ಅಭಿ & ವೈಭವ್ ಡೆಡ್ಲಿ ಓಪನರ್ಸ್ – SPIN ಸಂಕಷ್ಟಕ್ಕೆ ಸಲ್ಯೂಷನ್ ಸಿಕ್ಕಿಲ್ವಾ?
3ನೇ ಮ್ಯಾಚ್.. ಹೀಗಿದೆ ಪ್ಲೇಯಿಂಗ್ 11

ಅಭಿ & ವೈಭವ್ ಡೆಡ್ಲಿ ಓಪನರ್ಸ್ – SPIN ಸಂಕಷ್ಟಕ್ಕೆ ಸಲ್ಯೂಷನ್ ಸಿಕ್ಕಿಲ್ವಾ?3ನೇ ಮ್ಯಾಚ್.. ಹೀಗಿದೆ ಪ್ಲೇಯಿಂಗ್ 11

ಮೊದಲ ಮ್ಯಾಚ್ ವಾಶ್ ಔಟ್.. ಎರಡನೇ ಪಂದ್ಯನಲ್ಲಿ ಸೋಲು.. ಇವತ್ತು ಮೂರನೇ ಪಂದ್ಯ. ಈ ಮ್ಯಾಚ್ ಗೆದ್ರಷ್ಟೇ ಸರಣಿ ಗೆಲ್ಲೋಕೆ ಸಾಧ್ಯ. ನಾಟಿಂಗ್​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಲಿರೋ ಈ ಮ್ಯಾಚ್​ ಭಾರತದ ಪಾಲಿಗೆ ಡು ಆರ್ ಡೈ. ಯಾಕಂದ್ರೆ ಇಲ್ಲಿ ಗೆದ್ರಷ್ಟೇ ಸರಣಿ ಗೆಲ್ಲೋಕೆ ಸಾಧ್ಯ. ಐರ್ಲೆಂಡ್ ವಿರುದ್ಧದ ಸಿರೀಸ್​ನಲ್ಲಿ ಎರಡಕ್ಕೆ ಎರಡೂ ಪಂದ್ಯ ಸೋತು ಇಂಗ್ಲೆಂಡ್ ವಿರುದ್ಧದ ಮೊದಲ ಮ್ಯಾಚ್ ರದ್ದಾಗಿ ಎರಡನೇ ಮ್ಯಾಚಲ್ಲೂ ಭಾರತ ಸೋತಿದೆ. ಸೋ ಅಲ್ಲಿಗೆ ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಒಂದೂ ಗೆಲ್ಲೋಕೆ ಸಾಧ್ಯವಾಗಿಲ್ಲ. ಅಟ್​ಲೀಸ್ಟ್ ಇಲ್ಲಿ ಗೆದ್ರಷ್ಟೇ ಮರ್ಯಾದೆ ಉಳಿಯೋದು. ವಿಶ್ವಚಾಂಪಿಯನ್ ಭಾರತ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಬರ್ಬೇಕು ಅಂದ್ರೆ ಬ್ಯಾಟಿಂಗ್, ಬೌಲಿಂಗ್ ಯುನಿಟ್ ಸೂಪರ್ ಸ್ಟ್ರಾಂಗ್ ಆಗ್ಬೇಕು. ಅದಕ್ಕಾಗಿ ಈ ಪಂದ್ಯಕ್ಕೆ ಕೆಲ ಚೇಂಜಸ್ ಆಗುತ್ತೆ.

