ರಾಜಧಾನಿ ಬೆಂಗಳೂರಿನ ಜನರಿಗೆ ಬಿಗ್ ಶಾಕ್ – ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ?

ಬಿಎಂಟಿಸಿ ಬಸ್ ಟಿಕೆಟ್ ದರವನ್ನು 20ರಿಂದ 25 ರೂಪಾಯಿವರೆಗೆ ಹೆಚ್ಚಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸುತ್ತಿದೆ. ಡೀಸೆಲ್ ದರ ಏರಿಕೆ ಹಾಗೂ ತೀವು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಈಗಾಗಲೇ ಬಿಎಂಟಿಸಿ ಶೇಕಡಾ 44ರಷ್ಟು ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದರ ಬೆನ್ನಲ್ಲೇ ಇದೀಗ ನೈಸ್ ರೋಡ್ ಮತ್ತು ನೆಲಮಂಗಲದ ನವಯುಗ ಟೋಲ್ ದರ ಏರಿಕೆಯಾಗಿರುವುದರಿಂದ, ಈ ಟೋಲ್ಗಳ ಮೂಲಕ ಸಂಚರಿಸುವ ಬಿಎಂಟಿಸಿ ಬಸ್ಗಳ ಟಿಕೆಟ್ ದರವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಮಾದಾವರ, ನೆಲಮಂಗಲದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಸುಮಾರು 20 ರಿಂದ 25 ರೂಪಾಯಿಗಳಷ್ಟು ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: 2ನೇ ಪಂದ್ಯದಲ್ಲೂ ಇಲ್ಲ ವೈಭವ್ಗೆ ಚಾನ್ಸ್ – ಸಂಜು ಸ್ಯಾಮ್ಸನ್ ಪರ ಡಿಕೆ ಬ್ಯಾಟಿಂಗ್
ಈಗಾಗಲೇ ಡೀಸೆಲ್ ದರ ಏರಿಕೆ ಮತ್ತು ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬಿಎಂಟಿಸಿ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಕಳೆದ ಬಾರಿಯ ಸಿಎಂ ಸಭೆಯಲ್ಲಿ ಮನವಿ ಮಾಡಿತ್ತು. ಈ ಬಗ್ಗೆ ಇತ್ತೀಚಿನ ಕ್ಯಾಬಿನೆಟ್ನಲ್ಲೂ ಸಾರಿಗೆ ಸಚಿವರು ಟಿಕೆಟ್ ದರ ಏರಿಕೆಗೆ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲೇ ಇಂದಿನಿಂದ ನೈಸ್ ರೋಡ್ ಟೋಲ್ ದರ ಏರಿಕೆಯಾಗಿದೆ. ನಂದಿ ಇನ್ಸಾಸ್ಟಕ್ಟರ್ ಕಾರಿಡಾರ್ ಸಂಸ್ಥೆಯು ಶೇಕಡಾ 10 ಟೋಲ್ ದರವನ್ನು ಹೆಚ್ಚಿಸಿದೆ. ನೈಸ್ ರೋಡ್ನ ಏಳು ಕಾರಿಡಾರ್ ಟೋಲ್ ದರಗಳನ್ನು ಏರಿಕೆ ಮಾಡಲಾಗಿದ್ದು, ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ, ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ, ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಸೇರಿದಂತೆ ಎಲ್ಲಾ ಟೋಲ್ಗಳಲ್ಲೂ ದರ ಹೆಚ್ಚಾಗಿದೆ.
ಎಷ್ಟೆಷ್ಟು ಹೆಚ್ಚಳ ಆಗುತ್ತೆ?
ಈ ಹಿಂದೆ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಸಂಚಾರ ಮಾಡಲು ಬಸ್ಗೆ 205 ರೂಪಾಯಿ ಇದ್ದದ್ದು ಇದೀಗ 226 ರೂಪಾಯಿ ಆಗಲಿದೆ. ಕಾರಿಗೆ 20 ರೂಪಾಯಿ ಇದ್ದ ದರ 22 ರೂಪಾಯಿ ಹಾಗೂ ಟ್ರಕ್ಕಿಗೆ 140 ರೂಪಾಯಿ ಇದ್ದ ದರ 154 ರೂಪಾಯಿಗೆ ಏರಿಕೆಯಾಗಿದೆ. ಈ ರೀತಿಯಾಗಿ ಪದೇ ಪದೆ ಟೋಲ್ ದರ ಹೆಚ್ಚಳ ಮಾಡುತ್ತಿರುವ ಬಗ್ಗೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

ನೋಡಿರಿ

