ಜುಲೈ 5ಕ್ಕೆ ಬೆಂಗಳೂರಿನ ಗೌರಿ ಜೊತೆ ಆಮಿರ್‌ ಖಾನ್ 3ನೇ ಮದುವೆ

ಜುಲೈ 5ಕ್ಕೆ ಬೆಂಗಳೂರಿನ ಗೌರಿ ಜೊತೆ ಆಮಿರ್‌ ಖಾನ್ 3ನೇ ಮದುವೆ

ಬಾಲಿವುಡ್ ಸೂಪರ್ ಸ್ಟಾರ್ ಆಮಿರ್‌ ಖಾನ್ ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಜೊತೆಗೆ ಜುಲೈ 5 ರಂದು  ಮದುವೆಯಾಗುತ್ತಿದ್ದಾರೆ. ಜುಲೈ 5ರಂದು ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಕುಟುಂಬದ ಆಪ್ತ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಈ ವಿವಾಹವು ಮುಂಬೈನ ಬಾಂದ್ರಾದಲ್ಲಿರುವ ಆಮಿರ್‌ ಅವರ ನಿವಾಸದಲ್ಲಿ ನಡೆಯಲಿದೆ. ಅಲ್ಲಿಯೇ ವಿವಾಹ ನೋಂದಣಿ ಪ್ರಕ್ರಿಯೆ ಕೂಡ ನಡೆಯಲಿದೆ. ಇದು ಆಮಿರ್ ಖಾನ್ ಅವರಿಗೆ 3ನೇ ಮದುವೆಯಾಗಿದೆ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಹತ್ತಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ದ್ರಾವಿಡ್ ದಂಪತಿ

ಈ ಮದುವೆಯಲ್ಲಿ  ಸುಮಾರು 150 ಮಂದಿ ಮಾತ್ರ ಉಪಸ್ಥಿತರಿರಲಿದ್ದಾರೆ ಎಂದು ಹೇಳಲಾಗಿದೆ. ವಿದೇಶದಿಂದಲೂ ಹಲವಾರು ಸಂಬಂಧಿಕರು ಆಗಮಿಸುವ ಸಾಧ್ಯತೆಯಿದೆ. ವಿಶೇಷವೆಂದರೆ, ಆಮಿರ್‌  ಅವರ ಇಬ್ಬರು ಹೆಂಡತಿಯರು ಮೂವರು ಮಕ್ಕಳು ಮತ್ತು ಗೌರಿ ಅವರ ಮಗುವು ಈ ವಿವಾಹದಲ್ಲಿ ಹಾಜರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಮಿರ್‌ ಖಾನ್‌ಗೆ ಇದು ಮೂರನೇ ಮದುವೆಯಾದರೆ, ಗೌರಿಗೆ ಇದು ಎರಡನೇ ಮದುವೆ.

ನಟ ಆಮಿರ್ ಖಾನ್ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಜುಲೈ 5ರಂದು ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಕುಟುಂಬದ ಆಪ್ತ ಸದಸ್ಯರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಈ ವಿವಾಹವು ಮುಂಬೈನ ಬಾಂದ್ರಾದಲ್ಲಿರುವ ಆಮಿರ್‌ ಅವರ ನಿವಾಸದಲ್ಲಿ ನಡೆಯಲಿದೆ. ಅಲ್ಲಿಯೇ ವಿವಾಹ ನೋಂದಣಿ ಪ್ರಕ್ರಿಯೆ ಕೂಡ ನಡೆಯಲಿದೆ.

Kishor KV

Leave a Reply

Your email address will not be published. Required fields are marked *