ವಯನಾಡಿನಲ್ಲಿ ಮತ್ತೆ ಭೂಕುಸಿತ – ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ವಯನಾಡಿನಲ್ಲಿ ಮತ್ತೆ ಭೂಕುಸಿತ – ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಕೇರಳಂ ವಯನಾಡ್‌ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ವಯನಾಡ್‌ನ ಮೇಪ್ಪಾಡಿ ಸಮೀಪ ಭೂಕುಸಿತ ಉಂಟಾಗಿದೆ. ಕಲ್ಲಾಡಿ ಸುರಂಗ ಕಾಮಗಾರಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:160 ತೂಗು ಸೇತುವೆ ನಿರ್ಮಿಸಿದ ಸುಳ್ಯದ ಸೇತುವೆ ಮನುಷ್ಯ ಇನ್ನಿಲ್ಲ – ಡಾ. ಗಿರೀಶ್ ಭಾರದ್ವಾಜ್ ವಿಧಿವಶ

ಕೇರಳಂನ ವಯನಾಡಿನಲ್ಲಿ ಘೋರ ದುರಂತ ಸಂಭವಿಸಿದೆ. ಮೇಪಾಡಿಯ ಕಲ್ಲಾಡಿ ಎಂಬ ಪ್ರದೇಶದ, ಮೀನಾಕ್ಷಿ ಸೇತುವೆ ಬಳಿ ಈ ದುರಂತ ಸಂಭವಿಸಿದೆ. ಭೂಕುಸಿತದಿಂದಾಗಿ ಹಲವರು ಮಣ್ಣಿನಡಿ ಸಿಲುಕಿದ್ದಾರೆ. ⁠ ಭೂಕುಸಿತದಲ್ಲಿ ನಿರ್ಮಾಣ ಹಂತದಲ್ಲಿರುವ ಕೋಯಿಕ್ಕೋಡ್-ವಯನಾಡ್ ಅವಳಿ ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಯನಾಡ್ ಹಾಗೂ ಮಲಪ್ಪುರಂ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಕಲ್ಲಾಡಿಯಲ್ಲಿರುವ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಉಂಟಾಗಿದೆ. ಭೂಕುಸಿತದಲ್ಲಿ ನಿರ್ಮಾಣ ಹಂತದಲ್ಲಿರುವ ಕೋಯಿಕ್ಕೋಡ್-ವಯನಾಡ್ ಅವಳಿ ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಈಗಾಗಲೇ ಐವರನ್ನು ರಕ್ಷಿಸಲಾಗಿದೆ.

ವಯನಾಡ್ ಮತ್ತು ಕೋಯಿಕ್ಕೋಡ್‌ನಲ್ಲಿ ಸುರಂಗದ ನಿರ್ಮಾಣ ಕಾರ್ಯ ಎರಡೂ ಕಡೆಯಿಂದ ನಡೆಯುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನಿರ್ಮಾಣ ಕಾರ್ಯ ಉದ್ಘಾಟನೆಯಾಯಿತು. ಇದೀಗ ಸುರಂಗ ಮಾರ್ಗ ಅಂತಿಮಹಂತದಲ್ಲಿ ಇರುವಾಗ ಈ ದುರಂತ ಸಂಭವಿಸಿದೆ.

ಭೂಕುಸಿತದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳು ತಕ್ಷಣ ವಯನಾಡಿಗೆ ತೆರಳುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ಸಿಎಂ ವಿ.ಡಿ. ಸತೀಶನ್ ಅವರು ಜಿಲ್ಲೆಯ ಸಚಿವ ಟಿ. ಸಿದ್ದಿಕ್ ಅವರೊಂದಿಗೆ ತುರ್ತು ಸಭೆ ನಡೆಸಿದರು. ರಕ್ಷಣಾ ಕಾರ್ಯಾಚರಣೆಯ ಸಮನ್ವಯಕ್ಕಾಗಿ ಕೋಯಿಕ್ಕೋಡ್‌ನಲ್ಲಿರುವ ತಂಡಕ್ಕೂ ವಯನಾಡಿಗೆ ತಲುಪುವಂತೆ ನಿರ್ದೇಶನ ನೀಡಿದ್ದಾರೆ.

Sulekha

Leave a Reply

Your email address will not be published. Required fields are marked *