ಇದನ್ನೂ ಓದಿ : ಗಂಭೀರ್ ಕೋಚ್ ಕುರ್ಚಿಗೆ ಕುತ್ತು – ENGನಲ್ಲಿ ಗೆಲ್ಲದಿದ್ರೆ ಬ್ಯಾಕ್ ಫೈಯರ್

ದುಬಾರಿ ರವಿ ಬಿಷ್ಣೋಯ್ ಪ್ಲೇಯಿಂಗ್ 11ನಿಂದ ಔಟ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಮ್ಯಾಚಲ್ಲಿ ಬೌಲಿಂಗ್​ನಲ್ಲಿ ಅತ್ಯಂತ ದುಬಾರಿಯಾಗಿದ್ದ ರವಿ ಬಿಷ್ಣೋಯ್​ಗೆ ಈಗ ಮೂರನೇ ಪಂದ್ಯದಲ್ಲಿ ಚಾನ್ಸ್ ಸಿಗಲ್ಲ. ಮ್ಯಾಚೆಂಸ್ಟರ್​ನಲ್ಲಿ ನಡೆದ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದಿದ್ದ ಬಿಷ್ಣೋಯ್ ಬರೋಬ್ಬರಿ 60 ರನ್ ನೀಡಿದ್ದರು. ಅದ್ರಲ್ಲೂ 17ನೇ ಒವರ್​ನಲ್ಲಿ ಬರೋಬ್ಬರಿ  29 ರನ್​ಗಳು ಇಡೀ ಪಂದ್ಯದ ದಿಕ್ಕೇ ಬದಲಿಸಿದ್ರು. ಭಾರತದ ಸೋಲಿನ ಬಳಿಕ ಮಾತನಾಡಿದ್ದ ನಾಯಕ ಶ್ರೇಯಸ್ ಅಯ್ಯರ್ ಕೂಡ ಬಿಷ್ಣೋಯ್ ಕಡೆಗೆ ಬೊಟ್ಟು ಮಾಡಿದ್ರು. ಪಂದ್ಯ ಎಲ್ಲಿ ಟರ್ನಿಂಗ್ ಪಡೆಯಿತು ಅನ್ನೋದು ಗೊತ್ತಿದೆ. ಪರ್ಟಿಕ್ಯುಲರ್ ಪ್ಲೇಯರ್ ಹೆಸರು ಹೇಳಕ್ಕ ಅನ್ನೋ ಮೂಲಕ ಬಿಷ್ಣೋಯ್​ರನ್ನೇ ಸೋಲಿಗೆ ಹೊಣೆ ಮಾಡಿದ್ರು. ಹೀಗಾಗಿ ಈ ಪಂದ್ಯಕ್ಕೆ ಬಿಷ್ಣೋಯ್ ಅವರನ್ನು ಕೈ ಬಿಟ್ಟು, ಅವರ ಬದಲಿಗೆ ಪೇಸ್ ಬೌಲರ್ ಆಡಿಸ್ತಾರೆ. ಪ್ರಸಿದ್ಧ್ ಕೃಷ್ಣ ಕೂಡ ದುಬಾರಿ ಆಗೋದ್ರಿಂದ ಪ್ರಿನ್ಸ್ ಯಾದವ್​ಗೆ ಆಡುವ ಅವಕಾಶ ಸಿಗೋ ಸಾಧ್ಯತೆಗಳು ಜಾಸ್ತಿ ಇದೆ. ಇನ್ನು ಬ್ಯಾಟಿಂಗ್ ಆರ್ಡರ್ ಅಂತಾ ಬಂದಾಗ ಕಳೆದ ಪಂದ್ಯದಲ್ಲಿ ಆಡಿದವ್ರೇ ಇಲ್ಲೂ ಕಂಟಿನ್ಯೂ ಆಗ್ತಾರೆ. ಯಾವುದೇ ಬದಲಾವಣೆ ಇರಲ್ಲ. ಭಾರತ ಅಂತೂ ಮೋಸ್ಟ್ ಡೇಂಜರಸ್ ಓಪನಿಂಗ್ ಜೋಡಿಯನ್ನ ಹೊಂದಿದೆ. ಪವರ್ ಪ್ಲೇನೂ ಚೆನ್ನಾಗಿ ಆಗ್ತಿದೆ. ಆದ್ರೆ ಮಿಡಲ್ ಆರ್ಡರ್​ನಲ್ಲಿ ರನ್ಸ್ ಇಲ್ಲ. ಸ್ಪಿನ್ ವಿರುದ್ಧ ಫೈಟ್ ಕೊಡ್ತಿಲ್ಲ. ಇಷ್ಟೆಲ್ಲಾ ಚಾಲೆಂಜಸ್ ನಡುವೆ ಪ್ಲೇಯಿಂಗ್ 11 ಹೇಗಿರುತ್ತೆ ನೋಡೋಣ.

