ವೈಭವ್ ಸೂರ್ಯವಂಶಿ ಬೆಂಚ್ ಕಾದಿದ್ದಕ್ಕೆ ಟೀಕೆ – ಮ್ಯಾನೇಜ್ಮೆಂಟ್ ನಿರ್ಧಾರಕ್ಕೆ ಬಿಸಿಸಿಐ ಸಮರ್ಥನೆ

ಇಂಗ್ಲೆಂಡ್ ಮತ್ತು ಇಂಡಿಯಾ ನಡುವೆ ಟಿ20 ಸರಣಿ ನಡೆಯುತ್ತಿದೆ. ಬಾಸ್ ಬೇಬಿ ವೈಭವ್ ಸೂರ್ಯವಂಶಿ ತಂಡಕ್ಕೆ ಸೆಲೆಕ್ಟ್ ಆದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಾಗಿತ್ತು. ಆದರೆ, ವಂಡರ್ ಕಿಡ್ಗೆ ಪ್ಲೇಯಿಂಗ್ ಲೆವೆನ್ನಲ್ಲಿ ಇನ್ನೂ ಚಾನ್ಸ್ ಸಿಕ್ಕಿರಲಿಲ್ಲ. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಪರ ಬಿಸಿಸಿಐ ಬ್ಯಾಟಿಂಗ್ ಮಾಡಿದೆ.
ಇದನ್ನೂ ಓದಿ:2ನೇ ಪಂದ್ಯಕ್ಕಾದ್ರೂ ಆಡ್ತಾರಾ ವೈಭವ್ ಸೂರ್ಯವಂಶಿ – ಟಾಪ್-5ನಲ್ಲಿ ಚೇಂಜ್ ಮಾಡ್ತಿಲ್ಲ ಏಕೆ?
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡುತ್ತಿಲ್ಲ. ವೈಭವ್ ಬರೀ ಬೆಂಚ್ ಕಾಯಲು ಮಾತ್ರ ಸೀಮಿತವಾಗಿದ್ದಾರೆ. 15 ವರ್ಷದ ಹುಡುಗನಿಗೆ ಸಾಧನೆ ಮಾಡಲು ಬಿಡಿ. ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಟ್ಟು ನೋಡಿ ಎಂದು ದಿನಬೆಳಗಾದರೆ ವೈಭವ್ ಪರ ಬ್ಯಾಟ್ ಬೀಸುವವರ ಸಂಖ್ಯೆ ಜಾಸ್ತಿಯಾಗುತ್ತದೆ. ಇದಕ್ಕೆ ಕ್ರಿಕೆಟ್ ದಿಗ್ಗಜರು ಕೂಡಾ ಹೊರತಾಗಿಲ್ಲ. ಗವಾಸ್ಕರ್, ರವಿಶಾಸ್ತ್ರಿ ಮತ್ತು ಎಬಿ ಡಿವಿಲಿಯರ್ಸ್ರಂತಹ ದಿಗ್ಗಜರು ಕೂಡಾ ವೈಭವ್ ಪ್ಲೇಯಿಂಗ್ ಇಲೆವೆನ್ನಲ್ಲಿ ಇರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಹಿರಿಯ ಆಟಗಾರರನ್ನು ಕೈಬಿಡಿ ಎಂದು ಒತ್ತಾಯಿಸುವವರ ಬಗ್ಗೆ ಕೆಲ ಕ್ರಿಕೆಟಿಗರು ಕಿಡಿಕಾರಿದ್ದಾರೆ. ಮಾಜಿ ಆಟಗಾರರಾದ ಅಶ್ವಿನ್, ಸಬಾ ಕರೀಮ್ ಮತ್ತು ಚೇತೇಶ್ವರ ಪೂಜಾರ ಅವರು ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾರನ್ನ ಮುಂದುವರಿಸಬೇಕೆಂದು ಹೇಳುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಪರ ಬಿಸಿಸಿಐ ಬ್ಯಾಟಿಂಗ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ವೈಭವ್ ಬೆಂಚ್ ಕಾಯುವ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದ್ದರೆ, ಇತ್ತ ಬಿಸಿಸಿಐ ತಂಡದ ಆಡಳಿತ ಮಂಡಳಿಗೆ ಫುಲ್ ಸಪೋರ್ಟ್ ಮಾಡಿದೆ. ವೈಭವ್ ಸೂರ್ಯವಂಶಿ ಪದಾರ್ಪಣೆ ವಿಳಂಬಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ವೈಭವ್ ಅವರನ್ನು ಅವರ ಪ್ರತಿಭೆಯ ಆಧಾರದ ಮೇಲೆ ತಂಡಕ್ಕೆ ಆಯ್ಕೆ ಮಾಡಲಾಗಿದ್ದರೂ, ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳುವ ನಿರ್ಧಾರವು ಸಂಪೂರ್ಣವಾಗಿ ತಂಡದ ಆಡಳಿತ ಮಂಡಳಿಯ ಮೇಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಆಡಳಿತ ಮಂಡಳಿಯ ಮೇಲೆ ನಂಬಿಕೆ ಇಡಬೇಕು ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಅವರು ಸರಿಯಾದ ಸಮಯ ಬಂದಾಗ ಮಾತ್ರ ಸ್ಫೋಟಕ ಎಡಗೈ ಬ್ಯಾಟ್ಸ್ಮನ್ಗೆ ಅಂತರರಾಷ್ಟ್ರೀಯ ಪದಾರ್ಪಣೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ನೋಡಿರಿ

