ಒಮ್ಮೆ HERO.. ಮತ್ತೊಮ್ಮೆ ZERO! – ಸಂಜುಗೆ ಸಂಜುನೇ ವಿಲನ್ ಆದ್ರಾ?
BCCIಗೆ ಬೇರೆ ಯಾರೂ ಕಾಣಲ್ವಾ?

ಒಮ್ಮೆ HERO.. ಮತ್ತೊಮ್ಮೆ ZERO! – ಸಂಜುಗೆ ಸಂಜುನೇ ವಿಲನ್ ಆದ್ರಾ?BCCIಗೆ ಬೇರೆ ಯಾರೂ ಕಾಣಲ್ವಾ?

ಇಂಗ್ಲೆಂಡ್ ವಿರುದ್ಧದ 2ನೇ ಟಿ-20ಐ ಮ್ಯಾಚಲ್ಲಿ ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿದ್ದಕ್ಕೆ ಕೋಟ್ಯಂತರ ಫ್ಯಾನ್ಸ್ ಖುಷಿಯಾಗಿದ್ದಾರೆ. ಌಂಡ್ ಮಾಜಿ ಕ್ರಿಕೆಟರ್ಸ್ ಕೂಡ ಇದನ್ನ ವೆಲ್ಕಂ ಮಾಡಿದ್ದಾರೆ. ಬಾಸ್ ಬೇಬಿಯ ಕರಿಯರ್​ ಕೂಡ ಸ್ಟಾರ್ಟ್ ಆಗಿದೆ. ಆದ್ರೆ ವಿಷ್ಯ ಅದಲ್ಲ. ವೈಭವ್ ಸೂರ್ಯವಂಶಿಗಾಗಿ ಸಂಜು ಸ್ಯಾಮ್ಸನ್​ಗೆ ಯಾಕೆ ಕೊಕ್ ಕೊಟ್ರಿ ಅನ್ನೋದೇ ಇಲ್ಲಿರೋ ಮಿಲಿಯನ್ ಡಾಲರ್ ಪ್ರಶ್ನೆ. ಮಿಡಲ್ ಆರ್ಡರ್​ ವೀಕ್ ಇದೆ, ಹೆಚ್ಚುವರಿ ಆಲ್​ರೌಂಡರ್ಸ್ ಇದ್ದಾರೆ. ಸರ್ಜರಿ ಮಾಡಂಗಿದ್ರೆ ಅಲ್ಲಿ ಮಾಡ್ಬೋದಿತ್ತು. ಯಾಕೆ ಯಾವಾಗ್ಲೂ ಸಂಜುನೆ ಕಾಣೋದಾ ಅಂತಾ ಕೆಲವ್ರು ಪ್ರಶ್ನೆ ಮಾಡ್ತಿದ್ದಾರೆ. ಆದ್ರೆ ಸಂಜು ಪಾಲಿಗೆ ಸಂಜುನೇ ವಿಲನ್ ಆಗಿದ್ದಾರೆ.

ಇದನ್ನೂ ಓದಿ : ಜಿಂಬಾಬ್ವೆ ಪ್ರವಾಸಕ್ಕೂ ಸೂರ್ಯವಂಶಿಗೆ ಚಾನ್ಸ್ – ಸಂಜು ಸ್ಯಾಮ್ಸನ್‌ಗೆ BCCI ಬಿಗ್ ಶಾಕ್

2015ರ ಜುಲೈ 19ರಂದು ಜಿಂಬಾಬ್ವೆ ವಿರುದ್ಧ ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ ಸಂಜು ಸ್ಯಾಮ್ಸನ್ ಭಾರತ ಟಿ-20ಐ ತಂಡಕ್ಕೆ ಡೆಬ್ಯೂ ಮಾಡ್ತಾರೆ. ಸೋ ಈಗ 11 ವರ್ಷ. 2026ರ ಟಿ20 ವಿಶ್ವಕಪ್ ನ ಪ್ಲೇಯರ್ ಆಫ್ ದಿ ಟೂರ್ನಮೆಂಟ್. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಈಗ ಶ್ರೇಯಸ್ ಅಯ್ಯರ್. ಸೋ ಅಲ್ಲಿಗೆ ಮೂವರು ಕಂಪ್ಲೀಟ್ ಕ್ಯಾಪ್ಟನ್​ಗಳ ಅಡಿಯಲ್ಲಿ ಭಾರತದ ಪರ ಆಡಿದ್ದಾರೆ. ಈಗ ನಾಲ್ಕನೇ ನಾಯಕನಡಿ ಆಡ್ತಿದ್ದಾರೆ. ಬಟ್ ಪ್ಲೇಯಿಂಗ್ 11ನಲ್ಲಿ ಒಮ್ಮೆಯೂ ಅವ್ರ ಸ್ಲಾಟ್ ಕನ್ಫರ್ಮ್ ಆಗಿಲ್ಲ. ಒಂದಷ್ಟು ಮ್ಯಾಚ್​ನಲ್ಲಿ ಆಡ್ತಾರೆ ಮತ್ತೊಂದಷ್ಟು ಮ್ಯಾಚ್​ಗಳಲ್ಲಿ ಬೆಂಚ್ ಕಾಯ್ತಾರೆ. ಈಗ ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ 3 ಮ್ಯಾಚ್ ಆಡಿ 4ನೇ ಪಂದ್ಯಕ್ಕೆ ಬೆಂಚ್ ಕಾಯಿಸ್ತಿದ್ದಾರೆ.

