ಆಡದ ಸಂಜು.. ಭಾರವಾದ ತಿಲಕ್ – ಬ್ಯಾಟಿಂಗ್ ಲೈನಪ್ ಬದಲಿಸಲ್ಲ ಏಕೆ?
ವೈಭವ್ ಗೆ SLOT ನೆಪ ಮಾಡಿದ್ರಾ?

ಆಡದ ಸಂಜು.. ಭಾರವಾದ ತಿಲಕ್ – ಬ್ಯಾಟಿಂಗ್ ಲೈನಪ್ ಬದಲಿಸಲ್ಲ ಏಕೆ?ವೈಭವ್ ಗೆ SLOT ನೆಪ ಮಾಡಿದ್ರಾ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ-20ಐ ಮ್ಯಾಚ್ ಮಳೆಗೆ ಕೊಚ್ಚಿ ಹೋದ್ರೂ ಬ್ಯಾಟಿಂಗ್ ಲೈನಪ್ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಬೌಲಿಂಗ್​ನಲ್ಲಿ ಚೇಂಜಸ್ ಮಾಡಿದ್ರೂ ಬ್ಯಾಟಿಂಗ್ ನಲ್ಲಿ ಯಾಕೆ ಟಾಪ್-5ನಲ್ಲಿ ಒಂದೇ ಒಂದು ಬದಲಾವಣೆ ಮಾಡ್ತಿಲ್ಲ ಅನ್ನೋ ಪ್ರಶ್ನೆಗಳನ್ನ ಕೇಳ್ತಿದ್ದಾರೆ. ಹಾಗೇ ಇಬ್ಬರು ಆಟಗಾರರು ಮುಂದಿನ ಪಂದ್ಯಗಳಲ್ಲಿ ಬೇಕಾ.. ಇಬ್ರಲ್ಲಿ ಒಬ್ರನ್ನ ತೆಗೆದು ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡಿ ಅನ್ನೋದು ಅವ್ರ ವಾದ. ಆದ್ರೆ ಅದು ಅಷ್ಟು ಈಸಿನೂ ಇಲ್ಲ.

ಇದನ್ನೂ ಓದಿ : ಸಂಜಯ್ ಬಂಗಾರ್ ನೇತೃತ್ವದಲ್ಲಿ ಕೊಹ್ಲಿ ಪ್ರಾಕ್ಟೀಸ್ – ಇಂಗ್ಲೆಂಡ್ ವಿರುದ್ಧದ ODIಗೆ ವಿರಾಟ್ ಅಭ್ಯಾಸ

ಐಪಿಎಲ್​ನಲ್ಲಿ ಧೂಳೆಬ್ಬಿಸಿ ಟಿ-20ಐ ತಂಡಕ್ಕೂ ಸೆಲೆಕ್ಟ್ ಆಗಿರೋ ವೈಭವ್ ಸೂರ್ಯವಂಶಿ ಭಾರತದ ಪರ ಡೆಬ್ಯೂಗಾಗಿ ಕೋಟ್ಯಂತರ ಫ್ಯಾನ್ಸ್ ಕಾಯ್ತಿದ್ದಾರೆ. ಅಷ್ಟೇ ಯಾಕೆ ಮಾಜಿ ಕ್ರಿಕೆಟರ್ಸ್ ಕೂಡ ಆತನ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟಿದ್ದಾರೆ. ಆದ್ರೆ ಐರ್ಲೆಂಡ್​ನಲ್ಲೂ ಆಡ್ಲಿಲ್ಲ.. ಇಂಗ್ಲೆಂಡ್ ವಿರುದ್ಧದ ಫಸ್ಟ್ ಮ್ಯಾಚಲ್ಲೂ ಸ್ಲಾಟ್ ಸಿಕ್ಕಿಲ್ಲ. ಇದೇ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಅದ್ರಲ್ಲೂ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಮೇಲೆ ಪ್ರೆಶರ್ ಕ್ರಿಯೇಟ್ ಮಾಡಿದೆ.

ಸಂಜು ಬ್ಯಾಟ್ ಸೈಲೆಂಟ್.. ತಿಲಕ್ ವರ್ಮಾ ಟೆಸ್ಟ್ ಗೇಮ್!

