4 IPL ಟೀಂ ನಾಯಕರಿಗೆ ಕೊಕ್ – DCಗೆ ರಾಹುಲ್.. KKRಗೆ ಹಾರ್ದಿಕ್?
ಗೋಯೆಂಕಾ ಕೋಟೆಗೆ ವಿದೇಶಿ ಸಾರಥಿ?

ಟೀಂ ಇಂಡಿಯಾ ಅಭಿಮಾನಿಗಳಿಗೆ ಅತಿದೊಡ್ಡ ಕ್ರಿಕೆಟ್ ಹಬ್ಬ ಅಂದ್ರೆ ಅದು ಐಪಿಎಲ್. ಎರಡು ತಿಂಗಳು ಫುಲ್ ಎಂಟರ್ಟೈನ್ಮೆಂಟ್. ಲೋಕಲ್ ಪ್ಲೇಯರ್ಸ್, ಟೀಂ ಇಂಡಿಯಾ ಲೆಜೆಂಡ್ಸ್, ಇಂಟರ್ ನ್ಯಾಷನಲ್ ಸ್ಟಾರ್ಸ್ ಹೀಗೆ ಕಂಪ್ಲೀಟ್ ಕ್ರಿಕೆಟ್ ಲೋಕವೇ ಇಲ್ಲಿ ಸಮಾಗಮ ಆಗಿರುತ್ತೆ. 2026ರ ಆವೃತ್ತಿ ಕೂಡ ಹೈವೋಲ್ಟೇಜ್ ಸೀಸನ್ಗೆ ಸಾಕ್ಷಿಯಾಗಿತ್ತು. ಬಟ್ ಇದಕ್ಕೂ ನೆಕ್ಸ್ಟ್ ಲೆವೆಲ್ನಲ್ಲಿ 2027ರ ಐಪಿಎಲ್ ಇರುತ್ತೆ ಅನ್ನೋದಕ್ಕೆ ಈಗಲೇ ಹಿಂಟ್ ಸಿಕ್ಕಿದೆ.
ಇದನ್ನೂ ಓದಿ : ಭಾರತವೇ ಸೂಪರ್ ಸ್ಟ್ರಾಂಗ್ ಎಂದ PAK -ವೈಟ್ ಬಾಲ್ ಕ್ರಿಕೆಟ್ ನಲ್ಲಿ ಮುಟ್ಟೋಕಾಗಲ್ವಾ?
ಪ್ರತೀ ಐಪಿಎಲ್ ಸೀಸನ್ ಆದ್ಮೇಲೂ ಫ್ರಾಂಚೈಸಿಗಳಲ್ಲಿ ಸರ್ಜರಿಗಳು ನಡೆಯುತ್ತಾನೇ ಇರುತ್ತೆ. ಅದು ಚಾಂಪಿಯನ್ ಟೀಂ ಆದ್ರೂ ಅಷ್ಟೇ.. ಬಾಟಮ್ನಲ್ಲಿದ್ದ ತಂಡ ಆದ್ರೂ ಅಷ್ಟೇ. ಒಂದಷ್ಟು ಪ್ಲೇಯರ್ಸ್ ಆಕಡೆ ಈ ಕಡೆ ಆಗ್ತಾರೆ.. ಹೊಸಬರು ಬರ್ತಾರೆ.. ಯಾವ ಸ್ಲಾಟ್ ಅಥವಾ ಯಾವ ರೋಲ್ ವೀಕ್ ಅನ್ಸುತ್ತೋ ಅದನ್ನ ಫುಲ್ಫಿಲ್ ಮಾಡಿಕೊಳ್ತಾರೆ. ಅಥವಾ ಹೊಸ ಆಪ್ಶನ್ ನೋಡಿಕೊಳ್ತಾರೆ. ಸೋ ಮುಂದಿನ ಆವೃತ್ತಿಗೂ ಬದಲಾವಣೆಗಳು ಪಕ್ಕಾ. ಅದ್ರಲ್ಲೂ ನಾಲ್ಕು ತಂಡಗಳಿಗೆ ಹೊಸ ನಾಯಕರ ಪಟ್ಟಾಭಿಷೇಕವಾಗಲಿದೆ. ಆಲ್ರೆಡಿ ಒಂದು ಟೀಮ್ನಲ್ಲಿ ಕ್ಯಾಪ್ಟನ್ ತಂಡವನ್ನೇ ಬಿಟ್ಟು ಹೊರನಡೆದಿದ್ದಾರೆ. ಅಟ್ ದಿ ಸೇಮ್ ಟೀಂ ಇನ್ನೂ ಮೂರು ಟೀಮ್ಗಳಲ್ಲಿ ಅತಿದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ಯಾವೆಲ್ಲಾ ಫ್ರಾಂಚೈಸಿಗಳು ಹೊಸ ಕ್ಯಾಪ್ಟನ್ ಜೊತೆ 20ನೇ ಸೀಸನ್ಗೆ ಕಾಲಿಡ್ತಾರೆ.
