ಭಾನುವಾರ ಬಾಡೂಟಕ್ಕೆ ಈ ಚಿಕನ್ ರೆಸಿಪಿ ಟ್ರೈ ಮಾಡಿ – ಹೇಗೆ ಮಾಡುವುದು ಗೊತ್ತಾ ಚಿಕನ್ ಕೋಫ್ತಾ

ಭಾನುವಾರ ಬಾಡೂಟಕ್ಕೆ ಈ ಚಿಕನ್ ರೆಸಿಪಿ ಟ್ರೈ ಮಾಡಿ – ಹೇಗೆ ಮಾಡುವುದು ಗೊತ್ತಾ ಚಿಕನ್ ಕೋಫ್ತಾ

ಭಾನುವಾರ ಅಂದ್ರೆ ಅದು ನಾನ್‌ವೆೆಜ್ ಡೇ.. ಬಹುತೇಕ ಭಾನುವಾರ ಮಾಂಸಹಾರದ ಅಡುಗೆ ಮಾಡ್ತಾರೆ. ಅದರಲ್ಲೂ ಚಿಕನ್‌ನಲ್ಲಿ ಸಾಕಷ್ಟು ಐಟಂ ಮಾಡಬಹುದು. ನೀವು ಭಾನುವಾರ ಚಿಕನ್ ಕೋಫ್ತಾ ಮಾಡಿ, ಅದರ ರುಚಿ ಸವಿಯಬಹುದು. ಹಾಗಿದ್ರೆ ಅದ್ದನ್ನ  ಹೇಗೆ ಮಾಡುವುದು ಅನ್ನೋದ್ದನ್ನ ನೋಡೋಣ ಬನ್ನಿ..

ಚಿಕನ್ ಕೋಫ್ತಾ ಕರಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು!

  • ಕೋಳಿ ಮಾಂಸ
  • ಕತ್ತರಿಸಿದ ಈರುಳ್ಳಿ
  • ಮೊಟ್ಟೆ
  • ಕತ್ತರಿಸಿದ ಟೊಮೆಟೊ
  • ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
  • ಮೆಣಸಿನ ಪುಡಿ
  • ಜೀರಿಗೆ ಪುಡಿ
  • ಧನ್ಯ ಪುಡಿ
  • ಅರಿಶಿನ ಪುಡಿ
  • ಕಾಳುಮೆಣಸಿನ ಪುಡಿ
  • ಕೊತ್ತಂಬರಿ ಸೊಪ್ಪು
  • ಬ್ರೆಡ್ ತುಂಡುಗಳು
  • ಉಪ್ಪು
  • ಜಾಯಿಕಾಯಿ
  • ಸ್ವಲ್ಪ ನೀರು
  • ಅಗತ್ಯಕ್ಕೆ ತಕ್ಕಷ್ಟು ಎಣ್ಣ

ಮಾಡುವ ವಿಧಾನ ಹೇಗೆ?

  • ಮೊದಲು, ಕಟ್ ಮಾಡಿದ ಚಿಕನ್ ಅನ್ನು ಚೆನ್ನಾಗಿ ತೊಳೆದು, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಮೆಣಸಿನ ಪುಡಿ, ಧನ್ಯ ಪುಡಿ, ಕರಿಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ, ಮೊಟ್ಟೆ ಮತ್ತು ಉಪ್ಪಿನೊಂದಿಗೆ ಬ್ರೆಡ್​ ಪೀಸ್​ಗಳನ್ನು ಮಿಶ್ರಣ ಮಾಡಿ.
  • ಈಗ ಈ ಮಿಶ್ರಣವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಕೋಫ್ತಾ (ಉಂಡೆ) ಆಕಾರಗೊಳಿಸಿ,  ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಈಗ ಕೋಫ್ತಾಗಳನ್ನು ಒಂದೊಂದಾಗಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿದು, ನಂತರ, ಅವುಗಳನ್ನು ತೆಗೆದುಹಾಕಿ.
  • ಬಳಿಕ ಅದೇ ಬಾಣಲೆಗೆ ಸ್ವಲ್ಪ ಹೆಚ್ಚು ಎಣ್ಣೆ ಹಾಕಿ ಕತ್ತರಿಸಿದ ಟೊಮೆಟೊ ಹಾಕಿ. ಟೊಮೆಟೊ ಮೃದುವಾದಾಗ, ಮೆಣಸಿನಕಾಯಿ, ಧನ್ಯಪುಡಿ ಮತ್ತು ಅರಿಶಿನ ಪುಡಿಯನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿ.
  • ನಂತರ ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಮತ್ತು ಗರಂ ಮಸಾಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಅಗತ್ಯವಿರುವಷ್ಟು ನೀರು ಸೇರಿಸಿ. ಮಿಶ್ರಣ ಗಟ್ಟಿಯಾದಾಗ ಹುರಿದಿಟ್ಟುಕೊಂಡಿದ್ದ ಕೋಫ್ತಾಗಳನ್ನು ಸೇರಿಸಿ. ಸ್ವಲ್ಪ ಸಕ್ಕರೆ ಮತ್ತು ಜಾಯಿಕಾಯಿ ಪುಡಿಯನ್ನು ಸೇರಿಸಿ ಕುದಿಸಿ. ಸಾರು ಕುದಿಯಲು ಪ್ರಾರಂಭಿಸಿದಾಗ, ಉರಿಯನ್ನು ಕಡಿಮೆ ಮಾಡಿ ಬೇಯಿಸಿ.
    ಕೊನೆಗೆ ಬಿಸಿ ಅನ್ನದೊಂದಿಗೆ ಚಿಕನ್ ಕೋಫ್ತಾ ಕರಿಯನ್ನು ಪ್ಲೇಟ್​ ಮೇಲೆ ಸರ್ವ್​ ಮಾಡಿ.

Kishor KV

Leave a Reply

Your email address will not be published. Required fields are marked *