ಕೆರಿಯರ್ ಉದ್ದಕ್ಕೂ ಒದ್ದಾಡುತ್ತಲೇ ಇದ್ದಾರೆ ಸಂಜು!

ಸಂಜು ಸ್ಯಾಮ್ಸನ್ ಕಳಪೆ ಆಟಗಾರನಲ್ಲ. ಹೆವಿ ಟ್ಯಾಲೆಂಟೆಡ್ ಌಂಡ್ ವೆಲ್ ಬಿಹೇವಿಯರ್ ಪ್ಲೇಯರ್. ಬಟ್ ನಸೀಬು ಅನ್ನೋದು ಪದೇಪದೆ ಕೈಕೊಡ್ತಾನೇ ಇದೆ. ಒಂದ್ಸಲ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದು ಕ್ರಿಕೆಟ್ ಲೋಕದ ಹೀರೋ ಆಗಿ ಮಾಡುತ್ತೆ. ಸೆನ್ಸೇಷನಲ್ ಪ್ಲೇಯರ್ ಆಗಿರ್ತಾರೆ. ಬಟ್ ನೆಕ್ಸ್​ಟ್ ಮೂಮೆಂಟ್ ಪಾತಾಳಕ್ಕೆ ಕುಸಿದಿರ್ತಾರೆ. ಟ್ರೋಲಿಗರಿಗೆ ಆಹಾರ ಆಗಿರ್ತಾರೆ. ಅದಕ್ಕೆ ಕಾರಣ ಅವ್ರ ಪ್ರದರ್ಶನ.

ಸಂಜುಗೆ ಸಂಜುನೇ ವಿಲನ್!