2026ರಲ್ಲಿ ಭಾರತ ಟಿ-20 ವಿಶ್ವಕಪ್ ಗೆಲುವಿನ ಹೀರೋ ಸಂಜು ಸ್ಯಾಮ್ಸನ್ ಈಗ ಕಂಪ್ಲೀಟ್ ಅಂಡರ್ ಪ್ರೆಶರ್​ನಲ್ಲಿ ಇದ್ದಾರೆ. ಕಳೆದ ಮೂರು ಪಂದ್ಯಗಳಲ್ಲೂ ಅವ್ರ ಬ್ಯಾಟಿಂಗ್ ರನ್ಸ್ ಬಂದಿಲ್ಲ. ಓಪನರ್ ಆಗಿ ಕಣಕ್ಕಿಳಿಯುತ್ತಿರೋ ಸಂಜು ಸಿಂಗಲ್ ಡಿಜಿಟ್ ಕೂಡ ಫಿನಿಶ್ ಮಾಡ್ತಿಲ್ಲ. ಐರ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಕೇವಲ 5 ರನ್ ಬಾರಿಸಿದ್ದ ಸಂಜುಗೆ 2ನೇ ಪಂದ್ಯದಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಈಗ ಇಂಗ್ಲೆಂಡ್ ವಿರುದ್ಧ 7 ಬಾಲ್ ಫೇಸ್ ಮಾಡಿ 1 ರನ್ ಅಷ್ಟೇ ಬಂದಿದ್ದು. ಸೋ ಅಲ್ಲಿಗೆ 3 ಮ್ಯಾಚಲ್ಲಿ 6 ರನ್. ಅತ್ತ ತಿಲಕ್ ವರ್ಮಾ ರನ್ಸ್ ಬಂದ್ರೂ ಹೇಳಿಕೊಳ್ಳುವಂತ ಸ್ಟ್ರೈಕ್ ರೇಟ್ ಇಲ್ಲ. ಐರ್ಲೆಂಡ್ ವಿರುದ್ಧ ಮೊದಲ ಮ್ಯಾಚಲ್ಲಿ 21 ಬಾಲಲ್ಲಿ 19 ರನ್ಸ್, ಎರಡನೇ ಪಂದ್ಯದಲ್ಲಿ 46 ಬಾಲಲ್ಲಿ 55 ರನ್ಸ್ ಬಂದಿತ್ತು. ಈಗ ಇಂಗ್ಲೆಂಡ್ ವಿರುದ್ಧ 13 ಬಾಲಲ್ಲಿ 13 ರನ್ಸ್. ಇದೇ ಕಾರಣಕ್ಕೆ ಇಬ್ರಲ್ಲಿ ಒಬ್ರನ್ನ ಹೊರಗಿಡಿ ಅನ್ನೋದು ಕೆಲವರ ವಾದ. ಇವರಿಬ್ಬರನ್ನ ಹೊರಗಿಟ್ಟು ಸೂರ್ಯವಂಶಿಗೆ ಸ್ಲಾಟ್ ಕೊಡೋಕೆ ಸಾಧ್ಯನೇ ಇಲ್ಲ. ಯಾಕೆ ಅನ್ನೋದನ್ನ ಹೇಳ್ತೇನೆ. ನೋಡಿ.

ಸೂರ್ಯವಂಶಿ ಮತ್ತಷ್ಟು ಕಾಯಬೇಕು!

