ಗೌತಮ್ ವಿರುದ್ಧ ಸೇಡುತೀರಿಸಿಕೊಳ್ಳಲು ಶಕುಂತಲಾ ಶಪಥ – ಕೇಡಿ ಜೇಡಿ ಜೊತೆ ಕೈ ಜೋಡಿಸಿದ ಶಕುಂತಲಾ

ಅಮೃತಧಾರೆ ಧಾರವಾಹಿ ಮತ್ತೊಮ್ಮೆ ರೋಚಕ ತಿರುವು ಪಡೆದುಕೊಂಡಿದೆ. ಗೌತಮ್ ಮಲತಾಯಿ ಶಕುಂತಲಾ ಬದಲಾಗಿಲ್ಲ. ಮತ್ತೆ ತನ್ನ ಅಸಲಿ ರೂಪ ತೋರಿಸಿದ್ದಾಳೆ ಖಳನಾಯಕಿ ಶಕುಂತಲಾ.
ಇದನ್ನೂ ಓದಿ:ರಾಯನ ಸುತ್ತ ಬ್ಯೂಟಿಗಳದ್ದೇ ಕಾರುಬಾರು – ಟಾಕ್ಸಿಕ್ ಸಿನಿಮಾದ ಲೇಡಿಸ್ & ಲೇಡಿಸ್ ಟೀಸರ್ ಔಟ್!
ಅಮೃತಧಾರೆ ಸೀರಿಯಲ್ ಮುಗಿಯುತ್ತಾ?, ಕುತಂತ್ರಿ ಶಕುಂತಲಾ ಬದಲಾಗಿಯಾಯ್ತು. ಅವಳಿ ಮಕ್ಕಳು ಗೌತಮ್ ಭೂಮಿಕಾ ಮಡಿಲು ಸೇರಿದ್ದಾಯ್ತು. ಗೌತಮ್ ತನ್ನ ಸಾಮ್ರಾಜ್ಯವನ್ನು ಮರಳಿ ಪಡೆದಾಯ್ತು. ಇನ್ನೇನು ಕಥೆ ಸುಖಾಂತ್ಯ ಅಂತಾ ವೀಕ್ಷಕರು ಅಂದುಕೊಂಡಿದ್ದೇ ತಡ ನೋಡಿ. ಮತ್ತೊಮ್ಮೆ ಸೀರಿಯಲ್ ಕಥೆಗೆ ಟ್ವಿಸ್ಟ್ ಸಿಕ್ಕಿದೆ. ಬದಲಾಗಿದ್ದೇನೆಂದು ನಾಟಕವಾಡಿದ್ದ ಶಕುಂತಲಾ ಮತ್ತೆ ಖಳನಾಯಕಿಯ ಖದರ್ ತೋರಿಸಿದ್ದಾರೆ. ಝೀ ವಾಹಿನಿಯಲ್ಲಿ ಅಮೃತಧಾರೆ ಸೀರಿಯಲ್‌ನ ಹೊಸ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಶಕುಂತಲಾ ತನ್ನ ಸೇಡಿನ ಬುದ್ಧಿಯನ್ನು ತೋರಿಸಿದ್ದಾರೆ.
ಗೌತಮ್ ಮತ್ತು ಭೂಮಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಶಕುಂತಲಾ ಶಪಥ ಮಾಡಿದ್ದಾಳೆ. ಶಕುಂತಲಾ ಒಮ್ಮೆಲೆ ಸಂಪೂರ್ಣವಾಗಿ ಬದಲಾದಂತೆ ಕಥೆ ಸಾಗಿತ್ತು. ತನ್ನ ಸ್ವಂತ ಮಗ ಜಯದೇವ್ ಮಾಡಿದ ತಪ್ಪುಗಳ ವಿರುದ್ಧವೇ ತಿರುಗಿಬಿದ್ದು, ತಾನೊಬ್ಬ ಆದರ್ಶ ತಾಯಿ ಆಗುತ್ತೇನೆ ಎಂದು ಶಕುಂತಲಾ ಪಾತ್ರ ತೋರಿಸಿಕೊಟ್ಟಿತ್ತು. ಆದರೆ, ಈಗ ಬಿಡುಗಡೆಯಾಗಿರುವ ಹೊಸ ಪ್ರೋಮೋದಲ್ಲಿ ಜೈಲಿನಲ್ಲಿದ್ದ ಜಯದೇವ್‌ಗೆ ಯಾರೋ ಬೇಲ್ ಕೊಡಿಸಿ ಬಿಡುಗಡೆ ಮಾಡಿಸುತ್ತಾರೆ. ಆಚೆ ಬಂದು ನೋಡಿದಾಗ ಅಲ್ಲಿ ಶಾಕುಂತಲಾ ನಿಂತಿರುತ್ತಾಳೆ. ‘ಅಮ್ಮಾ ನೀನೇ ನನಗೆ ಬೇಲ್ ಕೊಡಿಸಿದ್ದಾ?’ ಎಂದು ಜಯದೇವ್ ಆಶ್ಚರ್ಯದಿಂದ ಕೇಳಿದಾಗ, ಶಾಕುಂತಲಾ ತನ್ನ ಕ್ರೂರ ನಗುವಿನೊಂದಿಗೆ ಅಸಲಿ ಸತ್ಯವನ್ನು ಬಿಚ್ಚಿಡುತ್ತಾಳೆ. ‘ಇಷ್ಟು ದಿನ ನೀನು ನೋಡಿದ್ದಾವುದೂ ನಿಜವಲ್ಲ ಜಯದೇವ್, ಅದೆಲ್ಲಾ ನಾನು ಆಡಿದ ನಾಟಕ! ಇನ್ಮೇಲೆ ಶಾಕುಂತಲಾಳ ನಿಜವಾದ ಮುಖ ಏನೆಂದು ತೋರಿಸ್ತೀನಿ’ ಎನ್ನುತ್ತಾಳೆ. ಈ ಮೂಲಕ ಶಕುಂತಲಾ ತಾನು ಯಾವುದೇ ಕಾರಣಕ್ಕೂ ಬದಲಾಗಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ.
ಗೌತಮ್ ಮತ್ತು ಭೂಮಿಕಾ ಜೋಡಿಯನ್ನು ಸರ್ವನಾಶ ಮಾಡಲು ತಾನು ಮತ್ತೆ ಹಳೆ ರೂಪಕ್ಕೆ ಮರಳಿರುವುದಾಗಿ ಜಯದೇವ್ ಮುಂದೆ ವಿವರಿಸಿದ್ದಾಳೆ. ಅಲ್ಲಿಗೆ ಗೌತಮ್ ವಿರುದ್ಧ ಕೇಡಿ ಜೇಡಿ ಜೊತೆ ಶಕುಂತಲಾ ಸೇಡು ತೀರಿಸಿಕೊಳ್ಳಲು ರೆಡಿಯಾಗಿದ್ದಾಳೆ ಅನ್ನೋದು ಗೊತ್ತಾಗಿದೆ. ಸೀರಿಯಲ್ ಇನ್ನೇನು ಸುಖಾಂತ್ಯ ಕಾಣಲಿದೆ ಎಂದು ವೀಕ್ಷಕರು ಅಂದುಕೊಂಡಿರುವಾಗಲೇ ಕಥೆಯಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಥೆ ಮತ್ತೊಂದು ರೂಪದಲ್ಲಿ ಸಾಗಲಿದೆ.

ನೋಡಿರಿ

