ಅಂಜನಾದ್ರಿ ಬೆಟ್ಟ ಹತ್ತಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ದ್ರಾವಿಡ್ ದಂಪತಿ

ಅಂಜನಾದ್ರಿ ಬೆಟ್ಟ ಹತ್ತಿ ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ದ್ರಾವಿಡ್ ದಂಪತಿ

ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇಂದು ಅಂಜನಾದ್ರಿಗೆ ಭೇಟಿ ನೀಡಿದ್ದು, ಹನುಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿಯ ಜೊತೆ 575 ಮೆಟ್ಟಿಲು ಹತ್ತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಯಲ್ಲಿ ಹನುಮನ ದರುಶನ ಪಡೆದಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್ – ಇಂಜಿನಿಯರ್‌ಗಳಿಗೆ ಸಚಿವರಿಂದ ಕ್ಲಾಸ್

ಇದಕ್ಕೂ ಮುನ್ನ ಹಂಪಿಗೆ ತೆರಳಿ ವಿರೂಪಾಕ್ಷನ ದರ್ಶನ ಪಡೆದಿದ್ದರು. ಅದಕ್ಕೂ ಮೊದಲು ಅವರು ಸಾಸಿವೆಕಾಳು ಗಣೇಶ, ಹೇಮಕೂಟಕ್ಕೆ ತೆರಳಿದ್ದರು.ನಂತರ ಕೃಷ್ಣ ದೇವಸ್ಥಾನ, ಉಗ್ರನರಸಿಂಹ, ಬಡವಿಲಿಂಗ ದರ್ಶನ ಪಡೆದರು. ಮಧ್ಯಾಹ್ನದ ಬಳಿಕ ಚಕ್ರತೀರ್ಥ ಕೋದಂಡರಾಮ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನ, ಅಚ್ಯುತರಾಯ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ವಿಶ್ವವಿಖ್ಯಾತ ಐತಿಹಾಸಿಕ ತಾಣ ಹಂಪಿಯಲ್ಲಿರುವ ಈ ಅಂಜನಾದ್ರಿ  ದೇವಾಲಯವು ಅತ್ಯಂತ ಜಾಗೃತ ಹಾಗೂ ಶಕ್ತಿಶಾಲಿ ಸನ್ನಿಧಿಯಾಗಿದೆ. ಇಲ್ಲಿ ಆಂಜನೇಯ ಸ್ವಾಮಿಯು ಯಂತ್ರದ ಮಧ್ಯದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವುದು ವಿಶೇಷ. ಈ ಜಾಗೃತ ಹನುಮಂತನ ದರ್ಶನ ಮಾಡುವುದರಿಂದ ಹಾಗೂ ಇಲ್ಲಿ ಕುಳಿತು ಹನುಮಾನ್ ಚಾಲೀಸಾ ಪಠಿಸುವುದರಿಂದ ಜಾತಕದಲ್ಲಿರುವ ಶನಿಯ ಅಶುಭ ಪ್ರಭಾವಗಳು, ಭಯ ಮತ್ತು ಆತಂಕಗಳು ಸಂಪೂರ್ಣವಾಗಿ ನಾಶವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ.

Kishor KV

Leave a Reply

Your email address will not be published. Required fields are marked *