ಟಿ-20 ವಿಶ್ವಕಪ್ ನಲ್ಲಿ ಕೊನೆಯ ಮೂರು ಪಂದ್ಯಗಳಲ್ಲಿ ಸಂಜು ಧಮಾಕ

ಓಪನಿಂಗ್ ಸ್ಲಾಟ್ ನಲ್ಲಿ ಲೆಫ್ಟ್ ಮತ್ತು ರೈಟ್ ಹ್ಯಾಂಡ್ ಕಾಂಬಿನೇಷನ್

ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡ್ತಿರುವ ಅನುಭವಿ

ತಿಲಕ್ ವರ್ಮಾ ವಿಚಾರದಲ್ಲೂ ಡ್ರಾಪ್ ಮಾಡೋದು ಬಿಸಿಸಿಐಗೆ ಕಷ್ಟ

ನಂಬರ್ 3ನಿಂದ ಮಿಡಲ್ ಆರ್ಡರ್ ಗೆ ಪ್ರಮೋಟ್ ಮಾಡಿದ್ದೇ ರನ್ಸ್ ಗಾಗಿ

ಫ್ಯೂಚರ್ ಸ್ಟಾರ್ ಅನ್ನೋ ಥರದಲ್ಲಿ ತಿಲಕ್ ಗೆ ಚಾನ್ಸ್ ಕೊಡ್ತಿರುವ ಬಿಸಿಸಿಐ

ನಾಲ್ಕೈದು ಮ್ಯಾಚ್ ಗಳಲ್ಲಿ ಫ್ಲಾಪ್ ಆದ ತಕ್ಷಣ ಚೇಂಜ್ ಮಾಡಲು ಸಾಧ್ಯವಿಲ್ಲ

ಫೇಲ್ಯೂರ್ ಇದ್ರೂ ಅವಕಾಶಗಳನ್ನ ಕೊಟ್ಟು ನೋಡುವ ಮ್ಯಾನೇಜ್ ಮೆಂಟ್

ಕ್ರಿಕೆಟ್ ಕರಿಯರ್ ನಲ್ಲಿ ಕೆಲವೊಮ್ಮೆ ಫಾರ್ಮ್ ಕಳೆದುಕೊಂಡಿರುವ ಸ್ಟಾರ್ಸ್

ಇದೆಲ್ಲಾ ಕಾರಣಗಳಿಂದಲೇ ಬಿಸಿಸಿಐಗೆ ಬ್ಯಾಟಿಂಗ್ ಲೈನಪ್​ನಲ್ಲಿ ಚೇಂಜಸ್ ತರೋಕೆ ಆಗ್ತಾ ಇಲ್ಲ. ಯಾಕಂದ್ರೆ ಇರುವಂಥ ಆಟಗಾರರೆಲ್ಲ ಮ್ಯಾಚ್ ವಿನ್ನರ್​ಗಳೇ. ಕೆಲ ಪಂದ್ಯಗಳಲ್ಲಿ ಎಡವಿದ್ರೂ ಮತ್ತೆ ಕಂ ಬ್ಯಾಕ್ ಮಾಡಿ ಪಂದ್ಯ ಗೆಲ್ಲಿಸೋ ಸ್ಟ್ರೆಂಥ್ ಇರುವಂಥವ್ರೇ. ಒಂದು ವೇಳೆ ವೈಭವ್ ಗೆ ಚಾನ್ಸ್ ಕೊಡಲೇಬೇಕು ಅಂತಿದ್ರೆ ಮಿಡಲ್ ಆರ್ಡರ್ ನಲ್ಲಿ ಚೇಂಜಸ್ ಮಾಡ್ಬೋದು.

ಮೂವರು ಆಲೌಂಡರ್ಸ್ ಬದಲು 6 ಜನ ಬ್ಯಾಟರ್ಸ್ ಯಾಕಿಲ್ಲ?

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮ್ಯಾಚಲ್ಲಿ ಭಾರತ ಐವರು ಪ್ಯೂರ್ ಬ್ಯಾಟರ್ಸ್ ಮೂವರು ಆಲ್ ರೌಂಡರ್ಸ್ ಹಾಗೇ ಮೂವರು ಬೌಲರ್ಸ್ ಅಂತಾ ಪ್ಲೇಯಿಂಗ್ 11 ಸೆಟ್ ಮಾಡಿದೆ. ಟಿ-20 ಫಾರ್ಮೆಟ್ ಆಗಿರೋದ್ರಿಂದ ಒಬ್ಬ ಬೌಲರ್ 4 ಓವರ್ ಬೌಲ್ ಮಾಡೋದ್ರಿಂದ 5 ಬೌಲರ್ಸ್ ಕಡೆಯಿಂದ ಕಂಪ್ಲೀಟ್ ಓವರ್ಸ್ ಹಾಕಿಸಿದ್ರೆ ಒಬ್ಬ ಎಕ್ಸ್​ಟ್ರಾ ಆಲ್​ರೌಂಡರ್ ಅವಶ್ಯಕತೆ ಇರಲ್ಲ. ಆಗ ವೈಭವ್ಗೆ ಬ್ಯಾಟಿಂಗ್ ಸ್ಲಾಟ್ ಸಿಗುತ್ತೆ. ಅಂದ್ರೆ 6 ಜನ ಬ್ಯಾಟರ್ಸ್.. ಇಬ್ಬರು ಆಲ್ ರೌಂಡರ್ಸ್, ಮೂವರು ಬೌಲರ್ಸ್ ಹೀಗೆ ಟೀಂ ಸೆಟ್ ಮಾಡ್ಬೋದು. ಆದ್ರೆ ಮ್ಯಾನೇಜ್​ಮೆಂಟ್ 6ನೇ ಬೌಲರ್ ಆಪ್ಶನ್ ಇರ್ಲಿ ಅನ್ನೋ ಕಾರಣಕ್ಕೆ ವಾಷಿಂಗ್ಟನ್ ಸುಂದರ್ ಅಥವಾ ಸೂರ್ಯಾನ್ಶ್ ಶೆಡ್ಗೆಗೆ ಚಾನ್ಸ್ ಕೊಡ್ತಿದ್ದಾರೆ. ಬಟ್ ಇದ್ರಿಂದ ಯಾವುದೇ ಉಪಯೋಗ ಆಗಿಲ್ಲ. ಹೀಗಾಗಿ ಸೂರ್ಯವಂಶಿಗೆ ಚಾನ್ಸ್ ನೀಡಲೇಬೇಕು ಅನ್ಕೋಂಡ್ರೆ ಮಿಡಲ್ ಆರ್ಡರ್​​ನಲ್ಲಿ ಸರ್ಜರಿ ಮಾಡ್ಬೋದು. ಹಾಗಂತ ಇಲ್ಲಿ ಸೂರ್ಯವಂಶಿ ಬೆಂಚ್ ಕಾದ ಮಾತ್ರಕ್ಕೆ ಆತನಿಗೆ ನಷ್ಟ ಏನೂ ಇಲ್ಲ.

