ಅಭಿ & ಕಿಶನ್ ರನ್ ಔಟ್ ಕಿರಿಕ್ – ಪರೀಕ್ಷೆಗಾಗಿ ಕ್ರಿಕೆಟ್ ಬಿಡ್ತಾರಾ ವೈಭವ್?
ಬೆಂಗಳೂರಿಗೆ ಹಾರ್ದಿಕ್ ಪಾಂಡ್ಯ ಶಿಫ್ಟ್?

ಅಭಿ & ಕಿಶನ್ ರನ್ ಔಟ್ ಕಿರಿಕ್ – ಪರೀಕ್ಷೆಗಾಗಿ ಕ್ರಿಕೆಟ್ ಬಿಡ್ತಾರಾ ವೈಭವ್?ಬೆಂಗಳೂರಿಗೆ ಹಾರ್ದಿಕ್ ಪಾಂಡ್ಯ ಶಿಫ್ಟ್?

 

ಪಿಚ್‌ನಲ್ಲೇ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಭಾರತದ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಇಶಾನ್ ಕಿಶನ್ ಚೆಂಡನ್ನು ಮಿಡ್-ವಿಕೆಟ್ ಕಡೆಗೆ ತಳ್ಳಿ, ತಮ್ಮ ಸಹ-ಆಟಗಾರ ಅಭಿಷೇಕ್ ಶರ್ಮಾ ಅವರನ್ನು ನೋಡದೆಯೇ ರನ್‌ಗಾಗಿ ಓಡಿದರು. ಆದರೆ ಅಲ್ಲಿ ಫೀಲ್ಡರ್ ಹ್ಯಾರಿ ಬ್ರೂಕ್ ಚೆಂಡನ್ನು ತಡೆದಿದ್ದನ್ನು ಗಮನಿಸಿದ ಅಭಿಷೇಕ್ ರನ್ ಬೇಡವೆಂದು ಅಲ್ಲೇ ನಿಂತರು. ಆದ್ರೆ ಈ ವೇಳೆ ಇಶಾನ್ ಕಿಶನ್ ರನೌಟ್ ಆಗುತ್ತಿದ್ದಂತೆ ಅಸಮಾಧಾನಗೊಂಡ ಅಭಿಷೇಕ್ ಶರ್ಮಾ ಮೈದಾನದಲ್ಲೇ ತಮ್ಮ ಆಕ್ರೋಶ ಹೊರಹಾಕಿದರು.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದು, ಭರ್ಜರಿ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ವೇಳೆ 3 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ನೂರು ಸಿಕ್ಸರ್‌ ಬಾರಿಸಿದ ಬ್ಯಾಟರ್‌ ಎನಿಸಿಕೊಂಡರು.

ಇದನ್ನೂ ಓದಿ: ಸೂರ್ಯವಂಶಿ ಇನ್ನೆಷ್ಟು ಕಾಯಬೇಕು –  POWER PLAYನಲ್ಲೇ ಭಾರತ ಫೇಲ್

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ  ಹಾಫ್ ಸೆಂಚುರಿಯೊಂದಿಗೆ ಇಂಗ್ಲೆಂಡ್​ನಲ್ಲಿ ಅರ್ಧಶತಕ ಸಿಡಿಸಿದ ಭಾರತ ಟಿ20 ತಂಡದ ಮೊದಲ ನಾಯಕನೆಂಬ ಭರ್ಜರಿ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದ್ದಕ್ಕೂ ಮುಂಚೆ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ನಾಯಕನಾಗಿದ್ರು. 2018 ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ರನ್​ಗಳಿಸಿದ್ದು ಭಾರತೀಯ ನಾಯಕನ ಶ್ರೇಷ್ಠ ಸಾಧನೆಯಾಗಿತ್ತು.

ವೈಭವ್ ಸೂರ್ಯವಂಶಿ ಬಗ್ಗೆ  ಆಫ್ರಿಕಾದ ಮಾಜಿ ಬ್ಯಾಟಿಂಗ್ ದಂತಕಥೆ ಡ್ಯಾರಿಲ್ ಕಲಿನನ್  ಶಾಕಿಂಗ್ ಹೇಳಿಕೆ ನೀಡಿದ್ದಾರೆ.  ವೈಭವ್ ಈಗ ಮನೆಯಲ್ಲೇ ಇದ್ದು, ಪರೀಕ್ಷೆಗಳಿಗೆ ತಯಾರಿ ನಡೆಸಬೇಕು, ಸ್ನೇಹಿತರೊಂದಿಗೆ ಗಲ್ಲಿ ಕ್ರಿಕೆಟ್ ಆಡಬೇಕು ಮತ್ತು ಸಾಧ್ಯವಾದಷ್ಟು ಸಾಮಾನ್ಯ ಬಾಲ್ಯವನ್ನು ಬದುಕಬೇಕು ಎಂದು ನಾನು ನಂಬುತ್ತೇನೆ. ಇದರರ್ಥ ಅವರ ಪ್ರತಿಭೆಯನ್ನು ನಿರ್ಲಕ್ಷಿಸಬೇಕು ಎಂದಲ್ಲ, ಬದಲಿಗೆ, ಅವರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸಮಯ ನೀಡಿದರೆ ಮಾತ್ರ ಅವರ ಪ್ರತಿಭೆ ಸಂಪೂರ್ಣವಾಗಿ ಅರಳುತ್ತದೆ ಎಂದಿದ್ದಾರೆ.

