ಟಿ20 ಮಹಿಳಾ ವಿಶ್ವಕಪ್ ಕೈ ಚೆಲ್ಲಿದ ಇಂಗ್ಲೆಂಡ್ – 7ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದ ಆಸ್ಟ್ರೇಲಿಯಾ

2026ರ ಮಹಿಳಾ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ 7ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾಕ್ಕೆ 151 ರನ್‌ಗಳ ಗುರಿಯನ್ನು ನೀಡಿತು. ಇಂಗ್ಲೆಂಡ್ ನೀಡಿ ಗುರಿಯನ್ನು ಆಸ್ಟ್ರೇಲಿಯಾ ಸುಲಭವಾಗಿ ಬೆನ್ನಟ್ಟಿತ್ತು. ಇನ್ನು 17 ಎಸೆತ ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಕಳಪೆ ಆರಂಭವನ್ನು ನೀಡಿತು. ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಂದ ಸಜ್ಜುಗೊಂಡ ಇಂಗ್ಲೆಂಡ್ ಪ್ರಶಸ್ತಿ ಪಂದ್ಯದಲ್ಲಿ ರನ್ ಗಳಿಸಲು ಹೆಣಗಾಡಿತು.
ಇದನ್ನೂ ಓದಿ: ಶ್ರೇಯಸ್ ಕೈ ತಪ್ಪುತ್ತಾ ಕ್ಯಾಪ್ಟನ್ಸಿ? – 2026ರ ಸರಣಿಗಳನ್ನ ಗೆದ್ರಷ್ಟೇ ಸೇಫ್?
ಭರವಸೆಯ ಆಟಗಾರ್ತಿ ಬೆತ್ ಮೂನಿ (64) ಮತ್ತು ಫೋಬೆ ಲಿಚ್‌ಫೀಲ್ಡ್ (48) ಇವರ ಭರ್ಜರಿ ಆಟದ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ 7 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, 7ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಡ್ಯಾನಿ ವ್ಯಾಟ್-ಹಾಡ್ಜ್ ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಆದರೂ ಇವರು ಫೈನಲ್ ಪಂದ್ಯದಲ್ಲಿ 8 ರನ್ ಬಾರಿಸಿ ಔಟ್ ಆದರು. ಈ ಮೂಲಕ ಇವರು ಮಹಿಳಾ ಟಿ20 ವಿಶ್ವಕಪ್‌ನಲ್ಲಿ 300ಕ್ಕೂ ಹೆಚ್ಚು ರನ್ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಆರಂಭಿಕ ಆಟಗಾರ್ತಿ ಆಮಿ ಜೋನ್ಸ್ (6) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
5ನೇ ವಿಕೆಟ್‌ಗೆ ನ್ಯಾಟ್ ಸ್ಕೈವರ್-ಬ್ರಂಟ್ ಹಾಗೂ ಫ್ರೇಯಾ ಕೆಂಪ್ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಿತು. ಬ್ರಂಟ್ ಹಾಗೂ ಫ್ರೇಯಾ ಕೆಂಪ್ (ಅಜೇಯ 44) ಜೋಡಿ 55 ಎಸೆತಗಳಲ್ಲಿ ಅಜೇಯ 80 ರನ್ ಸೇರಿಸಿತು. ನ್ಯಾಟ್ ಸ್ಕೈವರ್-ಬ್ರಂಟ್ ಭರ್ಜರಿಯಾಗಿ ಬ್ಯಾಟ್ ಮಾಡಿದರು. ಇವರು 53 ಎಸೆತಗಳಲ್ಲಿ 5 ಬೌಂಡರಿ ಅಜೇಯ 58 ರನ್ ಸಿಡಿಸಿ ಅಬ್ಬರಿಸಿತು.

ನೋಡಿರಿ

