ಗಂಭೀರ್ ಕೋಚ್ ಕುರ್ಚಿಗೆ ಕುತ್ತು – ENGನಲ್ಲಿ ಗೆಲ್ಲದಿದ್ರೆ ಬ್ಯಾಕ್ ಫೈಯರ್
ಟೆಸ್ಟ್, ODI ಶಾಪ T-20Iಗೂ ಬಂತಾ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20ಐ ಸರಣಿಯ ಫಸ್ಟ್ ಮ್ಯಾಚ್ ಮಳೆಗೆ ವಾಶ್ ಔಟ್ ಆಗಿದ್ರಿಂದ ಸರಣಿ ಗೆಲ್ಬೇಕಂದ್ರೆ ಯಾವುದೇ ಟೀಂ 3 ಮ್ಯಾಚ್ ವಿನ್ ಆಗ್ಲೇಬೇಕು. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ್ಮೇಲೆ ಭಾರತ ಮೊದಲ ಸರಣಿ ಕ್ಲೀನ್ ಸ್ವೀಪ್ ಆಗಿದ್ರೂ ಅಟ್ಲೀಸ್ಟ್ ಎರಡನೇ ಸರಣಿನಾದ್ರೂ ಗೆದ್ದು ಕಂ ಬ್ಯಾಕ್ ಮಾಡ್ಬೇಕು. ಅಟ್ ದಿ ಸೇಮ್ ಟೈಂ ಹೆಡ್ ಕೋಚ್ ಗೌತಮ್ ಗಂಭೀರ್ ಪಾಲಿಗೂ ಮಸ್ಟ್ ವಿನ್ ಸಿರೀಸ್ ಆಗುತ್ತೆ.
ಇದನ್ನೂ ಓದಿ : IND Vs SL ಟೆಸ್ಟ್ ಗೆ ಮುಹೂರ್ತ – 2 ಮ್ಯಾಚ್.. ಗೆದ್ರಷ್ಟೇ WTC ರೇಸ್
ಕಳೆದ ಎರಡು ವರ್ಷಗಳಿಂದ ಟೆಸ್ಟ್ ಫಾರ್ಮೆಟ್ನ ಹೀನಾಯ ಸೋಲುಗಳ ಬಳಿಕ ಹೆಡ್ ಕೋಚ್ ಗೌತಮ್ ಗಂಭೀರ್ ತೀವ್ರ ಟೀಕೆಗೆ ಒಳಗಾಗಿದ್ರು. ಏಕದಿನ ಮಾದರಿಯಲ್ಲೂ ಐತಿಹಾಶಿಕ ಸೋಲುಗಳನ್ನ ಭಾರತ ಕಂಡಿದೆ. ಈಗ ಟಿ-20ಐ ಸರಣಿಗಳೂ ಕೈತಪ್ಪಿ ಹೋದ್ರೆ ಗಂಭೀರ್ ಕೋಚ್ ಸ್ಥಾನದಲ್ಲಿ ಬೇಕಾ ಬೇಡ್ವಾ ಅನ್ನೋ ಚರ್ಚೆಗಳು ಶುರುವಾಗುತ್ತೆ. ಹಾಗಂತ ಇದೊಂದೇ ಸರಣಿ ರಿಲಸ್ಟ್ ಅಲ್ಲ. ಈ ಹಿಂದಿನ ಸಾಕಷ್ಟು ಡ್ಯಾಮೇಜ್ಗಳು ಗಂಭೀರ್ ಫ್ಯೂಚರ್ ಮತ್ತೆ ಅಲುಗಾಡತೊಡಗಿದೆ.
ಗಂಭೀರ್ ಅಂಡರ್ ನಲ್ಲಿ ದಶಕಗಳ ಪಾರುಪತ್ಯ ಅಂತ್ಯ!
ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಭಾರತ ಎರಡು ಐಸಿಸಿ ಟ್ರೋಫಿಗಳನ್ನ ಗೆದ್ದಿದೆ. 2025ರ ಚಾಂಪಿಯನ್ಸ್ ಟ್ರೋಫಿ ಹಾಗೇ 2026ರ ಟಿ-20 ವಿಶ್ವಕಪ್. ಆದ್ರೆ ಸೋಲುಗಳ ವಿಚಾರಗಳಲ್ಲಿ ಭಾರತ ಕಟ್ಟಿದ್ದ ದಾಖಲೆಗಳ ಕೋಟೆಯೇ ಛಿದ್ರ ಛಿದ್ರವಾಗಿದೆ. ದಶಕಗಳ ಪಾರುಪತ್ಯ ಅಂತ್ಯವಾಗಿದೆ. ಮೂರೂ ಮಾದರಿಯ ಐತಿಹಾಸಿಕ ಸೋಲುಗಳು, ಸೀನಿಯರ್ ಪ್ಲೇಯರ್ಗಳ ಜೊತೆಗಿನ ಭಿನ್ನಾಭಿಪ್ರಾಯ, ಸ್ಟ್ರಾಟರ್ಜಿಗಳಿಂದಾಗಿ ಭಾರತದ ಮುಖ್ಯ ಕೋಚ್ ಹುದ್ದೆಗೆ ಅನ್ಫಿಟ್ ಅನ್ನೋ ಮಾತುಗಳು ಕೇಳಿ ಬಂದಿದ್ವು. ಈಗ ಇಂಗ್ಲೆಂಡ್ ಸರಣಿ ಗಂಭೀರ್ ಪಾಲಿಗೆ ಅತಿದೊಡ್ಡ ಪರಿಣಾಮ ಬೀರಲಿದೆ.
