ಸ್ಪಿನ್ನರ್ಸ್ ಎದುರು ಸಿಡಿಯದ ತಿಲಕ್! – ನಂ.3 ಹೀರೋ ನಂ.5ನಲ್ಲಿ ಸುಸ್ತಾದ್ರಾ?
BCCI ಪ್ಲ್ಯಾನ್ ರಿವರ್ಸ್ ಆಗಿದ್ದೇಗೆ?

ಸ್ಪಿನ್ನರ್ಸ್ ಎದುರು ಸಿಡಿಯದ ತಿಲಕ್! – ನಂ.3 ಹೀರೋ ನಂ.5ನಲ್ಲಿ ಸುಸ್ತಾದ್ರಾ?BCCI ಪ್ಲ್ಯಾನ್ ರಿವರ್ಸ್ ಆಗಿದ್ದೇಗೆ?

ಟೀಂ ಇಂಡಿಯಾ ಟಿ-20ಐ ತಂಡದಲ್ಲಿ ಸದ್ಯ ವೀಕ್ ಅನ್ನಿಸ್ತಿರೋದು ಬ್ಯಾಟಿಂಗ್ ವಿಭಾಗ. ಐರ್ಲೆಂಡ್ ವಿರುದ್ಧದ ಕ್ಲೀನ್ ಸ್ವೀಪ್​ಗೂ ಇದೇ ರೀಸನ್. ಌಂಡ್ ಇಂಗ್ಲೆಂಡ್ ವಿರುದ್ಧ ಫಸ್ಟ್ ಮ್ಯಾಚಲ್ಲಿ ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ಹಾಗೇ ದುಬೆ ಬಿಟ್ರೆ ಉಳಿದವರ್ಯಾರಿಂದಲೂ ರನ್ಸ್ ಬಂದಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ ತಿಲಕ್ ವರ್ಮಾ ಸ್ಲೋ ಇನ್ನಿಂಗ್ಸ್ ತುಂಬಾನೇ ಎಫೆಕ್ಟ್ ಆಗ್ತಿದೆ. ಮಿಡಲ್ ಆರ್ಡರ್​ನಲ್ಲಿ ತಂಡಕ್ಕೆ ಅಕ್ಷರಶಃ ಭಾರವಾಗ್ತಿದ್ದಾರೆ. ನಂಬರ್ 3ನಲ್ಲಿ ಹೀರೋ ಆದವ್ರು ನಂಬರ್ 5ನಲ್ಲಿ ವೀಕ್ ಆಗಿದ್ದಾರೆ. ಅದ್ರಲ್ಲೂ ಸ್ಪಿನ್ನರ್ಸ್ ಎದುರಲ್ಲಿ ಒದ್ದಾಡಿದ್ದಾರೆ.

ಇದನ್ನೂ ಓದಿ : ದ್ರಾವಿಡ್ ಪುತ್ರನ 360 ಬ್ಯಾಟಿಂಗ್ – ಸಮಿತ್ ಆಟ ಈಗ ಫುಲ್ ಟ್ರೆಂಡ್

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಬರೋ ವೇಳೆಗೆ ಭಾರತ 8.2 ಓವರ್‌ಗಳಲ್ಲಿ 88/3 ರನ್ ಗಳಿಸಿತ್ತು. ಪ್ರತಿ ಓವರ್‌ಗೆ 10.73 ರನ್‌ಗಳಿಗಿಂತ ಹೆಚ್ಚು ಎಕಾನಮಿ ಇತ್ತು. ಆದ್ರೆ ತಿಲಕ್ ವರ್ಮಾ 13 ಎಸೆತಗಳಲ್ಲಿ 13 ರನ್ ಗಳಿಸಿ ಔಟ್ ಆಗ್ತಿದ್ದಂತೆ ರನ್ ರೇಟ್ 9.25 ಕ್ಕೆ ಇಳಿದಿತ್ತು. ಎಂಡಲ್ಲಿ ಶಿವಂ ದುಬೆ ಫಿನಿಶಿಂಗ್ ಚೆನ್ನಾಗಿ ಕೊಟ್ರು. ಬಟ್ ಈ ಇನ್ನಿಂಗ್ಸ್ ಆದ್ಮೇಲೆ ನಂಬರ್ 5ನಲ್ಲಿ ತಿಲಕ್ ಮಂಕಾಗಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

