ಸಂಜಯ್ ಬಂಗಾರ್ ನೇತೃತ್ವದಲ್ಲಿ ಕೊಹ್ಲಿ ಪ್ರಾಕ್ಟೀಸ್ – ಇಂಗ್ಲೆಂಡ್ ವಿರುದ್ಧದ ODIಗೆ ವಿರಾಟ್ ಅಭ್ಯಾಸ

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಇದೀಗ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಲು ಸಜ್ಜಾಗಿದ್ದಾರೆ. ಹೀಗಾಗಿ ಪ್ರಸ್ತುತ ಇಂಗ್ಲೆಂಡ್ನಲ್ಲಿ ನೆಲೆಸಿರುವ ಕೊಹ್ಲಿ, ಭಾರತದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರ ನೇತೃತ್ವದಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಕೊಹ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಸೂರ್ಯವಂಶಿ ಇನ್ನೆಷ್ಟು ಕಾಯಬೇಕು – POWER PLAYನಲ್ಲೇ ಭಾರತ ಫೇಲ್
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ಕ್ಲಿಪ್‌ನಲ್ಲಿ, 37 ವರ್ಷದ ವಿರಾಟ್ ಕೊಹ್ಲಿ ತಮ್ಮ ಕಿಟ್ ಬ್ಯಾಗ್ ಅನ್ನು ಭುಜದ ಮೇಲೆ ಹೊತ್ತುಕೊಂಡು ತರಬೇತಿ ಮೈದಾನಕ್ಕೆ ಬರುತ್ತಾರೆ, ಅಲ್ಲಿ ಅವರನ್ನು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಸ್ವಾಗತಿಸುತ್ತಾರೆ. ನಂತರ ಇಬ್ಬರೂ ಮೈದಾನದ ಮಧ್ಯದಲ್ಲಿ ನಿಂತು ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ವರದಿಗಳ ಪ್ರಕಾರ, ಕೊಹ್ಲಿ ಇತ್ತೀಚೆಗೆ ಅಲಿಬಾಗ್‌ನಲ್ಲಿ ವಿಶೇಷ ಬ್ಯಾಟಿಂಗ್ ಶಿಬಿರವನ್ನು ಪೂರ್ಣಗೊಳಿಸಿದ್ದರು, ಆ ಸಮಯದಲ್ಲಿ ಬಂಗಾರ್, ಕೊಹ್ಲಿಗೆ ವಿವಿಧ ತಾಂತ್ರಿಕ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡಿದ್ದರು. ಇದೀಗ ಇಂಗ್ಲೆಂಡ್ನಲ್ಲೂ ಈ ಜೋಡಿ ಮ್ಯಾಜಿಕ್ ಮಾಡಲು ಮುಂದಾಗಿದೆ.
ಸಂಜಯ್ ಬಂಗಾರ್ 2014 ರಿಂದ 2019 ರವರೆಗೆ ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿದ್ದರು. ಆ ಸಮಯದಲ್ಲಿ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದರು. ಬಂಗಾರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಕೊಹ್ಲಿಗೆ ಯಾವಾಗಲೂ ಪ್ರಯೋಜನಕಾರಿಯಾಗಿದೆ. ಹೀಗಾಗಿ 2027 ರ ಏಕದಿನ ವಿಶ್ವಕಪ್‌ಗೆ ತಯಾರಿ ದೃಷ್ಟಿಯಿಂದ ಬಹಳ ಮುಖ್ಯ ಎನಿಸಿಕೊಂಡಿರುವ ಈ ಸರಣಿಗೆ ವಿರಾಟ್ ಕೊಹ್ಲಿ ಕೂಡ ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿದ್ದಾರೆ.

ನೋಡಿರಿ

