IND Vs SL ಟೆಸ್ಟ್ ಗೆ ಮುಹೂರ್ತ – 2 ಮ್ಯಾಚ್.. ಗೆದ್ರಷ್ಟೇ WTC ರೇಸ್
KING ಕೋಟೆ ಉಳಿಸ್ತಾರಾ PRINCE?

ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ವಿರುದ್ಧ ವೈಟ್ ಬಾಲ್ ಸಿರೀಸ್ನಲ್ಲಿ ಕಂಪ್ಲೀಟ್ ಬ್ಯುಸಿಯಾಗಿದೆ. ಪ್ರಸ್ತುತ 5 ಪಂದ್ಯಗಳ ಟಿ-20ಐ ಸಿರೀಸ್ ನಡೀತಿದ್ದು ಆಮೇಲೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಲೇಟೆಸ್ಟ್ ಅಪ್ಡೇಟ್ ಅಂದ್ರೆ ನೆಕ್ಸ್ಟ್ ಮಂತ್ ಶೆಡ್ಯೂಲ್ ಕೂಡ ಅನೌನ್ಸ್ ಆಗಿದ್ದು ಲಂಕಾದಹನಕ್ಕೆ ಹೊರಡಬೇಕಿದೆ. ಅದೂ ಕೂಡ ರೆಡ್ ಬಾಲ್ ಸಿರೀಸ್.. ಇಂಟ್ರೆಸ್ಟಿಂಗ್ ಅಂದ್ರೆ ಭಾರತ 2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಉಳೀಬೇಕು ಅಂದ್ರೆ ಶತಾಯ ಗತಾಯ ಈ ಸರಣಿ ವಿನ್ ಆಗ್ಲೇಬೇಕು. ಜೊತೆಗೆ ಕಿಂಗ್ ವಿರಾಟ್ ಕೊಹ್ಲಿ ದಾಖಲೆಯನ್ನ ಉಳಿಸೋ ಜವಾಬ್ದಾರಿ ಪ್ರಿನ್ಸ್ ಶುಭ್ಮನ್ ಗಿಲ್ ಮೇಲಿದೆ.
ಇದನ್ನೂ ಓದಿ : 2ನೇ ಪಂದ್ಯದಲ್ಲೂ ಇಲ್ಲ ವೈಭವ್‌ಗೆ ಚಾನ್ಸ್ – ಸಂಜು ಸ್ಯಾಮ್ಸನ್ ಪರ ಡಿಕೆ ಬ್ಯಾಟಿಂಗ್
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಿಂದ 27 ರವರೆಗೆ ಗ್ಯಾಲೆ ಮತ್ತು ಕೊಲಂಬೊದಲ್ಲಿ ನಡೆಯಲಿದೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಡಿಯಲ್ಲಿ ಬರೋದ್ರಿಂದ ಫೈನಲ್ ಟಿಕೆಟ್ ರೇಸ್ನಲ್ಲಿರೋ ಎರಡೂ ತಂಡಗಳು ಶತಾಯ ಗತಾಯ ಗೆಲ್ಲಲೇಬೇಕು. ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19ರವರೆಗೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ರೆ ಎರಡನೇ ಟೆಸ್ಟ್ ಆಗಸ್ಟ್ 23 ರಿಂದ 27ರವರೆಗೆ ಕೊಲಂಬೊದಲ್ಲಿ ನಡೆಯಲಿದೆ.
2 ಸಲ ಫೈನಲ್ ತಲುಪಿದ್ರೂ ಟ್ರೋಫಿ ಗೆಲ್ಲದ ಭಾರತ!
