ಕೈತುಂಬಾ ಹಣ ಬಂದ್ರೂ ನಿಮ್ಮ ಕೈಯಲ್ಲಿ ನಿಲ್ತಾ ಇಲ್ವಾ? – ಲಕ್ಷ್ಮೀ ದೇವಿ ಕೃಪೆಗೆ ಈ ಟಿಪ್ಸ್ ಫಾಲೋ ಮಾಡಿ

ಕೈತುಂಬಾ ಹಣ ಬಂದ್ರೂ ನಿಮ್ಮ ಕೈಯಲ್ಲಿ ನಿಲ್ತಾ ಇಲ್ವಾ? – ಲಕ್ಷ್ಮೀ ದೇವಿ ಕೃಪೆಗೆ ಈ ಟಿಪ್ಸ್ ಫಾಲೋ ಮಾಡಿ

ಕೈತುಂಬ ದುಡಿದ ಹಣ ಫಟ್ ಅಂತ ಖರ್ಚಾಗಿ ಬಿಡುತ್ತೆ. ಕೈಯಲ್ಲಿ ದುಡ್ಡೇ ನಿಲ್ಲೋದಿಲ್ಲ. ಲಕ್ಷ ಲಕ್ಷ ಬಂದ್ರೂ ಬೇರೆ ಬೇರೆ ಕಾರಣಗಳಿಂದ ದುಡ್ಡು ಖರ್ಚಾಗಿ ಬಿಡುತ್ತೆ. ಯಾಕೆ ಅನ್ನೋದೇ ಗೊತ್ತಾಗಲ್ಲ. ಲಕ್ಷ್ಮೀ ದೇವಿಯ ಅಪಕೃಪೆ ಇದ್ದಕ್ಕೆ ಕಾರಣ ಆಗಿರುತ್ತೆ. ಲಕ್ಷ್ಮೀ ದೇವಿಯ ಕೃಪೆ ಲಭಿಸಿದ್ರೆ ಹಣಕಾಸಿನ ಸ್ಥಿತಿ ಸುಧಾರಿಸಬಹುದು.. ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯಲು ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಲು ಏನು ಮಾಡಬೇಕು ಅನ್ನೋದ್ದನ್ನ ನೋಡೋಣ.

ಇದನ್ನೂ ಓದಿ: ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪ್ರತಿ ಶುಕ್ರವಾರ ಈ ಮಂತ್ರ ಪಠಿಸಿ

ಪ್ರತಿ ತಿಂಗಳು ನಿಮ್ಮ ಆದಾಯದ ಒಂದು ಸಣ್ಣ ಭಾಗವನ್ನು ಬಡವರಿಗೆ, ದೇವಸ್ಥಾನಗಳಿಗೆ ಅಥವಾ ಸಮಾಜಮುಖಿ ಕಾರ್ಯಗಳಿಗೆ ದಾನ ಮಾಡಿ. ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗಿ, ಹಣದ ಹರಿವು ಉತ್ತಮವಾಗುತ್ತದೆ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆಯಿದೆ.

ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವಿದ್ದರೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೀರು ಹಾಕಿ, ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿ, ಐಶ್ವರ್ಯ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.ಪ್ರತಿ ಬುಧವಾರ ಹಸುವಿಗೆ ಹಸಿರು ಹುಲ್ಲು ಅಥವಾ ಮೇವು ತಿನ್ನಿಸುವುದು ಶುಭಕರವೆಂದು ನಂಬಲಾಗಿದೆ. ಇದರಿಂದ ಕುಟುಂಬದ ದೋಷಗಳು ಕಡಿಮೆಯಾಗಿ, ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ ಎಂದು ಧಾರ್ಮಿಕ ನಂಬಿಕೆಗಳಿವೆ. 

ಮುರಿದ, ಬಿರುಕು ಬಿಟ್ಟ ಅಥವಾ ಬಳಕೆಗೆ ಅಯೋಗ್ಯವಾದ ಪಾತ್ರೆಗಳು ಮತ್ತು ವಸ್ತುಗಳನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಇಂತಹ ವಸ್ತುಗಳನ್ನು ತಕ್ಷಣವೇ ತೆಗೆದುಹಾಕುವುದು ಉತ್ತಮ.

Kishor KV

Leave a Reply

Your email address will not be published. Required fields are marked *