ಟೀಮ್ ಇಂಡಿಯಾ ಆಲ್‌ರೌಂಡರ್ ಶಾರ್ದೂಲ್ ಠಾಕೂರ್  ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಪ್ರತಿಷ್ಠಿತ ‘ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಗಂಭೀರ್ ಮತ್ತು ನಾಯಕ ಗಿಲ್ ತನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ. ಆಲ್‌ರೌಂಡರ್ ಆಗಿ ಆಡುತ್ತಿದ್ದ ನನಗೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗ್ ಮಾಡಲು ಸಿಕ್ಕಿದ್ದು ಕೇವಲ 27 ಓವರ್‌ಗಳು ಮಾತ್ರ.  ಇಂಗ್ಲೆಂಡ್‌ನಲ್ಲಿ ನನ್ನನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗಿಲ್ಲ ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ. ಟೀಮ್ ಮ್ಯಾನೇಜ್‌ಮೆಂಟ್‌ನ ಒಟ್ಟಾರೆ ಲೆಕ್ಕಾಚಾರದಲ್ಲೇ ದೊಡ್ಡ ತಪ್ಪಾಗಿತ್ತು ಎಂದಿದ್ದಾರೆ.

ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತಾದ  ಬಿಗ್ ಅಪ್ಡೇಟ್ ಹೊರ ಬಿದ್ದಿದೆ.  ಮೂಲಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರು ಮುಂಬೈ ಬಿಟ್ಟು ಈಗ ಕಾಯಂ ಆಗಿ ಬೆಂಗಳೂರಿಗೆ ತಮ್ಮ ವಾಸ್ತವ್ಯವನ್ನು ಬದಲಾಯಿಸಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಅತ್ಯಂತ ದುಬಾರಿ ಮತ್ತು ಐಷಾರಾಮಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಫ್ರಾಂಚೈಸಿಯೊಳಗೆ ಇನ್ನೂ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು CSK ಸಿಇಓ ವಿಶ್ವನಾಥನ್  ಹೇಳಿದ್ದಾರೆ. ನಾವು ಇದುವರೆಗೆ ಯಾವುದೇ ಚರ್ಚೆ ನಡೆಸಿಲ್ಲ. ಅಂತಹ ಯಾವುದೇ ನಿರ್ಧಾರವನ್ನು ಆ ಆವೃತ್ತಿಯ ಸೂಕ್ತ ಪರಿಶೀಲನೆಯ ನಂತರವಷ್ಟೇ ತೆಗೆದುಕೊಳ್ಳಲಾಗುತ್ತದೆ. ಆ ಪರಿಶೀಲನೆ ಮೇಜರ್ ಲೀಗ್ ಕ್ರಿಕೆಟ್ ನಂತರ ನಡೆಯಲಿದೆ ಎಂದಿದ್ದಾರೆ.

ಇಂಗ್ಲೆಂಡ್ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್ IPL ಸೇರಿದಂತೆ ಯಾವುದೇ ಜಾಗತಿಕ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.  ನಾನು ಇಂಗ್ಲೆಂಡ್ ಕ್ರಿಕೆಟ್‌ಗೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಇಂಗ್ಲೆಂಡ್​ನಲ್ಲಿ ನಡೆಯುವ ‘ದಿ ಹಂಡ್ರೆಡ್’ ಹೊರತುಪಡಿಸಿ ನಾನು ಯಾವುದೇ ಫ್ರಾಂಚೈಸಿ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಕೇರಳ ಕ್ರಿಕೆಟ್ ಅಸೋಸಿಯೇಷನ್ ಶ್ರೀಶಾಂತ್ ಮೇಲೆ ಹೇರಿದ್ದ 3 ವರ್ಷಗಳ ನಿಷೇಧವನ್ನು ತೆರವುಗೊಳಿಸಿದೆ. ಸಂಜು ಸ್ಯಾಮ್ಸನ್ ಕುರಿತ ಹಿಂದಿನ ಹೇಳಿಕೆಗಳಿಗಾಗಿ ಶ್ರೀಶಾಂತ್ ಕ್ಷಮೆಯಾಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಮುಂದೆ ಶ್ರೀಶಾಂತ್, ಕೆಸಿಎಲ್ ಸೀಸನ್ 3 ರಲ್ಲಿ ಏರೀಸ್ ಕೊಲ್ಲಂ ಸೈಲರ್ಸ್ ಫ್ರಾಂಚೈಸಿಯ ಸಹ-ಮಾಲೀಕರಾಗಿ ಮುಂದುವರಿಯಲಿದ್ದಾರೆ.

ಕಳೆದ ವರ್ಷ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ 39 ವರ್ಷದ ಅಶ್ವಿನ್, ಪ್ರಸ್ತುತ ಯುಎಸ್‌ಎಯಲ್ಲಿ ನಡೆಯುವ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡಬ್ಲಿನ್ ಗಾರ್ಡಿಯನ್ಸ್ ತಂಡದ ನಾಯಕ ಮತ್ತು ಮೆಂಟರ್ ಆಗಿ ಸೇವೆ ಸಲ್ಲಿಸಲಿದ್ದಾರೆ.. ಈ ಹೊಸ ಲೀಗ್ ಅನ್ನು ಕ್ರಿಕೆಟ್ ಐರ್ಲೆಂಡ್, ಕ್ರಿಕೆಟ್ ಸ್ಕಾಟ್ಲೆಂಡ್ ಮತ್ತು ರಾಯಲ್ ಡಚ್ ಕ್ರಿಕೆಟ್ ಅಸೋಸಿಯೇಷನ್ ​​ನಡುವಿನ ಪ್ರತಿಷ್ಠಿತ ಜಂಟಿ ಉದ್ಯಮವಾಗಿ ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು ಆರು ಫ್ರಾಂಚೈಸಿಗಳು ಸ್ಪರ್ಧಿಸಲಿವೆ.

Kishor KV

Leave a Reply

Your email address will not be published. Required fields are marked *