ಸಂಜು ಸ್ಯಾಮ್ಸನ್ಸ್ಗೆ ಗೇಟ್ಪಾಸ್ – ಭಾರತಕ್ಕೆ ದುಬಾರಿ ಪ್ರಸಿದ್ಧ್ ಟೆನ್ಷನ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಇಂಗ್ಲೆಂಡ್ ವಿರುದ್ಧದ ವೈಭವ್ಗೆ 2ನೇ ಪಂದ್ಯದಲ್ಲೂ ಅವಕಾಶ ಸಿಗಲ್ಲ ಎಂದ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಎರಡನೇ ಪಂದ್ಯದಲ್ಲೂ ವೈಭವ್ಗೆ ಆಡುವ ಅವಕಾಶ ಸಿಗುವುದು ಕಷ್ಟಕರ. ಏಕೆಂದರೆ 2026 ರ ಟಿ20 ವಿಶ್ವಕಪ್ನಲ್ಲಿ ಅಪಾರ ಒತ್ತಡದ ಸಮಯದಲ್ಲೂ ಸಂಜು ಸ್ಯಾಮ್ಸನ್ ತಂಡಕ್ಕಾಗಿ ಅವರು ಏನು ಮಾಡಿದರು ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಆಯ್ಕೆ ಮಂಡಳಿ ಸಂಜು ಸ್ಯಾಮ್ಸನ್ಗೆ ಮತ್ತೊಂದು ಅವಕಾಶ ನೀಡುತ್ತದೆ ಎಂದು ಭಾವಿಸುತ್ತೇನೆ ಎಂದು ಡಿಕೆ ಹೇಳಿದ್ದಾರೆ.
ಇದನ್ನೂ ಓದಿ: ಜುಲೈ 5ಕ್ಕೆ ಬೆಂಗಳೂರಿನ ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ
ಕಳಪೆ ಹಾಗೂ ಅಸ್ಥಿರ ಪ್ರದರ್ಶನ ನೀಡುತ್ತಿರುವ ಟಿ20 ಟೀಂ ಇಂಡಿಯಾದ ಕೆಲವು ಆಟಗಾರರು ತಂಡದಿಂದ ಹೊರಗುಳಿಯುವ ಸಾಧ್ಯತೆಯಿದೆ. ಯುವ ಪ್ರತಿಭೆಗಳಿಗೆ ಅವಕಾಶ ಸಿಗದಂತೆ ಮಾಡುತ್ತಿರುವ ಇವರಿಗೆ ಮಂಡಳಿ ಕೊನೆಯ ಅವಕಾಶ ನೀಡಿದೆ. ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಅವರ ನಿಧಾನಗತಿಯ ಬ್ಯಾಟಿಂಗ್ ಮತ್ತು ಪ್ರಸಿದ್ಧ್ ಕೃಷ್ಣರ ದುಬಾರಿ ಬೌಲಿಂಗ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಇವರಿಗೆ ಸದ್ಯದಲ್ಲೇ ಇವರಿಗೆ ಗೇಟ್ಪಾಸ್ ನೀಡುವ ಸಾಧ್ಯತೆಯಿದೆ
ವೈಭವ್ ಸೂರ್ಯವಂಶಿಗೆ ಚಾನ್ಸ್ ನೀಡದೇ ಇರುವುದರ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸೂರ್ಯವಂಶಿಯನ್ನು ಐರ್ಲೆಂಡ್ ವಿರುದ್ಧ ಆಡಿಸಬೇಕಿತ್ತು. ಐರ್ಲೆಂಡ್ ಪಿಚ್ನಲ್ಲಿ ವೈಭವ್ ಅಪಾಯಕಾರಿಯಾಗುತ್ತಿದ್ದರು. ಅಲ್ಲಿನ ಮೈದಾನಗಳು ಚಿಕ್ಕದ್ದಾಗಿದ್ದರಿಂದ ವೈಭವ್ ಕ್ರೀಡಾಂಗಣದ ಹೊರಕ್ಕೆ ಚೆಂಡನ್ನು ಕಳುಹಿಸುತ್ತಿದ್ದರು. ಒಂದು ವೇಳೆ ವೈಭವ್ಗೆ ಐರ್ಲೆಂಡ್ ವಿರುದ್ಧ ಆಡುವ ಅವಕಾಶ ಸಿಕ್ಕಿದ್ದರೆ, ಅವರು ಐರ್ಲೆಂಡ್ ಬೌಲರ್ಗಳ ಪ್ಯಾಂಟ್ ಬಿಚ್ಚಿಸುತ್ತಿದ್ದರು ಅಂದ್ರೆ ಬೌಲರ್ಗಳನ್ನ ಕಾಡುತ್ತಿದ್ದರು ಅನ್ನೋ ಅರ್ಥದಲ್ಲಿ ರವಿಶಾಸ್ತ್ರಿ ಹೇಳಿದ್ದಾರೆ.
