ದ್ರಾವಿಡ್ ಪುತ್ರನ 360 ಬ್ಯಾಟಿಂಗ್ – ಸಮಿತ್ ಆಟ ಈಗ ಫುಲ್ ಟ್ರೆಂಡ್
ರಾಹುಲ್ ದ್ರಾವಿಡ್ 2.O ಎಂದಿದ್ದೇಕೆ?

ದ್ರಾವಿಡ್ ಪುತ್ರನ 360 ಬ್ಯಾಟಿಂಗ್ – ಸಮಿತ್ ಆಟ ಈಗ ಫುಲ್ ಟ್ರೆಂಡ್ರಾಹುಲ್ ದ್ರಾವಿಡ್ 2.O ಎಂದಿದ್ದೇಕೆ?

ಬ್ಯಾಟಿಂಗ್ ಹಾಗೇ ಬಿಹೇವಿಯರ್ ಎರಡ್ರಲ್ಲೂ ಗೋಲ್ಡನ್ ಪ್ಲೇಯರ್ ಅಂದ್ರೆ ಅದು ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್. ಆಟಗಾರನಾಗಿ ಹಾಗೇ ಕೋಚ್ ಆಗಿ ಟೀಂ ಇಂಡಿಯಾವನ್ನ ಅತಿದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಐಪಿಎಲ್​ನಲ್ಲೂ ಕೂಡ ಅವ್ರ ಹೆಜ್ಜೆಗುರುತುಗಳಿವೆ. ಇದೀಗ ಅವ್ರ ಪುತ್ರ ಕೂಡ ಅಪ್ಪನ ದಾರಿಯಲ್ಲೇ ಸಾಗುತ್ತಿದ್ದಾರೆ. ಸಮಿತ್ ದ್ರಾವಿಡ್ ಆಟ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ : ವೈಭವ್ ಸೂರ್ಯವಂಶಿ ಬೆಂಚ್ ಕಾದಿದ್ದಕ್ಕೆ ಟೀಕೆ – ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಬಿಸಿಸಿಐ ಸಮರ್ಥನೆ

ಭಾರತ ತಂಡದ ಲೆಜೆಂಡರಿ ಹಾಗೇ ದಿ ವಾಲ್ ಅಂತಾನೇ ಕರೆಸಿಕೊಳ್ಳೋ ರಾಹುಲ್ ದ್ರಾವಿಡ್ ಅವ್ರ ಪುತ್ರ ಸಮಿತ್ ದ್ರಾವಿಡ್ ಈಗ ಮೈದಾನದಲ್ಲಿ ಅಬ್ಬರಿಸಿದ್ದಾರೆ. ಅದೂ ಕೂಡ 360 ಡಿಗ್ರಿ ಌಂಗಲ್​ನಲ್ಲಿ ಬ್ಯಾಟಿಂಗ್ ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ ಮಹಾರಾಜ ಟ್ರೋಫಿ ಟೂರ್ನಿ ಆರ್ಭಟ ಜೋರಾಗಿದೆ. ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅವರು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಪರ ಆಡ್ತಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಮ್ಯಾಚ್ ಬಳಿಕ ಸಮಿತ್ ಫುಲ್ ಟ್ರೆಂಡಿಂಗ್​ನಲ್ಲಿ್ದಾರೆ.  23 ಎಸೆತಗಳಲ್ಲಿ 32 ರನ್ಸ್ ಬಾರಿಸಿದ ಸಮಿತ್ ಬೆಂಗಳೂರು ಗೆಲುವಿಗೆ ಕಾರಣರಾದ್ರು. ಬಟ್ ಬ್ಯಾಟಿಂಗ್ ಟೈಮಲ್ಲಿ ಬ್ಯಾಕ್-ಫುಟ್ ಕಟ್, ಲಾಫ್ಟೆಡ್ ಡ್ರೈವ್ ಮತ್ತು ಪುಲ್ ಶಾಟ್‌ಗಳು ಅವರ ತಂದೆ ರಾಹುಲ್ ದ್ರಾವಿಡ್ ಅವರ ಆಟದ ಶೈಲಿಯನ್ನು ನೆನಪಿಸಿದೆ. ಸೋಶಿಯಲ್ ಮೀಡಿಯಾದಲ್ಲಂತೂ “360-ಡಿಗ್ರಿ” ಬ್ಯಾಟಿಂಗ್ ವಿಡಿಯೋಗಳು ವೈರಲ್ ಆಗಿವೆ.

