ಸೂರ್ಯವಂಶಿ ಕ್ರೇಜ್ ಗೆ ಸಿಡಿದ ಶ್ರೇಯಸ್ – ರನ್ಸ್ ಹೊಡೆದೇ ಬಂದಿರೋದು ಎಂದಿದ್ದೇಕೆ?
ಚಾನ್ಸ್ ಕೇಳಿದ್ರೆ ಕೆಂಡವಾಗಿದ್ದೇಕೆ ನಾಯಕ!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಫಸ್ಟ್ ಮ್ಯಾಚ್ ಮಳೆ ಕಾರಣಕ್ಕೆ ರದ್ದಾಯ್ತು. ಸೋ ನೋ ರಿಸಲ್ಟ್.. ಉಳಿದಿರೋ ನಾಲ್ಕು ಮ್ಯಾಚಲ್ಲಿ ಸರಣಿ ಕೈವಶ ಆಗ್ಬೇಕು ಅಂದ್ರೆ 3 ಮ್ಯಾಚ್ ಆದ್ರೂ ಗೆಲ್ಲಲೇಬೇಕು. 2 ಗೆದ್ರೆ ಸರಣಿ ಸಮಬಲ ಆಗುತ್ತೆ. ಹೀಗಾಗಿ ಭಾರತ ಮುಂದಿನ ಪ್ರತೀ ಮ್ಯಾಚನ್ನೂ ಡು ಆರ್ ಡೈ ಅನ್ನೋ ಥರನೇ ಆಡ್ಬೇಕು. ಆದ್ರೆ ಈ ಸರಣಿಗೂ ಮುನ್ನ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ನೀಡಿರೋ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವೈಭವ್ ಸೂರ್ಯವಂಶಿ ಕ್ರೇಜ್ ಕಂಡು ಸಿಟ್ಟಾದ್ರಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಸೂರ್ಯವಂಶಿ ಬಗ್ಗೆ ಭಾರತ ಟಿ-20ಐ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ನೀಡಿರೋ ಸ್ಟೇಟ್ಮೆಂಟ್ಗಳು ಸಿಕ್ಕಾಪಟ್ಟೆ ಕಾಂಟ್ರವರ್ಶಿಯಲ್ ಆಗಿದೆ.
ಇದನ್ನೂ ಓದಿ : IPL ಸ್ಟಾರ್ ಗಳೇ ಟೀಂ ಇಂಡಿಯಾಗೆ ವಿಲನ್ – ENG ತಂಡದಲ್ಲಿ RCB ಸ್ಟಾರ್ಸ್ ಹವಾ!
ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಭಾರತ ಒಂದೇ ಒಂದು ಸರಣಿಯನ್ನೂ ಸೋಲದೆ ಟಿ-20 ವಿಶ್ವಕಪ್ನಲ್ಲೂ ಗೆದ್ದು ಬೀಗಿತು. ಹೀಗಿದ್ರೂ ಸೂರ್ಯನನ್ನ ಇಂಡಿವಿಶ್ಯುಯಲ್ ಪರ್ಫಾಮೆನ್ಸ್ ಇಲ್ಲ ಅಂತಾ ನಾಯಕತ್ವದ ಜೊತೆಗೆ ತಂಡದಿಂದಲೇ ಬಿಸಿಸಿಐ ಹೊರಗಿಟ್ಟಿತ್ತು. ಆ ಬಳಿಕ 3 ವರ್ಷದಿಂದ ಟಿ—20ಐ ಪಂದ್ಯವನ್ನೇ ಆಡದ ಶ್ರೇಯಸ್ ಅಯ್ಯರ್ಗೆ ಕ್ಯಾಪ್ಟನ್ಸಿ ನೀಡಿ ತಂಡಕ್ಕೆ ಗ್ರ್ಯಾಂಡ್ ವೆಲ್ಕಂ ಮಾಡಿದ್ರು. ಅನ್ ಫಾರ್ಚುನೇಟ್ಲಿ ಐರ್ಲೆಂಡ್ ವಿರುದ್ಧ ಫಾರ್ ದಿ ಫಸ್ಟ್ ಟೈಂ ಮ್ಯಾಚ್ ಸೋಲೋದ್ರ ಜೊತೆಗೆ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆದ್ರು. ಈಗ ಇಂಗ್ಲೆಂಡ್ ವಿರುದ್ಧ ಸಿರೀಸ್ ಸ್ಟಾರ್ಟ್ ಆಗಿದೆ. ಶತಾಯ ಗತಾಯ ಈ ಸರಣಿಯಲ್ಲಿ ಭಾರತ ಗೆಲ್ಬೇಕು. ಬಟ್ ಇಂಥಾ ಟೈಮಲ್ಲಿ ಶ್ರೇಯಸ್ ಆಡಿರೋ ಮಾತುಗಳೇ ಸಾಕಷ್ಟು ಚರ್ಚೆಯಾಗ್ತಿದೆ.