ನಂಬರ್ 1 – ಲಕ್ನೋ ಸೂಪರ್ ಜೇಂಟ್ಸ್
2 ವರ್ಷಗಳಿಂದ ನಾಯಕನಾಗಿದ್ದ ರಿಷಭ್ ಪಂತ್ ತಂಡದಿಂದಲೇ ಔಟ್
ಹೊಸ ನಾಯಕನ ಹುಡುಕಾಟದಲ್ಲಿರುವ ಮಾಲೀಕ ಸಂಜೀವ್ ಗೋಯೆಂಕಾ
ವಿದೇಶಿ ಕ್ಯಾಪ್ಟನ್ ಸಾಧ್ಯತೆ, ಪೋರನ್, ಮಾರ್ಷ್ & ಮಾರ್ಕ್ರಂ ಫೈಟ್
ನಂಬರ್ 2 – ಡೆಲ್ಲಿ ಕ್ಯಾಪಿಟಲ್ಸ್
ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ತಂಡದಲ್ಲಿ ಕಳಪೆ ಪ್ರದರ್ಶನ
ರಿಷಬ್ ಪಂತ್ ಲಕ್ನೋ ತಂಡದಿಂದ ಡೆಲ್ಲಿ ತಂಡಕ್ಕೆ ವಾಪರ್
ಕೆಎಲ್ ರಾಹುಲ್ ಗೆ ಕ್ಯಾಪ್ಟನ್ಸಿ ನೀಡುತ್ತಾರೆ ಎನ್ನುವ ವರದಿ
ನಂಬರ್ 3 – ಮುಂಬೈ ಇಂಡಿಯನ್ಸ್
ಪಾಂಡ್ಯ ನಾಯಕತ್ವದಲ್ಲಿ ಕಳೆದ 2 ವರ್ಷಗಳಿಂದ ಕಳಪೆ ಪ್ರದರ್ಶನ
ಮುಂಬೈ ಫ್ರಾಂಚೈಸಿಯಿಂದ ಹೊರಬರಲು ನಿರ್ಧಾರ ಮಾಡಿರುವ ಪಾಂಡ್ಯ
ತಿಲಕ್ ವರ್ಮಾ ಅಥವಾ ಜಸ್ಪ್ರೀತ್ ಬುಮ್ರಾಗೆ ನಾಯಕತ್ವದ ಸಾಧ್ಯತೆ
ನಂಬರ್ 4 – ಕೊಲ್ಕತ್ತಾ ನೈಟ್ ರೈಡರ್ಸ್
ಅಜಿಂಕ್ಯ ರಹಾನೆ ಕ್ಯಾಪ್ಟನ್ಸಿಯಲ್ಲಿ 2 ಸೀಸನ್ ಗಳಲ್ಲಿ ಕೊಲ್ಕತ್ತಾ ವೀಕ್
ರಿಂಕು ಸಿಂಗ್ ವೈಸ್ ಕ್ಯಾಪ್ಟನ್ ಇದ್ರೂ ನಾಯಕತ್ವ ನೀಡೋದು ಕಷ್ಟ
ಹಾರ್ದಿಕ್ ಪಾಂಡ್ಯಗೆ ಕೊಲ್ಕತ್ತಾ ತಂಡದ ಕ್ಯಾಪ್ಟನ್ಸಿ ಆಫರ್ ನೀಡಿದ್ರಾ?

ನೋಡಿರಿ