ಒಡಿಶಾದ 18 ವರ್ಷದ ದೀಪಕ್ ಎಂಬ ಯುವಕನೊಬ್ಬ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನೋಡುವ ಸಲುವಾಗಿ 1,800 ಕಿ.ಮೀ ಸೈಕಲ್ ಸವಾರಿ ಮಾಡಿ ಬೆಂಗಳೂರಿಗೆ ಬಂದಿದ್ದಾನೆ. ಈ ಅಭಿಮಾನಿಯ ಅಭಿಮಾನಕ್ಕೆ ಮನಸೋತ ಹಾರ್ದಿಕ್ ಯಾರೂ ನಿರೀಕ್ಷಿಸದ ಕೆಲವು ಅದ್ಭುತ ಉಡುಗೊರೆಗಳನ್ನು ನೀಡಿ ಆ ಯುವಕನ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಹಾರ್ದಿಕ್ ಆ ಯುವಕನ ಪ್ರಯಾಣ ವೆಚ್ಚ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಸುಮಾರು 1.5 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಿದ್ದಾರೆ
ಭಾರತದ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಫುಟ್ಬಾಲ್ ಆಟವನ್ನ ಎಂಜಾಯ್ ಮಾಡುತ್ತಿದ್ದಾರೆ. ಫ್ರಾನ್ಸ್ ಮತ್ತು ಸ್ವೀಡನ್ ನಡುವಿನ FIFA ವಿಶ್ವಕಪ್ 2026 ಪಂದ್ಯವನ್ನು ವೀಕ್ಷಿಸಲು ಅವರು ಯುನೈಟೆಡ್ ಸ್ಟೇಟ್ಸ್ನ ನ್ಯೂಯಾರ್ಕ್ ನ್ಯೂಜೆರ್ಸಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ರು. ವಿಶೇಷ ಎಂದರೆ ಜೈಸ್ವಾಲ್ ಈ ಪಂದ್ಯವನ್ನು ವೀಕ್ಷಿಸಲು ಸ್ಟಾರ್ ಆಟಗಾರ ಅರ್ಜೆಂಟೀನಾದ ಐಕಾನ್ ಲಿಯೋನೆಲ್ ಮೆಸ್ಸಿಯ ಜೆರ್ಸಿಯನ್ನು ಧರಿಸಿದ್ದರು.
ಕೇರಳ ಕ್ರಿಕೆಟ್ ಲೀಗ್ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಇದರಲ್ಲಿ ಸಂಜು ಸ್ಯಾಮ್ಸನ್ಗೆ ಬಿಗ್ ಶಾಕ್ ನೀಡಲಾಗಿದೆ. ಕಳೆದ ಆವೃತ್ತಿಯಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಅನ್ನು ಪ್ರತಿನಿಧಿಸಿದ್ದ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ರನ್ನ ಹರಾಜಿಗು ಮುನ್ನ ಫ್ರಾಂಚೈಸಿ ಕೈ ಬಿಟ್ಟಿದೆ. ಸಂಜುರನ್ನ ಕೈ ಬಿಟ್ಟಿರುವುದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಪತ್ನಿ ಸಮೇತ ಆಂಜನೇಯ ಜನ್ಮಭೂಮಿ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. 575 ಮೆಟ್ಟಿಲು ಹತ್ತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಯಲ್ಲಿ ಹನುಮನ ದರ್ಶನವನ್ನು ರಾಹುಲ್ ಪಡೆದಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಾಲಿವುಡ್ ನಟ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕ ಶಾರುಖ್ ಖಾನ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಪೊಮೊನಾದಲ್ಲಿ ತಮ್ಮ ಸ್ವಂತ ಕ್ರಿಕೆಟ್ ಮೈದಾನವನ್ನು ಉದ್ಘಾಟಿಸಿದರು. ಸಾಂಪ್ರದಾಯಿಕ ಪೂಜೆಯೊಂದಿಗೆ KKR ಕ್ರೀಡಾಂಗಣವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶಾರುಖ್ ಖಾನ್ ಸಂತೋಷದಿಂದ ಕಾಣಿಸಿಕೊಂಡ್ರು. ಇದೇ ಸಂದರ್ಭದಲ್ಲಿ ICC ಅಧ್ಯಕ್ಷ ಜಯ್ ಶಾ ಮತ್ತು CEO ಸಂಜೋಗ್ ಗುಪ್ತ ಅವರಿಗೆ ಧನ್ಯವಾದಗಳನ್ನು ಶಾರುಖ್ ಖಾನ್ ತಿಳಿಸಿದ್ದಾರೆ.
ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರ ಎರಡನೇ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾವನ್ನು 40 ರನ್ಗಳಿಂದ ಸೋಲಿಸಿ ಫೈನಲ್ ತಲುಪಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ನಾಕೌಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ನಾಯಕಿ ನ್ಯಾಟ್ ಸಿವರ್-ಬ್ರಂಟ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ 170 ರನ್ಗಳನ್ನು ಕಲೆ ಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ದಕ್ಷಿಣ ಆಫ್ರಿಕಾ ವನಿತೆಯರು ಕೇವಲ 129 ರನ್ಗೆ ಆಲೌಟ್ ಆದ್ರು.
ಚೊಚ್ಚಲ ಯುರೋಪಿಯನ್ ಟಿ20 ಲೀಗ್ನಲ್ಲಿ ಭಾರತೀಯ ಮೂಲದ ಜೈ ಮುಂದ್ರಾಗೆ ಭಾರೀ ಬೇಡಿಕ ಹೆಚ್ಚಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿ ಐರ್ಲೆಂಡ್ನ ಭಾರತೀಯ ಮೂಲದ ಆಲ್ರೌಂಡರ್ ಜೈ ಮುಂದ್ರಾರನ್ನು ರೋಟರ್ಡ್ಯಾಮ್ ಡಾಕರ್ಸ್ ಫ್ರಾಂಚೈಸಿ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಭಾರತ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದಿದ್ದ ಮುಂದ್ರಾ, ಎರಡನೇ ಪಂದ್ಯದಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು.

ನೋಡಿರಿ