ಟೀಂ ಇಂಡಿಯಾ ಮೆನ್ಸ್ ತಂಡವೂ ಐಸಿಸಿಯ ಎಲ್ಲಾ ಪ್ರತಿಷ್ಠಿತ ಟೂರ್ನಿಗಳಲ್ಲೂ ಟ್ರೋಫಿಯನ್ನ ಗೆದ್ದಿದೆ. ಟಿ-20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೇ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದಿದೆ. ಆದ್ರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲೋಕೆ ಆಗಿಲ್ಲ. ಎರಡು ಸಲ ಫೈನಲ್ ಗೆ ಪ್ರವೇಶ ಪಡೆದಿದ್ರೂ ಕಪ್ ಗೆಲ್ಲೋಕೆ ಸಾಧ್ಯವಾಗಿಲ್ಲ. ಕಳೆದ ಆವೃತ್ತಿಯಲ್ಲಿ ಫೈನಲ್ ಟಿಕೆಟ್ ಜಸ್ಟ್ ಮಿಸ್ ಆಗಿತ್ತು. ಅಟ್ ಲೀಸ್ಟ್ ಈ ಸಲನಾದ್ರೂ ಫೈನಲ್ ಟಿಕೆಟ್ ಸಿಗುತ್ತೆ ಅಂದ್ರೆ ಅದು ಈಸಿ ಇಲ್ಲ. ಆಲ್ರೆಡಿ ಈ ಹಿಂದಿನ ಸೋಲುಗಳು ದೊಡ್ಡ ಹೊಡೆತವನ್ನೇ ನೀಡಿದೆ.ಪ್ರಸ್ತುತ ಭಾರತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಆರನೇ ಸ್ಥಾನದಲ್ಲಿದೆ. ಶ್ರೀಲಂಕಾದ ಸ್ಪಿನ್ನರ್‌ಗಳು ತಮ್ಮದೇ ಅಂಗಳದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಮತ್ತೊಮ್ಮೆ ಸವಾಲಾಗಬಹುದು. ಇನ್ನು ಭಾರತ ತಂಡ ಕೊನೆಯ ಬಾರಿಗೆ 2017 ರಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಆ ಸಮಯದಲ್ಲಿ ಭಾರತ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಕಿಂಗ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಲಂಕೆಯನ್ನ ಅಕ್ಷರಶಃ ಬೇಟೆಯಾಡಿತ್ತು. ಇಡೀಗ ಪ್ರಿನ್ಸ್ ಶುಭ್ಮನ್ ಗಿಲ್ ಕ್ಯಾಪ್ಟನ್ಸಿಯಲ್ಲೂ ಅದೇ ಕೆಲಸ ಮಾಡಬೇಕಿದೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಇತಿಹಾಸ ಮತ್ತು ಪ್ರಸ್ತುತ ಪೈಪೋಟಿಯ ಪ್ರಕಾರ ಫೈನಲ್ ತಲುಪಲು ಕನಿಷ್ಠ 60% ರಿಂದ 64% PCT ಅಗತ್ಯವಿರಲಿದೆ. ಸದ್ಯ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ 87.50% ಪಾಯಿಂಟ್ಸ್ ಶೇಕಡಾವಾರು ಹೊಂದಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಸೌತ್ ಆಫ್ರಿಕಾ 75.00% ಪಾಯಿಂಟ್ಸ್ ಶೇಕಡಾವಾರು ಹೊಂದಿದೆ. 3ನೇ ಸ್ಥಾನದಲ್ಲಿರೋ ನ್ಯೂಜಿಲೆಂಡ್ 72 ಪರ್ಸೆಂಟ್ ಇದ್ರೆ 4ರಲ್ಲಿ ಬಾಂಗ್ಲಾ 58ರಷ್ಟಿದೆ. 5ರಲ್ಲಿ ಭಾರತ 48 ಪರ್ಸೆಂಟ್ ಇದೆ. ಹೀಗಾಗಿ 2027ರ ಫೈನಲ್ವರೆಗೆ ಪ್ರತೀ ಪಂದ್ಯಗಳನ್ನ ಗೆದ್ದಾಗಷ್ಟೇ ಫೈನಲ್ ಟಿಕೆಟ್. ಇಲ್ದಿದ್ರೆ ಈ ಸಲನೂ ಮಿಸ್ ಅಷ್ಟೇ.

ನೋಡಿರಿ