ಇಂಗ್ಲೆಂಡ್ ಸರಣಿ ಗೆಲ್ಲಲೇಬೇಕಿದೆ ಭಾರತ!
ಟಿ-20 ವಿಶ್ವಕಪ್ ಗೆದ್ದ ಮೇಲೆ ಭಾರತ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳನ್ನ ಸೋತು ಕ್ಲೀನ್ ಸ್ವೀಪ್ ಆಗಿದ್ರಿಂದ ಗಂಭೀರ್ ವಿರುದ್ದ ಸಾಕಷ್ಟು ಟೀಕೆಗಳು ವ್ಯಕ್ತವಾಗ್ತಿವೆ. ಈಗ ಸರಣಿಯನ್ನೂ ಸೋತ್ರೆ ಕೋಚ್ ಹುದ್ದೆ ಮತ್ತೊಮ್ಮೆ ಅಲುಗಾಡಲಿದೆ. ಹಾಗಂತ ಇದೊಂದೇ ಸರಣಿ ಅಲ್ಲ. ಈ ಹಿಂದಿನ ಸಾಕಷ್ಟು ಸೋಲುಗಳೂ ಮುನ್ನಲೆಗೆ ಬರಲಿವೆ. ಅಲ್ದೇ ಕೆಲ ವಿಚಾರಗಳಲ್ಲಿ ಗಂಭೀರ್ ನಿರ್ಧಾರಗಳೇ ಅವ್ರಿಗೆ ಸೆಟ್ ಬ್ಯಾಕ್ ಆಗಬಹುದು.
ಗಂಭೀರ್ ಮೇಲೆ ತೂಗುಗತ್ತಿ!
ದಶಕಗಳ ಬಳಿಕ ಭಾರತ ಕಂಡಂತಹ ಐತಿಹಾಸಿಕ ಸೋಲುಗಳು
ಸೂಪರ್ ಸ್ಟಾರ್ ಸಂಸ್ಕೃತಿ ಬಿಡ್ತೀನಿ ಅಂತಾ ಸೀನಿಯರ್ಸ್ ಜೊತೆ ಕಿರಿಕ್
ಪದೇ ಪದೆ ಟೀಂ ಬದಲಾವಣೆ ಹಾಗೂ ಸ್ಲಾಟ್ ಗಳ ವಿಚಾರದಲ್ಲಿ ಚೇಂಜಸ್
ತಂಡದ ಆಯ್ಕೆ ವಿಚಾರದಲ್ಲಿ ಬೇಕಾದ ಆಟಗಾರರಿಗೆ ಮಾತ್ರ ಪ್ರಿಯಾರಿಟಿ
ಅಗತ್ಯಕ್ಕಿಂತ ಜಾಸ್ತಿ ಆಲ್ ರೌಂಡರ್ ಗಳ ಬಳಕೆ ಎಂದಿರುವ ಮಂಜ್ರೇಕರ್
ಹೀಗೆ ಗಂಭೀರ್ ಕೋಚ್ ಆದ್ಮೇಲೆ ಅವ್ರ ಕೆಲ ನಿರ್ಧಾರಗಳ ಬಗ್ಗೆ ಅಸಮಾಧಾನ ಇದ್ದೇ ಇದೆ. ಈಗ ತಂಡದ ಪ್ರದರ್ಶನವೂ ಹಳ್ಳ ಹಿಡಿದ್ರೆ ಗಂಭೀರ್ ಕೋಚ್ ಆಗಿ ಬೇಕಾ ಬೇಡ್ವಾ ಎನ್ನುವಂಥ ಚರ್ಚೆಗಳು ಶುರುವಾಗುತ್ತೆ. ಸೋ ಇಂಗ್ಲೆಂಡ್ ವಿರುದ್ಧದ ಸರಣಿ ಗೆಲ್ಲೋದು ಗೌತಮ್ ಗಂಭೀರ್ಪಾಲಿಗೂ ತುಂಬಾನೇ ಮುಖ್ಯ.

ನೋಡಿರಿ

