ಬಂಗಾರದ ಬೇಟೆಯಾಡಿದ ಕರ್ನಾಟಕದ ಪುಟಾಣಿ – ಐಸ್ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಸ್ವರ!

ಬಂಗಾರದ ಬೇಟೆಯಾಡಿದ ಕರ್ನಾಟಕದ ಪುಟಾಣಿ – ಐಸ್ ಸ್ಕೇಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಸ್ವರ!

ಈ ಪುಟಾಣಿಯ ಕಾಲುಗಳು ಪಾದರಸಕ್ಕಿಂತಲೂ ಜಾಸ್ತಿಯೇ ಚುರುಕಾಗಿದ್ದವು. ದಾಖಲೆಯ ಟೈಮಿಂಗ್‌ನೊಂದಿಗೆ 500 ಮೀಟರ್‌ನ ಗುರಿ ತಲುಪಿ, ಐಸ್‌ ಸ್ಕೇಟಿಂಗ್‌ (Ice Skating)ನಲ್ಲಿ  ಕರ್ನಾಟಕ(Karnataka)ಕ್ಕೆ ಚಿನ್ನದ ಗರಿ ತೊಡಿಸಿದ್ದಾಳೆ ಸ್ವರ ಸೋಮಯಾಜಿ (Swara Somayaji).

ಡೆಹ್ರಾಡೂನ್ (Dehradun) ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್  -2026 (21st National Ice Skating Champinship)ನಲ್ಲಿ ಕರ್ನಾಟಕದ ಪುಟಾಣಿ ಚಿನ್ನದ ಪದಕ ಗೆದ್ದಿದ್ದಾಳೆ. ಕರ್ನಾಟಕದ ಸ್ವರ ಆರ್ ಸೋಮಯಾಜಿ ಬಂಗಾರದ ಪದಕ ಗೆದ್ದು ಬೀಗಿದ್ದಾಳೆ.

ಇದನ್ನೂ ಓದಿ:IND Vs SL ಟೆಸ್ಟ್ ಗೆ ಮುಹೂರ್ತ –  2 ಮ್ಯಾಚ್.. ಗೆದ್ರಷ್ಟೇ WTC ರೇಸ್

21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್-2026 ಡೆಹ್ರಾಡೂನ್‌ನಲ್ಲಿ ನಡೆದಿದೆ. ಈ ಸ್ಪರ್ಧೆಯಲ್ಲಿ 8ರಿಂದ 10 ವರ್ಷದ ವಯೋಮಾನದ ಕೆಟಗರಿಯಲ್ಲಿ ಸ್ವರ ಆರ್ ಸೋಮಯಾಜಿ ಚಿನ್ನ ಗೆಲ್ಲುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾಳೆ. ಸ್ವರ ಆರ್ ಸೋಮಯಾಜಿ ದಾಖಲೆಯ 55.635 ಸೆಕೆಂಡ್‌ಗಳಲ್ಲಿ 500 ಮೀಟರ್‌ ಗುರಿ ತಲುಪಿ, ಚಿನ್ನದ ನಗು ಬೀರಿದ್ದಾಳೆ.

ಬೆಂಗಳೂರಿನ ಬೆಸ್ಟ್‌ ಕ್ಲಬ್‌ನಲ್ಲಿ ಕೆ. ಶ್ರೀಕಾಂತ್‌ ರಾವ್‌ ಹಾಗೂ ಸ್ವರ ತಂದೆ ರಾಘವೇಂದ್ರ ಸೋಮಯಾಜಿ ಅವರು ಕೋಚಿಂಗ್‌ ನೀಡಿದ್ದರು. ಚಿಕ್ಕ ವಯಸ್ಸಿನಲ್ಲೇ ಸ್ಕೇಟಿಂಗ್‌ ಆರಂಭಿಸಿರುವ ಸ್ವರಗೆ ತಂದೆ ರಾಘವೇಂದ್ರ ಸೋಮಯಾಜಿಯವರೇ ಮೊದಲ ಗುರು. ರಾಘವೇಂದ್ರ ಸೋಮಯಾಜಿ ದೇಶದ ಪ್ರಮುಖ ಚಾಂಪಿಯನ್‌ ಸ್ಕೇಟರ್‌ ಹಾಗೂ ಕೋಚ್‌ ಆಗಿದ್ದು, ಅಪ್ಪನ ಹಾದಿಯಲ್ಲಿ ಮಗಳೂ ಈಗ ದೊಡ್ಡ ಸಾಧನೆಯತ್ತ ಹೆಜ್ಜೆಯಿಟ್ಟಿದ್ದಾಳೆ. ಐಸ್‌ ಸ್ಕೇಟಿಂಗ್‌ ಅಸೋಶಿಯೇಷನ್‌ ಆಫ್‌ ಇಂಡಿಯಾ, ಆಯೋಜಿಸಿದ್ದ ಐಸ್‌ ಸ್ಕೇಟಿಂಗ್‌ನಲ್ಲಿ ಸ್ವರ ಮಾಡಿರುವ ಸಾಧನೆ, ಇಡೀ ರಾಜ್ಯವೇ ಹೆಮ್ಮೆ ಪಡುವಂತಾಗಿದೆ.

Sulekha

Leave a Reply

Your email address will not be published. Required fields are marked *