ಸೂರ್ಯವಂಶಿ ಕ್ರೇಜ್ ಕಂಡು ಶ್ರೇಯಸ್ ಸಿಟ್ಟಾದ್ರಾ?
ಸದ್ಯ ಜಗತ್ತಿನಲ್ಲೇ ಸೆನ್ಸೇಷನಲ್ ಕ್ರಿಕೆಟರ್ ಅಂದ್ರೆ ವೈಭವ್ ಸೂರ್ಯವಂಶಿ. ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನೇ ಆಳಿದ ಲೆಜೆಂಡರಿ ಪ್ಲೇಯರ್ಸ್ ಕೂಡ ಸೂರ್ಯವಂಶಿ ವೈಭವವನ್ನ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಹಾಗಂತ ಸುಖಾಸುಮ್ಮನೆ ಯಾರೂ ಅಪ್ರಿಶಿಯೇಟ್ ಮಾಡ್ತಿಲ್ಲ. ಆತನಲ್ಲಿರೋ ಟ್ಯಾಲೆಂಟ್, ಇನೋಸೆನ್ಸ್, ಕ್ರೀಡೆ ಬಗೆಗಿನ ಪ್ರೀತಿ ಎಲ್ಲವನ್ನೂ ನೋಡಿಯೇ ಭಾರತದ ಭವಿಷ್ಯದ ತಾರೆ ಅಂತಾನೇ ಪ್ರೆಡೆಕ್ಟ್ ಮಾಡ್ತಿದ್ದಾರೆ. ಆತನ ಸಾಮರ್ಥ್ಯ ನೋಡಿಯೇ ಐಪಿಎಲ್ ಬಳಿಕ ಬಿಸಿಸಿಐ ಕೂಡ ಟಿ-20ಐ ಸೀನಿಯರ್ಸ್ ಟೀಮ್ಗೆ ಅವಕಾಶ ನೀಡಿತ್ತು. ಆದ್ರೆ ಐರ್ಲೆಂಡ್ ವಿರುದ್ಧ ಭಾರತದ ಪರ ಡೆಬ್ಯೂ ಮಾಡೋಕೆ ಆಗ್ಲಿಲ್ಲ. ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗ ಇಂಗ್ಲೆಂಡ್ನಲ್ಲಾದ್ರೂ ಚಾನ್ಸ್ ಕೊಡ್ತೀರಾ ಅಂಥಾ ಪ್ರಶ್ನಿಸಿದ್ರೆ ಶ್ರೇಯಸ್ ಅಯ್ಯರ್ ಸಿಡಿಮಿಡಿಗೊಂಡಿದ್ದಾರೆ.
ವೈಭವ್ ಆಡಿಸ್ತೀರಾ ಅಂದ್ರೆ ಎಲ್ರೂ ರನ್ಸ್ ಗಳಿಸಿಯೇ ಬಂದಿರೋದು ಎಂದ ನಾಯಕ!