ಬೆಂಚ್ ಕಾದ್ರೂ ತಂಡದ ಬಗ್ಗೆ ತಿಳಿದುಕೊಳ್ತಿದ್ದಾನೆ ಸೂರ್ಯವಂಶಿ!

ವೈಭವ್ ಗೆ ಅವಕಾಶ ಕೊಟ್ಟಿಲ್ಲ ಎಂದ ಮಾತ್ರಕ್ಕೆ ಆತನನ್ನ ಇಗ್ನೋರ್ ಮಾಡ್ತಿದ್ದಾರೆ, ಟ್ಯಾಲೆಂಟ್ ಗೆ ಅವಕಾಶ ಸಿಗ್ತಿಲ್ಲ ಅಂತೇನಿಲ್ಲ. ಡಗೌಟ್ ನಲ್ಲೇ ಕುಳಿತು ಸಾಕಷ್ಟು ವಿಚಾರಗಳನ್ನ ಕಲಿತುಕೊಳ್ತಿದ್ದಾರೆ. 15ನೇ ವಯಸ್ಸಿಗೆ ತಂಡಕ್ಕೆ ಸೆಲೆಕ್ಟ್ ಆಗಿರೋದೇ ಆತನ ದೊಡ್ಡ ಸಾಧನೆ. ಮುಂದೊಂದು ದಿನ ಪ್ಲೇಯಿಂಗ್ 11ನಲ್ಲೂ ತನ್ನದೇ ಸ್ಲಾಟ್ ಪ್ರಿಸರ್ವ್ ಮಾಡಿಕೊಳ್ತಾರೆ. ಅಲ್ಲೀವರೆಗೆ ಸ್ವಲ್ಪ ಟೈಂ ಬೇಕಾಗ್ಬೋದು. ವೈಭವ್ ಅಷ್ಟೇ ಅಲ್ಲ ಸಾಕಷ್ಟು ಲೆಜೆಂಡರಿ ಕ್ರಿಕೆಟರ್ಸ್ ಕೂಡ ಅಂತಾರಾಷ್ಟ್ರೀಯ ತಂಡಕ್ಕೆ ಸೆಲೆಕ್ಟ್ ಆದ್ರೂ ಡೆಬ್ಯೂ ಮಾಡೋಕೆ ವರ್ಷಗಟ್ಟಲೆ ಕಾದದ್ದೂ ಇದೆ. ಕ್ರಿಕೆಟ್ ದೇವರು ಸಚಿನ್ ಕೂಡ ಅವಕಾಶಕ್ಕಾಗಿ ಒಂದು ವರ್ಷ ಕಾದಿದ್ರು. ಅಷ್ಟೇ ಯಾಕೆ ಸೂರ್ಯಕುಮಾರ್ ಯಾದವ್ ಕೂಡ ತಿಂಗಳುಗಟ್ಟಲೆ ಬೆಂಚ್ ಬಿಸಿ ಮಾಡಿದ್ರು. ವಿದೇಶಿ ತಾರೆಗಳಾದ ಬ್ರಿಯಾನ್ ಲಾರಾ, ಸ್ಟುವರ್ಟ್ ಮೆಕ್​ಗಿಲ್ ಹೀಗೆ ಸಾಕಷ್ಟು ಲೆಜೆಂಡರಿ ಕ್ರಿಕೆಟರ್ಸ್ ಕೂಡ ತಮ್ಮ ಅವಕಾಶಕ್ಕಾಗಿ ಕಾದು ನಂತ್ರ ಚರಿತ್ರೆ ಸೃಷ್ಟಿಸಿದ್ದಾರೆ. ಸೋ ಸೂರ್ವವಂಶಿಗೆ ಚಾನ್ಸ್ ಸಿಕ್ಕೇ ಸಿಗುತ್ತೆ. ಬಟ್ ಸ್ವಲ್ಪ ವೇಯ್ಟ್ ಮಾಡ್ಬೇಕಾಗುತ್ತೆ ಅಷ್ಟೇ.

Shantha Kumari

Leave a Reply

Your email address will not be published. Required fields are marked *