ಕಷ್ಟಗಳಿಂದ ಮುಕ್ತಿ ಸಿಗಬೇಕಾ? – ಶನಿ ದೇವರಿಗೆ ಶನಿವಾರ ಈ ಹೂವು ಅರ್ಪಿಸಿ

ಹಿಂದೂ ಧರ್ಮದಲ್ಲಿ, ಪ್ರತಿಯೊಬ್ಬ ದೇವತೆಯ ನೆಚ್ಚಿನ ಆಹಾರ, ನೆಚ್ಚಿನ ಹೂವು, ಬಣ್ಣ ಇತ್ಯಾದಿಗಳನ್ನು ಉಲ್ಲೇಖಿಸಲಾಗಿದೆ. ಎಲ್ಲಾ ದೇವತೆಗಳ ಪೂಜೆಯಲ್ಲಿ, ಅವರಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಇದು ಆ ದೇವರ ಕೃಪೆಗೆ ಪಾತ್ರವಾಗಲು ಸಹಾಯ ಮಾಡುತ್ತದೆ. ಪೂಜೆಯಲ್ಲಿ ಹೂವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಿಂದೂ ಧರ್ಮದಲ್ಲಿ ಹೂವುಗಳಿಲ್ಲದೆ ಪೂಜೆ ಪೂರ್ಣಗೊಳ್ಳುವುದಿಲ್ಲ. ನ್ಯಾಯದ ದೇವರು ಶನಿ ದೇವರಿಗೆ ಸಂಬಂಧಿಸಿದಂತೆ, ಅವನನ್ನು ಮೆಚ್ಚಿಸುವುದು ತುಂಬಾ ಕಷ್ಟಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದಲ್ಲಿ, ಶನಿದೇವನನ್ನು ಮೆಚ್ಚಿಸಲು ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಈ ಕ್ರಮಗಳಲ್ಲಿ ಒಂದು ತುಂಬಾ ಸುಲಭವಾಗಿರುವಂಥದ್ದು.
ಇದನ್ನೂ ಓದಿ: ಶನಿವಾರ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನ ಮಾಡಬೇಡಿ – ಶನಿದೇವ, ಹನುಮಂತನಕ ಕೋಪಕ್ಕೆ ಗುರಿಯಾಗಬೇಡಿ
ಶನಿ ದೇವರನ್ನ ಮೆಚ್ಚಿಸುವ ಒಂದು ಮಾರ್ಗವೆಂದರೆ ಶನಿವಾರದಂದು ಅವರ ನೆಚ್ಚಿನ ಹೂವನ್ನು ಅರ್ಪಿಸುವುದು. ಶನಿ ದೇವರಿಗೆ ಎಕ್ಕದ ಹೂವು ತುಂಬಾ ಇಷ್ಟ. ಎಕ್ಕದ ಹೂವನ್ನು ಅರ್ಪಿಸುವುದರಿಂದ ಶನಿ ದೇವರಿಗೆ ಸಂತೋಷವಾಗುತ್ತದೆ. ಶನಿವಾರ ದೇವಸ್ಥಾನಕ್ಕೆ ಹೋಗಿ ಶನಿ ದೇವರನ್ನು ಪೂಜಿಸಿ ಎಕ್ಕದ ಹೂವನ್ನು ಅರ್ಪಿಸಬೇಕು. ಇದರ ಹೊರತಾಗಿ, ಶಂಖ ಪುಷ್ಪ ಕೂಡಾ ಶನಿ ದೇವರ ನೆಚ್ಚಿನ ಹೂವು. ಶನಿವಾರ ಶನಿ ದೇವರಿಗೆ 5, 7 ಅಥವಾ 11 ಶಂಖ ಪುಷ್ಪಗಳನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ, ಸಾಡೇಸಾತಿ ಮತ್ತು ಧೈಯದಿಂದಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು.
– ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ.
– ಶನಿ ದೇವರ ಕಾಲ್ಬೆರಳಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿ. ಶನಿ ದೇವರ ವಿಗ್ರಹದ ಮುಂದೆ ಎಂದಿಗೂ ನಿಲ್ಲಬಾರದು, ಅವರ ಕಣ್ಣುಗಳನ್ನು ನೋಡಬಾರದು ಎನ್ನುವುದನ್ನು ಮರೆಯಬೇಡಿ. ಯಾವಾಗಲೂ ಸ್ವಲ್ಪ ಓರೆಯಾಗಿ ನಿಂತು ಶನಿದೇವರನ್ನು ಪೂಜಿಸಿ.
– ಶನಿ ಚಾಲೀಸಾ ಓದಿ. ಇದು ಶನಿ ದೇವರನ್ನು ಬೇಗನೆ ಸಂತೋಷಪಡಿಸುತ್ತದೆ.
– ಬಡವರು ಮತ್ತು ಅಸಹಾಯಕರಿಗೆ ಸಹಾಯ ಮಾಡಿ.

ನೋಡಿರಿ