ಬಾಲ್ಯದಿಂದಲೇ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ ಸಮಿತ್!

ಚೈಲ್ಡ್ ವುಡ್ ಡೇಸ್​ನಿಂದಲೂ ಸಮಿತ್ ಅದ್ಭುತ ಪ್ರದರ್ಶನಗಳನ್ನ ನೀಡ್ತಾ ಬಂದಿದ್ದಾರೆ. ಮಾಲ್ಯ ಅದಿತಿ ಇಂಟರ್‌ನ್ಯಾಷನಲ್ ಸ್ಕೂಲ್ ಪರ ಆಡುವಾಗ ಸಮಿತ್ ಜೂನಿಯರ್ ಕ್ರಿಕೆಟ್‌ನಲ್ಲಿ ಭಾರೀ ಸದ್ದು ಮಾಡಿದ್ದರು. ಅಂಡರ್-14 ಅಂತರ ವಲಯ ಟೂರ್ನಿಯಲ್ಲಿ ಧಾರವಾಡ ವಲಯದ ವಿರುದ್ಧ 201 ರನ್ ಮತ್ತು ಬಿಟಿಆರ್ ಶೀಲ್ಡ್ ಟೂರ್ನಿಯಲ್ಲಿ ಕೇವಲ 144 ಎಸೆತಗಳಲ್ಲಿ 211 ರನ್* ಸಿಡಿಸಿ ತಂದೆಯಂತೆಯೇ ಸುದೀರ್ಘ ಇನಿಂಗ್ಸ್ ಆಡುವ ಸಾಮರ್ಥ್ಯ ಪ್ರದರ್ಶಿಸಿದ್ದರು. ಗೋವಾ ವಿರುದ್ಧದ ಅಂಡರ್-14 ಪಂದ್ಯದಲ್ಲಿ 7 ರನ್‌ಗೆ 2 ವಿಕೆಟ್ ಪಡೆದು, ನಂತರ ಬ್ಯಾಟಿಂಗ್‌ನಲ್ಲಿ ಅಜೇಯ 86 ರನ್ ಗಳಿಸಿ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದರು. ಹಾಗೇ ಕರ್ನಾಟಕ ತಂಡ ಅಂಡರ್-19 ಮಟ್ಟದ ಪ್ರತಿಷ್ಠಿತ ಕೂಚ್ ಬೆಹಾರ್ ಟ್ರೋಫಿ ಗೆಲ್ಲುವಲ್ಲಿ ಸಮಿತ್ ಪ್ರಮುಖ ಪಾತ್ರ ವಹಿಸಿದ್ದರು.ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು 362 ರನ್ ಗಳಿಸಿದ್ದಲ್ಲದೆ, ಮಧ್ಯಮ ವೇಗದ ಬೌಲಿಂಗ್ ಮೂಲಕ 16 ವಿಕೆಟ್‌ಗಳನ್ನು ಕಬಳಿಸಿದ್ರು. ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಅವರು ಗಳಿಸಿದ 98 ರನ್ ಅವರ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್‌ಗಳಲ್ಲಿ ಒಂದಾಗಿದೆ. ದೇಶಿ ಕ್ರಿಕೆಟ್‌ನ ಸರಣಿ ಯಶಸ್ಸಿನ ಬೆನ್ನಲ್ಲೇ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ಅಂಡರ್-19 ತಂಡಕ್ಕೆ ಮೊದಲ ಬಾರಿಗೆ ಕರೆ ಬಂದಿತ್ತು. ಆದರೆ ದುರದೃಷ್ಟವಶಾತ್ ಮೊಣಕಾಲಿನ ಗಾಯದ ಕಾರಣದಿಂದ ಸರಣಿಯಿಂದ ಹೊರಗುಳಿಯಬೇಕಾಯಿತು. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಮತ್ತೆ ದೇಶಿ ಅಖಾಡದಲ್ಲಿ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ಡೊಮೆಸ್ಟಿಕ್​ನಲ್ಲಿ ಸಮಿತ್ ನೀಡ್ತಿರೋ ಪ್ರದರ್ಶನ ಅಭಿಮಾನಿಗಳಿಗೂ ಖುಷಿ ನೀಡ್ತಿದ್ದು ಅಪ್ಪನಂತೆಯೇ ಮಗ ಎಂದು ಅಪ್ರಿಶಿಯೇಟ್ ಮಾಡ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *