ಮರದ ದಿಮ್ಮಿ ಸಾಗಿಸುವ ವೇಳೆ ದಂತ ಮುರಿದುಕೊಂಡ ಅಭಿಮನ್ಯು

ಮರದ ದಿಮ್ಮಿ ಸಾಗಿಸುವ ವೇಳೆ  ದಂತ ಮುರಿದುಕೊಂಡ ಅಭಿಮನ್ಯು

 

ಮರದ ದಿಮ್ಮಿ ಸಾಗಿಸುವ ವೇಳೆ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯವಿನ ಎಡಭಾಗದ ದಂತದ ತುದಿಯ ಭಾಗ ಮುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತಿಗೋಡು ಆನೆ ಶಿಬಿರದಲ್ಲಿರುವ ಅಭಿಮನ್ಯು, ಮರದ ದಿಮ್ಮಿಗಳನ್ನು ಎಳೆಯುವ ಕಾರ್ಯದಲ್ಲಿ ತೊಡಗಿದ್ದಾಗ ದಂತದ ತುದಿಗೆ ಬಡಿದು ಮುರಿದು ದಂತ ಮುರಿದಿದೆ. ದಂತದ ತುದಿ ಸ್ವಲ್ಪ ಭಾಗ ತುಂಡಾಗಿದೆ.

ಇದನ್ನೂ ಓದಿ: 2ನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ರೆಡಿ – ಸಂಜು ಮತ್ತು ಅಭಿ ಓಪನರ್ಸ್?

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿರುವ 59 ವರ್ಷದ ಕ್ಯಾಪ್ಟನ್ ಅಭಿಮನ್ಯು ಮರದ ದಿಮ್ಮಿ ಮೇಲೆತ್ತುವ ಸಂದರ್ಭದಲ್ಲಿ ಎಡಭಾಗದ ದಂತ ಸ್ವಲ್ಪ ತುಂಡಾಗಿದೆ. ದುಬಾರೆ ಆನೆ ಕಾಳಗ ದುರಂತದಿಂದಾಗಿ ಸಾಕಾನೆ ಶಿಬಿರಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತಿಗೋಡು ಕ್ಯಾಂಪ್​ನಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಯುತ್ತಿತ್ತು. ಈ ವೇಳೆ ಬಲಭಾಗಕ್ಕೆ ಬಾಗಿದಂತೆ ಇದ್ದ ಎಡಭಾಗದ ದಂತದ ಮುಂದಿನ ಭಾಗ ತುಂಡಾಗಿದೆ.

ಪಶುವೈದ್ಯರಿಂದ ಗಜರಾಜನ ಆರೋಗ್ಯ ಪರಿಶೀಲನೆ: ಘಟನೆ ನಡೆದ ಬಳಿಕ ಕೂಡಲೇ ಪಶುವೈದ್ಯರು ಅಭಿಮನ್ಯುವನ್ನ ಪರಿಶೀಲನೆ ನಡೆಸಿದ್ದಾರೆ. ವೈದ್ಯರ ಅಭಿಪ್ರಾಯದ ಪ್ರಕಾರ, ಆನೆಗೆ ಈಗ ಯಾವುದೇ ಸಮಸ್ಯೆ ಇಲ್ಲ, ಯಾವುದೇ ಆತಂಕವಿಲ್ಲ. ಗಾಯ ಗಂಭೀರವಲ್ಲ ಎಂದು ತಿಳಿಸಿದ್ದಾರೆ.

ಈ ಸಾಲಿನ ದಸರಾ ಮಹೋತ್ಸವದಲ್ಲಿ ಅಭಿಮನ್ಯುವೇ ಅಂಬಾರಿ ಹೊರುವುದು ಖಚಿತವಾಗಿದೆ. 2020 ರಿಂದಲೂ ಅಂಬಾರಿ ಹೊರುವ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸುತ್ತಿರುವ ಅಭಿಮನ್ಯು, 2026ನೇ ಸಾಲಿನ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತರೆ ಸತತ 7ನೇ ಬಾರಿ ಅಂಬಾರಿ ಹೊತ್ತಂತೆ ಆಗಲಿದೆ. ಈ ಹಿಂದೆ ದ್ರೋಣ 18 ಬಾರಿ, ಬಲರಾಮ 13 ಬಾರಿ, ಅರ್ಜುನ ಸತತ 8 ಬಾರಿ ಅಂಬಾರಿ ಹೊತ್ತು ಸಾಧನೆ ಮಾಡಿದ್ದು, ಇದೀಗ ಹೆಚ್ಚು ಬಾರಿ ಅಂಬಾರಿ ಹೊತ್ತ ಆನೆಗಳ ಸಾಲಿನಲ್ಲಿ ಅಭಿಮನ್ಯು ಹೆಸರು ಸೇರ್ಪಡೆಯಾಗಿಲಿದೆ.

Kishor KV

Leave a Reply

Your email address will not be published. Required fields are marked *