ಭಾರತದ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ವೈಭವ್ ಸೂರ್ಯವಂಶಿ

ಇಶಾನ್ ಕಿಶನ್

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ಶಿವಂ ದುಬೆ

ಹರ್ಷಿತ್ ರಾಣಾ

ಅಕ್ಷರ್ ಪಟೇಲ್

ಅರ್ಷದೀಪ್ ಸಿಂಗ್

ಪ್ರಿನ್ಸ್ ಯಾದವ್

ವರುಣ್ ಚಕ್ರವರ್ತಿ

ಬ್ಯಾಟಿಂಗ್​ನಲ್ಲಿ ಯಾವ ಬದಲಾವಣೆ ಮಾಡಲ್ಲ. ಇಲ್ಲೂ ಕೂಡ ಸಂಜು ಬೆಂಚ್ ಕಾಯ್ಬೇಕು. ಉಳಿದಂತೆ ಬೌಲಿಂಗ್​ನಲ್ಲಿ ಒಂದು ಬದಲಾವಣೆ ಅಷ್ಟೇ ಮಾಡೋದು. ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಇನ್ನೊಂದು  ಸ್ಪೆಷಾಲಿಟಿ ಕೂಡ ಇದೆ. ಟಾಪ್-7 ಬ್ಯಾಟಿಂಗ್​ನಲ್ಲಿ 6 ಮಂದಿ ಲೆಫ್ಟ್ ಹ್ಯಾಂಡ್ ಬ್ಯಾಟರ್​ಗಳೇ ಇದ್ದಾರೆ. ಕಳೆದ ಮ್ಯಾಚಲ್ಲೇ ಈ ವಿಚಾರದಲ್ಲಿ ವಿಶ್ವದಾಖಲೆ ಮಾಡಿದೆ ಭಾರತ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಟಾಪ್-7 ಬ್ಯಾಟರ್​ಗಳಲ್ಲಿ ಆರು ಎಡಗೈ ಬ್ಯಾಟ್ಸ್​ಮನ್​ಗಳನ್ನು ಕಣಕ್ಕಿಳಿಸಿದ ವಿಶೇಷ ದಾಖಲೆ ಬರೆದಿದೆ. ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಅಕ್ಷರ್ ಪಟೇಲ್ ಹಾಗೂ ಶಿವಂ ದುಬೆ ಈ ಆರೂ ಜನ ಲೆಫ್ಟ್ ಹ್ಯಾಂಡ್ ಬ್ಯಾಟರ್ಸ್. ಟಾಪ್-7 ನಲ್ಲಿ ಕಣಕ್ಕಿಳಿದ ಏಕೈಕ ರೈಟ್ ಹ್ಯಾಂಡ್ ಬ್ಯಾಟರ್ ನಾಯಕ ಶ್ರೇಯಸ್ ಅಯ್ಯರ್ ಮಾತ್ರ. ಇದಕ್ಕೂ ಮುನ್ನ ವೆಸ್ಟ್ ಇಂಡಿಸ್ ತಂಡ ಐವರು ಲೆಫ್ಟ್ ಹ್ಯಾಂಡರ್​ಗಳನ್ನ ಬಳಸಿದ್ದೇ ದಾಖಲೆಯಾಗಿತ್ತು. ಒಟ್ನಲ್ಲಿ ಗೌತಮ್ ಗಂಭೀರ್ ಬಂದ್ಮೇಲೆ ಟೀಂ ಸೆಲೆಕ್ಷನ್, ಪ್ಲೇಯಿಂಗ್ 11 ಹೀಗೆ ಎಲ್ಲದ್ರಲ್ಲೂ ಸಾಕಷ್ಟು ಚೇಂಜಸ್ ಆಗ್ತಿದೆ. ಅಟ್ ದಿ ಸೇಮ್ ಟೈಂ ರಿಸಲ್ಟ್ ಕೂಡ ಚೇಂಜ್ ಆಗ್ತಿದೆ.

Shantha Kumari

Leave a Reply

Your email address will not be published. Required fields are marked *