ಫಿಫಾದಲ್ಲಿ ಮೆಸ್ಸಿ ಮ್ಯಾಜಿಕ್ – ಯಡವಟ್ಟು ಮಾಡಿ ಅರ್ಜೆಂಟೀನಾ ವಿರುದ್ಧ ಸೋತ ಕೇಪ್‌ವರ್ಡ್

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಕೇಪ್ ವರ್ಡ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿದ ಅರ್ಜೆಂಟೀನಾ, ಈ ಬಾರಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ‘ಸೂಪರ್-16’ ಹಂತಕ್ಕೆ ಪ್ರವೇಶಿಸಿದೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿರುವ ಲಯೊನೆಲ್ ಮೆಸ್ಸಿ, 29ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ತಮ್ಮ ತಂಡದ ಪರ ಖಾತೆ ತೆರೆದರು. ನಂತ್ರ ಎರಡು ತಂಡದ ಗೋಲು ಸಮಮವಾಗಿತ್ತು.
ಇದನ್ನೂ ಓದಿ: ದ್ರಾಕ್ಷಿ ತಿಂದ್ರೆ ಆರೋಗ್ಯ ಸಮಸ್ಯೆಗಳು ದೂರ! – ಇಂದು ಹಣ್ಣಿನಿಂದ ಎಷ್ಟೊಂದು ಲಾಭ!
ಹೀಗಾಗಿ, ಹೆಚ್ಚುವರಿ ಅವಧಿಯ ಆಟ ನಡೆಯಿತು. ಆರಂಭದಲ್ಲೇ (92ನೇ ನಿಮಿಷ) ಗೋಲು ಬಾರಿಸಿದ ಲಿಸಾಂಪ್ರೊ ಮಾರ್ಟಿನೇಜ್ ಅರ್ಜೆಂಟೀನಾಗೆ 2-1 ಅಂತರದ ಮುನ್ನಡೆ ತಂದುಕೊಟ್ಟರು. ಅದಕ್ಕೆ ಪ್ರತಿಯಾಗಿ ಕೇಪ್ ವರ್ಡ್ 103ನೇ ನಿಮಿಷದಲ್ಲಿ ಗೋಲು ಗಳಿಸಿತು. ಈ ಗೋಲನ್ನು ಸಿಡ್ನಿ ಲೋಪ್ಸ್ ಕಬ್ರಾಲ್ ಬಾರಿಸಿದರು. ಇದರೊಂದಿಗೆ, ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ವರ್ಡ್ ಬಳಗ ರವಾನಿಸಿತು.
111ನೇ ನಿಮಿಷದಲ್ಲಿ ಅರ್ಜೆಂಟೀನಾದ ಕ್ರಿಸ್ಟಿಯನ್ ರೋಮೆರೊ ಅವರು ಬಾರಿಸಿದ ಚೆಂಡನ್ನು ಹೆಡರ್ ಮೂಲಕ ತಡೆಯಲು ಹೋದ ಕೇಪ್ ವರ್ಡ್ ತಂಡದ ಡೈನಿ ಬೋರ್ಗೆಸ್, ಎಡವಟ್ಟು ಮಾಡಿಕೊಂಡರು. ಅವರ ತಲೆಗೆ ತಾಗಿದ ಚೆಂಡು ನೇರವಾಗಿ ಗೋಲು ಪೆಟ್ಟಿಗೆ ಸೇರಿತು. ಇದರೊಂದಿಗೆ ಅರ್ಜೆಂಟೀನಾ ಜಯ ಖಾತ್ರಿಯಾಯಿತು.ಇದರೊಂದಿಗೆ, ಕೇಪ್ ವರ್ಡ್ ಅಭಿಯಾನ ಅಂತ್ಯಗೊಂಡಿತು. ಅರ್ಜೆಂಟೀನಾ, ಜುಲೈ 7 ರಂದು ನಡೆಯುವ ‘ಸೂಪರ್-16’ ಪಂದ್ಯದಲ್ಲಿ ಈಜಿಪ್ಟ್ ಸವಾಲನ್ನು ಎದುರಿಸಲಿದೆ.

ನೋಡಿರಿ