23 ವರ್ಷದ ತಿಲಕ್ ವರ್ಮಾ ಇಲ್ಲಿಯವರೆಗೆ ತಮ್ಮ 52 T20I ಗಳಲ್ಲಿ  3, 4, 5, 6, 7 ನೇ ಸ್ಥಾನದವರೆಗೂ ಬ್ಯಾಟಿಂಗ್ ಮಾಡಿದ್ದಾರೆ. 142.7 ರ ಸ್ಟ್ರೈಕ್-ರೇಟ್ ಮತ್ತು 43.44 ರ ಆವರೇಜ್​ನಲ್ಲಿ ರನ್ಸ್ ಗಳಿಸಿದ್ದಾರೆ. ಹೀಗಿದ್ರೂ ಒಂದು ಸ್ಲಾಟ್​ನಲ್ಲಿ ಸ್ಟಿಕ್ ಆನ್ ಆಗಿಲ್ಲ ಅನ್ನೋದು ಇಲ್ಲೇ  ಗೊತ್ತಾಗ್ತಿದೆ. ಆದ್ರೆ ನಂಬರ್ 5ನಲ್ಲಿ ತಿಲಕ್ ತುಂಬಾ ಡಲ್ ಆಗಿದ್ದಾರೆ. ಅದ್ರಲ್ಲೂ ಸ್ಪಿನ್ನರ್ಸ್ ಅಂತಾ ಬಂದಾಗ ತಿಲಕ್ ಸ್ಟ್ರಗಲ್ ಜಾಸ್ತಿಯಾಗಿದೆ. ಯುಕೆ  ಪ್ರವಾಸಕ್ಕೂ ಮೊದ್ಲು ತಿಲಕ್ ಸ್ಪಿನ್ನರ್‌ಗಳ ವಿರುದ್ಧ 8 ಇನ್ನಿಂಗ್ಸ್‌ಗಳಲ್ಲಿ 100 ರನ್ ಗಳಿಸಿದ್ರು. ಬಟ್ ಸ್ಪಿನ್ನರ್ಸ್ ಎದುರಲ್ಲಿ ಅವ್ರ ಸ್ಟ್ರೈಕ್​ರೇಟ್ 126.2 ಕ್ಕೆ ಇಳಿದಿದೆ. ತಿಲಕ್ ಬ್ಯಾಟಿಂಗ್ ಮಾಡಿರೋ ಬೇರೆಲ್ಲಾ ಆರ್ಡರ್​ಗಳಿಗಿಂತ ನಂಬರ್ 5ನಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ವೇಗಿಗಳ ಎದುರಲ್ಲಿ ಫಿಯರ್​ಲೆಸ್ ಆಗಿ ಆಡುವ ತಿಲಕ್ ಸ್ಪಿನ್ನರ್ಸ್ ಅಂತಾ ಬಂದಾಗ ಒದ್ದಾಡೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಇದೇ ಕಾರಣಕ್ಕೆ ಮೊದ್ಲೆಲ್ಲಾ ತಿಲಕ್​ನ ನಂಬರ್ 3ಗೆ ಪ್ರಮೋಟ್ ಮಾಡಿದ್ರು. ಆದ್ರೆ ಇಶಾನ್ ಕಿಶನ್ ತಂಡಕ್ಕೆ ಜಾಯ್ನ್ ಆದ್ಮೇಲೆ ತಿಲಕ್ ಮತ್ತೆ 5ಕ್ಕೆ ಹೋದ್ರು. ಆದ್ರೆ ಐದನೇ ಸ್ಲಾಟ್​ನಲ್ಲಿ ಉತ್ತಮ ಪ್ರದರ್ಶನ ಬರ್ತಾ ಇಲ್ಲ. ಹೀಗಾಗಿ ಬಿಸಿಸಿಐ ಪ್ಲ್ಯಾನ್ ಬ್ಯಾಕ್ ಫೈರ್ ಆಗಿರೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

Shantha Kumari

Leave a Reply

Your email address will not be published. Required fields are marked *