ಭಾರತದ ಬ್ಯಾಟಿಂಗ್ ಮುಗಿಯುತ್ತಿದ್ದಂತೆ ಮಳೆ ಅಬ್ಬರ – ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯ ರದ್ದು

ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ಬುಧವಾರ ರಾತ್ರಿ ಆರಂಭವಾಗಿದೆ. ಆದರೆ, ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮುಗಿಯುತ್ತಿದ್ದಂತೆ ಮಳೆರಾಯನ ಆಟ ಶುರುವಾಗಿದೆ. ಇದರ ಪರಿಣಾಮ ಪಂದ್ಯ ರದ್ದಾಗಿದೆ.
ಇದನ್ನೂ ಓದಿ:30 ಮ್ಯಾಚ್.. 9 ಸಲ DUCK OUT – Switch ON.. Switch OFF ಬ್ಯಾಟಿಂಗ್
ಚೆಸ್ಟರ್-ಲೆ-ಸ್ಟ್ರೀಟ್ನ ರಿವರ್ಸೈಡ್ ಮೈದಾನದಲ್ಲಿ ನಡೆದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲೇ 6 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ನಂತರ ಭಾರತದ ಯಂಗ್ ಗನ್ ಅಭಿಷೇಕ್ ಶರ್ಮಾ ಅಬ್ಬರಿಸಲು ಶುರು ಮಾಡಿದರು. ಅಭಿಷೇಕ್ ಶರ್ಮಾ ಕೇವಲ 24 ಎಸೆತಗಳಲ್ಲಿ 59 ರನ್ ಗಳಿಸಿದರು. ನಂತರ ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ 47 ಎಸೆತಗಳಲ್ಲಿ 68 ರನ್ ಗಳಿಸಿದರು. ಶಿವಂ ದುಬೆ ಕೇವಲ 21 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ಆಂಗ್ಲರಿಗೆ ನೀಡಿತು. ಆಗಲೇ ಶುರುವಾಗಿದ್ದು ನೋಡಿ ಮಳೆರಾಯನ ಆಟ.
ಭಾರತದ ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಭಾರಿ ಮಳೆ ಆರಂಭವಾಯಿತು. ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಆರಂಭವಾಗಲು ಸಾಧ್ಯವೇ ಆಗದಷ್ಟು ಮಳೆ ಸುರಿದಿದ್ದರಿಂದ, ಸ್ಥಳೀಯ ಕಾಲಮಾನ ರಾತ್ರಿ 8:15 ಕ್ಕೆ ಅಂಪೈರ್‌ಗಳು ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಿದರು. ಇದರಿಂದಾಗಿ 5 ಪಂದ್ಯಗಳ ಟಿ20 ಸರಣಿಯು ಸದ್ಯಕ್ಕೆ 0-0 ಯಿಂದ ಸಮಬಲದಲ್ಲಿದೆ. ಸರಣಿಯ ಎರಡನೇ ಟಿ20 ಪಂದ್ಯವು ಶನಿವಾರ (ಜು.4) ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

ನೋಡಿರಿ

