಣ್ಣೀರಿನ ಹನಿಯೊಂದಿಗೆ ವಿದಾಯ ಹೇಳಿದರು. ಮೈದಾನದಿಂದ ಹೊರನಡೆದಾಗಲೂ ಅಭಿಮಾನಿಗಳು ಎದ್ದುನಿಂತು ಗೌರವ ಸಲ್ಲಿಸಿದರು. ಪಂದ್ಯದ ಬಳಿಕ ಮಾತನಾಡಿದ ರೊನಾಲ್ಡೊ, ಸೋಲನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಿದರೂ, ತಮ್ಮ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆ ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ರೀತಿಯಲ್ಲಿ ವಿಶ್ವಕಪ್‌ಗೆ ವಿದಾಯ ಹೇಳುತ್ತಿರುವುದು ನನಗೆ ತುಂಬಾ ದುಃಖ ತಂದಿದೆ. ನಾನು ನನ್ನಿಂದಾದ ಎಲ್ಲ ಪ್ರಯತ್ನ ಮಾಡಿದ್ದೇನೆ. ಮನಸ್ಸಿಗೆ ಯಾವುದೇ ಬೇಸರವಿಲ್ಲ. ಹೌದು, ಇದು ನನ್ನ ಕೊನೆಯ ವಿಶ್ವಕಪ್. ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ ಮತ್ತು ಎಲ್ಲವನ್ನೂ ಶಾಂತವಾಗಿ ಆಲೋಚಿಸುತ್ತೇನೆ. ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು. ತಮ್ಮ ಭವಿಷ್ಯದ ಕುರಿತ ಚರ್ಚೆ ಪೋರ್ಚುಗಲ್ ತಂಡದ ಅಭಿಯಾನವನ್ನು ಮರೆಮಾಚಬಾರದು ಎಂದೂ ಅವರು ತಿಳಿಸಿದರು. ನಾನು ಕ್ಷಣಿಕ ಭಾವೋದ್ವೇಗದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.

Sulekha

Leave a Reply

Your email address will not be published. Required fields are marked *