67 ಪಂದ್ಯಗಳ 57 ಇನ್ನಿಂಗ್ಸ್ ಗಳಲ್ಲಿ ಸಂಜು ಸ್ಯಾಮ್ಸನ್ ಟಿ-20ಐ ಬ್ಯಾಟಿಂಗ್

1,405 ರನ್ಸ್, 155.42 ಸ್ಟ್ರೈಕ್ ರೇಟ್, 3 ಶತಕ & 6 ಅರ್ಧಶತಕ, 84 ಸಿಕ್ಸ್

57 ಇನ್ನಿಂಗ್ಸ್ ಗಳಲ್ಲಿ 8 ಸಲ ಡಕ್ ಔಟ್, 20 ಬಾರಿ 35 ರನ್ಸ್ ಗಿಂತ ಒಳಗೇ ಔಟ್

30 ಸಲ 43 ರನ್ಸ್ ಒಳಗೆ ಔಟ್, 57 ಇನ್ನಿಂಗ್ಸ್ ಗಳಲ್ಲಿ 9 ಸಲ 50+ ರನ್ಸ್ ಕಲೆ

ಒಟ್ಟಾರೆ 1,405 ರನ್‌ ಗಳಲ್ಲಿ 793 ರನ್‌ಗಳು ಈ 9 ಇನ್ನಿಂಗ್ಸ್​ ಗಳಲ್ಲೇ ಬಂದಿದೆ

ಪರ್ಸೆಂಟೇಜ್ ಲೆಕ್ಕದಲ್ಲಿ ಹೇಳೋದಾದ್ರೆ ಶೇ. 56.4 ರಷ್ಟು ರನ್ಸ್ ಈ 9 ಇನ್ನಿಂಗ್ಸ್ ​ಗಳಲ್ಲಿ

612 ರನ್ಸ್ 48 ಇನ್ನಿಂಗ್ಸ್‌ ಗಳಲ್ಲಿ ಬಂದಿರುವಂಥದ್ದು, ಅದೂ ಕೂಡ 13.6 ಸರಾಸರಿಯಲ್ಲಿ

ಒಂದ್ಸಲ 111, ಇನ್ನೊಂದ್ಸಲ 107 ಮತ್ತೊಂದ್ಸಲ 109 ರನ್‌ ಗಳ ಮೂರು ಸೆಂಚುರಿ

ಕಂಪ್ಲೀಟ್ ಕರಿಯರ್ ​ನ ಕಾಲುಭಾಗದಷ್ಟು ರನ್ಸ್ ಮೂರೇ ಮ್ಯಾಚ್​ಗಳಲ್ಲಿ ಬಂದಿದೆ

ಸಂಜುಗೆ ಅತಿದೊಡ್ಡ ವೀಕ್ ​ನೆಸ್ ಏನಂದ್ರೆ ಒಮ್ಮೆ ಸ್ಫೋಟಕ ಮತ್ತೊಮ್ಮೆ ಡೌನ್ ಫಾಲ್

2022ರಲ್ಲಿ ಐರ್ಲೆಂಡ್ ವಿರುದ್ಧ 77 ರನ್, ನಂತ್ರ 30*, 15, 5, 12 ಮತ್ತು 7 ರನ್

2024ರಲ್ಲಿ ಜಿಂಬಾಬ್ವೆ ವಿರುದ್ಧ 58 ರನ್ ಗಳಿಸಿದ ನಂತರ 0, 0 ಮತ್ತು 29 ರನ್

2024ರ ಕೊನೆಯಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಶತಕ

ದಕ್ಷಿಣಾ ಆಫ್ರಿಕಾ ವಿರುದ್ಧ 4ನೇ ಟಿ-20ಐನಲ್ಲಿ ಅಜೇಯ 109 ರನ್ಸ್ ಗಳಿಸ್ತಾರೆ

ಈ ಇನ್ನಿಂಗ್ಸ್ ಆದ್ಮೇಲೆ ಮತ್ತೆ 26, 5, 3, 1 ಮತ್ತು 16 ರನ್ ಕಲೆ

ವಿಶ್ವಕಪ್ ಮೂರು ಇನ್ನಿಂಗ್ಸ್​ ​ಗಳಲ್ಲಿ 97 ಅಜೇಯ, 89 ಮತ್ತು 89 ರನ್ಸ್

ಐರ್ಲೆಂಡ್ ವಿರುದ್ಧ 5, 0 ಮತ್ತು ಇಂಗ್ಲೆಂಡ್ ವಿರುದ್ಧ 1 ರನ್, ಈಗ ಡ್ರಾಪ್

ಸಂಜು ಸಿಡಿದ್ರೆ ಆಟಂ ಬಾಂಬ್ ಇಲ್ದಿದ್ರೆ ಠುಸ್ ಪಟಾಕಿ ಅನ್ನೋ ಥರ ಆಗೋಗಿದೆ. ಆದ್ರೆ ಪ್ರಶ್ನೆ ಅದಲ್ಲ. ಭಾರತ ತಂಡದಲ್ಲಿ ಸಂಜು ಮಾತ್ರವೇ ವೀಕ್​ನೆಸ್ ಆಗಿರೋದಲ್ಲ. ಮಿಡಲ್ ಆರ್ಡರ್​ನಲ್ಲಿ ತಿಲಕ್ ವರ್ಮಾ ಕಡೆಯಿಂದಲೂ ರನ್ಸ್ ಇಲ್ಲ. ಅಗತ್ಯಕ್ಕಿಂತ ಜಾಸ್ತಿ ಆಲ್​ರೌಂಡರ್ಸ್ ಆಡಿಸ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಎರಡ್ರಲ್ಲೂ ಯೂಸ್ ಇಲ್ದೇ ಇರೋರು ಇದ್ದಾರೆ. ಸೋ ಅವ್ರನ್ನ ತೆಗೆದು ಸಂಜುರನ್ನ ಒನ್ ಡೌನ್ ಬ್ಯಾಟರ್ ಆಗಿ ಆಡಿಸಬಹುದಿತ್ತು.

Shantha Kumari

Leave a Reply

Your email address will not be published. Required fields are marked *