ಪ್ರೀತಿಸಿ ಮದ್ವೆಯಾದ ಯುವ ಜೋಡಿಗೆ ಶಾಕ್ – ಯುವಕನಿಗೆ ಪೊಲೀಸ್ ಠಾಣೆ ಮುಂದೆಯೇ ಚಾ*ಕು ಇ*ರಿತ

ಪ್ರೀತಿಸಿ ಮದ್ವೆಯಾದ ಯುವ ಜೋಡಿಗೆ ಚಾಕು ಇರಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ. ಪೊಲೀಸ್ ಠಾಣೆ ಆವರಣದಲ್ಲಿಯೇ ಹುಡುಗನಿಗೆ ಚಾಕುನಿಂದ ಇರಿದು, ಹತ್ಯೆಗೆ ಯತ್ನ ಮಾಡಲಾಗಿದೆ. ಹುಡುಗಿಯ ಸಂಬಂಧಿಕರು ಚಾಕುವಿನಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ.
22 ವರ್ಷದ ಸಿದ್ದೇಶ್ ಎಂಬಾತನೇ ಗಾಯಗೊಂಡ ಯುವಕ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿಯ ಸಿದ್ದೇಶ್ ಎಂಬಾತ, ದಾಗಿನಕಟ್ಟೆ ಗ್ರಾಮದ 18 ವರ್ಷ ವಯಸ್ಸಿನ ಲೀಲಾವತಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಪರಸ್ಪರ ಪ್ರೀತಿಸಿ ಇತ್ತೀಚಿಗೆ ಮನೆಯವರ ವಿರೋಧ ಲೆಕ್ಕಿಸದೇ ಮದ್ವೆಯಾಗಿದ್ದರು.
ಇದನ್ನೂ ಓದಿ: ಆಟೋ ಪ್ರಯಾಣದಲ್ಲಿ ಇನ್ನು ಬಾಡಿಗೆ ಕಿರಿಕಿರಿ ಇರಲ್ಲ – ದುಪ್ಪಟ್ಟು ಬಾಡಿಗೆ ವಸೂಲಿಗೆ ಸರ್ಕಾರದಿಂದ ಬ್ರೇಕ್
ಹುಡುಗಿಯ ಕಡೆಯವರಿಂದ ಜೀವ ಬೇದರಿಕೆ ಇದೆ ಎಂದು ದಾವಣಗೆರೆ ಎಸ್ಪಿಗೆ ದಂಪತಿ ದೂರು ನೀಡಿದ್ದರು. ಆದೆರ ಬಸವಾಪಟ್ಟಣ ಪೊಲೀಸ್ ಠಾಣೆಗೆ ಹೋಗುವಂತೆ ದಾವಣಗೆರೆ ಎಸ್ಪಿ ಸೂಚಿಸಿದ್ದರಂತೆ. ಅದರಂತೆ ಬಸವಾಪಟ್ಟಣ ಠಾಣೆಗೆ ಬರುತ್ತಿದ್ದಂತೆ ಹುಡುಗಿಯ ಸಂಬಂಧಿಗಳಾದ ನಾಗರಾಜ್ ಹಾಗೂ ಇತರರು ಸೇರಿ ಹಲ್ಲೆ ಮಾಡಿದ್ದಾರೆ. ಬಳಿಕ ಚಾಕುವಿನಿಂದ ದಾಳಿ ಮಾಡಿದ್ದಾರೆ. ಯುವಕ ಸಿದ್ದೇಶ್ ಕೈಗೆ ಗಂಭೀರ ಗಾಯವಾಗಿದ್ದು, ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗ್ತಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿಯ ಸಿದ್ದೇಶ್ ಮೈಸೂರಿನ ಫಾರಂಹೌಸ್ ಒಂದರಲ್ಲಿ ಕೆಲಸಕ್ಕೆ ಇದ್ದ. ಇತ್ತ ದಾಗಿನಕಟ್ಟೆ ಗ್ರಾಮದ ಲೀಲಾವತಿ, ತನ್ನ ಅಜ್ಜಿ ಮನೆಯಾದ ಕಂಚುಗಾರನಹಳ್ಳಿಯಲ್ಲಿ ವಾಸವಿದ್ದಳು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಆದರೆ ಈ ಪ್ರೀತಿಗೆ ಲೀಲಾವತಿ ಮನೆಯವರು ಒಪ್ಪಿರಲಿಲ್ಲ. ಈ ಕಾರಣಕ್ಕೆ ಜೂನ್ 30ರಂದು ಸಿದ್ದೇಶ್ ಹಾಗೂ ಲೀಲಾವತಿ ಊರಿನಿಂದ ಓಡಿ ಹೋಗಿದ್ದರು.

ನೋಡಿರಿ

