ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್ – ಇಂಜಿನಿಯರ್‌ಗಳಿಗೆ ಸಚಿವರಿಂದ ಕ್ಲಾಸ್

ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್ – ಇಂಜಿನಿಯರ್‌ಗಳಿಗೆ ಸಚಿವರಿಂದ ಕ್ಲಾಸ್

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡರು ನೈಟ್ ರೌಂಡ್ಸ್ ಕೈಗೊಳ್ಳುವ ಮೂಲಕ ಇಂಜಿನಿಯರ್‌ಗಳ ಬೆವರಿಳಿಸಿದ್ದಾರೆ. ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿ ರಸ್ತೆ, ಫುಟ್‌ಪಾತ್ ಒತ್ತುವರಿ ಹಾಗೂ ಚರಂಡಿ ಅವ್ಯವಸ್ಥೆ ಪರಿಶೀಲಿಸಲು ರಾತ್ರಿ ವೇಳೆ ಸಚಿವರು ದಿಢೀರ್ ಫೀಲ್ಡಿಗಿಳಿದಿದ್ದರು. ಜೊತೆಗೆ ನಿದ್ದೆಯಲ್ಲಿದ್ದ ಅಧಿಕಾರಿಗಳ ಬೆವರಿಳಿಸಿದರು.

ಇದನ್ನೂ ಓದಿ:ಡಿ ಗ್ಯಾಂಗ್‌ಗೆ ಮತ್ತೆ ಶಾಕ್ – ಸಾಕ್ಷಿಗೆ ಧಮ್ಕಿ ಹಾಕಿದ ಮೂವರು ಅರೆಸ್ಟ್

ಗುರುವಾರ ರಾತ್ರಿ ವೇಳೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡರು ದಿಢೀರ್ ರೌಂಡ್ಸ್ ಹಾಕಿದರು. ಔಟರ್ ರಿಂಗ್ ರೋಡ್ ಭಾಗದಲ್ಲಿ ರಸ್ತೆ ಗುಂಡಿ, ಧೂಳು ಮತ್ತು ಚರಂಡಿಗಳ ಅವ್ಯವಸ್ಥೆಗೆ ಬ್ರೇಕ್ ಹಾಕಲು ಖುದ್ದು ಸಚಿವರೇ ಕಣಕ್ಕಿಳಿದಿದ್ದರು. ಗುರುವಾರ ತಡರಾತ್ರಿ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಕೈಗೊಂಡ ಸಚಿವರು, ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ವರೆಗಿನ ರಸ್ತೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ ದೊಡ್ಡಾನೆಕ್ಕುಂದಿ ಜಂಕ್ಷನ್‌ನಲ್ಲಿ ಹೊಸದಾಗಿ ಡಾಂಬರು ಹಾಕಿದ್ದ ರಸ್ತೆಯನ್ನೇ ಮತ್ತೆ ಅಗೆದಿರುವುದನ್ನು ಕಂಡು ತೀವ್ರ ಆಕ್ರೋಶ ಹೊರಹಾಕಿದ ಸಚಿವರು, ‘ರಾತ್ರೋರಾತ್ರಿ ರಸ್ತೆ ಅಗೆದವರು ಯಾರು?’ ಎಂದು ಸ್ಥಳದಲ್ಲಿದ್ದ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಫುಟ್‌ಪಾತ್ ತೆರವು ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಸಚಿವರು, ‘ನಾವು ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡಬೇಡಿ ಎಂದು ಹೇಳುತ್ತಿದ್ದೇವೆ. ಫುಟ್‌ಪಾತ್ ಇಲ್ಲದೆ ಜನರು ರಸ್ತೆಗೆ ಇಳಿದು ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇದರಿಂದ ಪ್ರತಿ ವರ್ಷ 300 ಜನ ಮೃತಪಡುತ್ತಿದ್ದಾರೆ. ಇದಕ್ಕೆ ಯಾರು ಉತ್ತರ ಕೊಡುತ್ತಾರೆ? ನಿಮ್ಮ ಮನೆಯವರು ಯಾರಾದರೂ ಹೀಗೆ ಮೃತಪಟ್ಟರೆ ಏನು ಮಾಡುತ್ತೀರಿ? ಅದಕ್ಕಾಗಿಯೇ ಮುಖ್ಯ ರಸ್ತೆಗಳ ಫುಟ್‌ಪಾತ್ ಬಿಟ್ಟು, ಪಕ್ಕದ ರಸ್ತೆಗಳಲ್ಲಿ ವ್ಯಾಪಾರ ಮಾಡಿದರೆ ನಮ್ಮದೇನು ಅಡ್ಡಿಯಿಲ್ಲ’ ಎಂದು ಸ್ಪಷ್ಟಪಡಿಸಿದರು.

Sulekha

Leave a Reply

Your email address will not be published. Required fields are marked *