2ನೇ ಪಂದ್ಯದಲ್ಲೂ ಇಲ್ಲ ವೈಭವ್‌ಗೆ ಚಾನ್ಸ್ – ಸಂಜು ಸ್ಯಾಮ್ಸನ್ ಪರ ಡಿಕೆ ಬ್ಯಾಟಿಂಗ್

ಜುಲೈ 4 ರಂದು (ನಾಳೆ) ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ vs ಟೀ ಇಂಡಿಯಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಎರಡೂ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಾದ್ರೂ ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ಸಿಗುತ್ತಾ ಎಂಬುದು ಕುತೂಹಲ ಮೂಡಿಸಿದೆ. ಆದರೆ ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ವೈಭವ್ ಬಗ್ಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಆಡದ ಸಂಜು.. ಭಾರವಾದ ತಿಲಕ್ – ಬ್ಯಾಟಿಂಗ್ ಲೈನಪ್ ಬದಲಿಸಲ್ಲ ಏಕೆ?
2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದನ್ನು ಕ್ರಿಕ್‌ಬಜ್‌ನಲ್ಲಿ ವಿವರಿಸಿದ ದಿನೇಶ್ ಕಾರ್ತಿಕ್, ‘ವೈಭವ್ ಸೂರ್ಯವಂಶಿ ಚೊಚ್ಚಲ ಪ್ರವೇಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಎರಡನೇ ಪಂದ್ಯದಲ್ಲೂ ವೈಭವ್‌ಗೆ ಆಡುವ ಅವಕಾಶ ಸಿಗುವುದು ಕಷ್ಟಕರ. ಯಾಕೆಂದರೆ 2026 ರ ಟಿ20 ವಿಶ್ವಕಪ್‌ನಲ್ಲಿ ಅಪಾರ ಒತ್ತಡದ ಸಮಯದಲ್ಲೂ ಸಂಜು ಸ್ಯಾಮ್ಸನ್ ತಂಡಕ್ಕಾಗಿ ಅವರು ಏನು ಮಾಡಿದರು ಎಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಆಯ್ಕೆ ಮಂಡಳಿ ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡುತ್ತದೆ ಎಂದು ಭಾವಿಸುತ್ತೇನೆ. ಅಲ್ಲದೆ ಇಂತಹ ಸಂದರ್ಭದಲ್ಲಿ ನಾವು ಸಂಜು ಅವರನ್ನು ಬೆಂಬಲಿಸಬೇಕು. ಇದರಿಂದಾಗಿ ವೈಭವ್ ಚೊಚ್ಚಲ ಪಂದ್ಯವನ್ನಾಡಲು ಇನ್ನು ಕಾಯಬೇಕಾಗುತ್ತದೆ. ಅವಕಾಶ ಸಿಕ್ಕಾಗ ವೈಭವ್ ಕಂಡಿತವಾಗಿ ಅದ್ಭುತ ಪ್ರದರ್ಶನ ನೀಡುತ್ತಾರೆ ಏಕೆಂದರೆ ಅವರಲ್ಲಿ ಅಪಾರ ಪ್ರತಿಭೆ ಇದೆ ಎಂದು ಡಿಕೆ ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಡಿಕೆ ಹೇಳಿದ್ದಾರೆ. ತಿಲಕ್ ವರ್ಮಾ ಅವರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು. ಚೆಸ್ಟರ್-ಲೆ-ಸ್ಟ್ರೀಟ್ ಮೈದಾನದ ಬೌಂಡರಿಗಳು ದೊಡ್ಡದಾಗಿದ್ದವು. ಆದರೆ ಮ್ಯಾಂಚೆಸ್ಟರ್ ಮೈದಾನದ ಬೌಂಡರಿಗಳು ಚಿಕ್ಕದಾಗಿವೆ ಮತ್ತು ಚಪ್ಪಟೆಯಾಗಿವೆ. ಹೀಗಾಗಿ ಇಲ್ಲಿ ರನ್ ಗಳಿಸುವುದು ಸುಲಭ. ಆದ್ದರಿಂದ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ನಾನು ನಂಬುತ್ತೇನೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ನೋಡಿರಿ