ಶ್ರೇಯಸ್ ಅಯ್ಯರ್ ಕೆಲ ಸ್ಟೇಟ್ಮೆಂಟ್ಸ್ ಹಾಗೇ ಅವ್ರ ವರ್ತನೆ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿರುತ್ತೆ. ಸ್ವಲ್ಪ ರೂಡ್ ಬಿಹೇವಿಯರ್ ಅಂತಾರೆ. ಈಗ ಸೂರ್ಯವಂಶಿ ಬಗ್ಗೆ ಶ್ರೇಯಸ್ ಆಡಿರೋ ಮಾತುಗಳು ಮತ್ತೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಶ್ರೇಯಸ್ ಅಯ್ಯರ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡ್ತಿದ್ರು. ಈ ವೇಳೆ ಇಂಗ್ಲೆಂಡ್ ಸರಣಿಯ ಮೊದಲ ಮ್ಯಾಚಲ್ಲಿ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡ್ತೀರಾ ಅಂತಾ ಕೇಳಲಾಗಿತ್ತು. ಈ ವೇಳೆ ಸಿಟ್ಟಾದ ಶ್ರೇಯಸ್ ಅಯ್ಯರ್, ತಂಡಕ್ಕೆ ಆಯ್ಕೆಯಾಗಿರೋ ಎಲ್ರೂ ರನ್ಸ್ ಗಳಿಸಿಯೇ ಬಂದಿರೋದು. ಯಾರು ಸುಮ್ನೆ ಸೆಲೆಕ್ಟ್ ಆಗಿಲ್ಲ. ಯಾರೋ ಒಬ್ಬ ಆಟಗಾರ ರನ್ಸ್ ಗಳಿಸ್ತಾನೆ ಅಂತಲ್ಲ ಎನ್ನುವ ಮೂಲಕ ತಮ್ಮೊಳಗಿನ ಸಿಟ್ಟನ್ನ ಹೊರಹಾಕಿದ್ರು. ಹಾಗೇ ಸೂರ್ಯವಂಶಿಗೆ ಹೆಚ್ಚಿನ ಕ್ರೇಜ್ ಹಾಗೇ ಹೈಪ್ ಸಿಗ್ತಿದ್ಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ನಾಯಕ, ನನಗೇನು ಹಾಗೆ ಅನ್ನಿಸ್ತಿಲ್ಲ. ಸೋಶಿಯಲ್ ಮೀಡಿಯಾ ಬಳಸೋದೇ ಇಲ್ಲ ಅಂದ್ರು. ಐರ್ಲೆಂಡ್ ವಿರುದ್ಧದ ಸರಣಿಗೂ ಮುನ್ನವೂ ಇಂಥದ್ದೇ ಸ್ಟೇಟ್ಮೆಂಟ್ಸ್ ಕೊಟ್ಟಿದ್ರು. ಈಗ ಇಂಗ್ಲೆಂಡ್ನಲ್ಲೂ ಹಾಗೇ ಮಾತಾಡಿದ್ದಾರೆ.
ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಟ್ಟಿಲ್ಲ ಅಂದ್ರೆ ಬ್ಯಾಟಿಂಗ್ ಲೈನಪ್ ಚೇಂಜ್ ಮಾಡ್ತಿಲ್ಲ ಅಂತಾ ಡೈರೆಕ್ಟ್ ಆಗೇ ಹೇಳ್ಬೋದಿತ್ತು. ಅಷ್ಟಕ್ಕೂ ಇಲ್ಲಿ ವೈಭವ್ ಸೂರ್ಯವಂಶಿಯನ್ನ ಪ್ಲೇಯಿಂಗ್ 11ನಲ್ಲಿ ಆಡಿಸಿ ಅಂತಾ ಒತ್ತಾಯ ಮಾಡೋದಕ್ಕೆ ಕಾರಣವೂ ಇದೆ. ಐರ್ಲೆಂಡ್ ವಿರುದ್ಧ ಭಾರತದ ಪರ ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್ ಆಗಿತ್ತು. ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ ವೀಕ್ನೆಸ್ನಿಂದಲೇ ಸೋತು ಸುಣ್ಣವಾಗಿದ್ರು. ಹೀಗಿದ್ರೂ ಬೌಲಿಂಗ್ನಲ್ಲಿ ಬದಲಾವಣೆ ಮಾಡಿದ್ರೂ ಕೂಡ ಬ್ಯಾಟಿಂಗ್ ಆರ್ಡರ್ನಲ್ಲಿ ಯಾವುದೇ ಚೇಂಜಸ್ ಇರ್ಲಿಲ್ಲ. ಇದೇ ಕಾರಣಕ್ಕೆ ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡಿ. ಭಾರತಕ್ಕೆ ಬ್ಯಾಟಿಂಗ್ ಸ್ಟ್ರೆಂಥ್ ಸಿಗುತ್ತೆ ಅಂತಾ ಮಾಜಿ ಕ್ರಿಕೆಟರ್ಸ್ ಕೂಡ ಒತ್ತಾಯ ಮಾಡ್ತಿದ್ದಾರೆ. ಆಬಿಯಸ್ಲಿ ಸೂರ್ಯವಂಶಿ ಡೆಬ್ಯೂಗಾಗಿ ಎಲ್ರೂ ಕ್ಯೂರಿಯಸ್ ಆಗಿದ್ದಾರೆ. ಹೀಗಾಗಿ ಆಡಿಸ್ತೀರಾ ಅಂತಾ ಕೇಳೋದು ಕಾಮನ್. ಬಟ್ ಕೊಡುವಂಥ ಆನ್ಸರ್ನಲ್ಲಿ ಸ್ವಲ್ಪ ಡೀಸೆಂಟ್ ಆಗಿ ಹೇಳ್ಬೋದಿತ್ತು.

ನೋಡಿರಿ

