30 ಮ್ಯಾಚ್.. 9 ಸಲ DUCK OUT – Switch ON.. Switch OFF ಬ್ಯಾಟಿಂಗ್
ಅಭಿಷೇಕ್ ಆಟ ವರವೋ.. ಶಾಪವೋ..?

30 ಮ್ಯಾಚ್.. 9 ಸಲ DUCK OUT – Switch ON.. Switch OFF ಬ್ಯಾಟಿಂಗ್ಅಭಿಷೇಕ್ ಆಟ ವರವೋ.. ಶಾಪವೋ..?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ-20ಐ ಸರಣಿ ಇವತ್ತಿಂದ ಸ್ಟಾರ್ಟ್ ಆಗ್ತಿದೆ. ಫಸ್ಟ್ ಮ್ಯಾಚಲ್ಲೇ ಗೆದ್ದು ಲೀಡ್ ತಗೊಳ್ಬೇಕು ಅನ್ನೋದು ಎರಡೂ ತಂಡಗಳ ಟಾರ್ಗೆಟ್. ಆಂಗ್ಲರಿಗೆ ತವರಿನ ಅಡ್ವಾಂಟೇಜ್ ಇದ್ರೆ ಭಾರತಕ್ಕೆ ಶತಾಯ ಗತಾಯ ಗೆಲ್ಲಬೇಕೆನ್ನೋ ಹಠ ಇದೆ. ಹಾಗೇ ಈ ಪಂದ್ಯಕ್ಕೂ ಮುನ್ನ ಭಾರತದ ಸ್ಫೋಟಕ ಓಪನರ್ ಅಭಿಷೇಕ್ ಶರ್ಮಾ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಹೀರೋ ಆದವ್ರು ಸಡನ್ ಆಗಿ ಝೀರೋ ಆಗ್ತಿದ್ದಾರೆ. ಅವ್ರ ಸ್ವಿಚ್ ಆನ್ ಸ್ವಿಚ್ ಆಫ್ ಪ್ರದರ್ಶನವೇ ಸುದ್ದಿಯಲ್ಲಿದೆ. ಕಳೆದ 6 ತಿಂಗಳ ಜರ್ನಿ ಆತಂಕ ಮೂಡಿಸಿದೆ.

ಇದನ್ನೂ ಓದಿ : IPL ಸ್ಟಾರ್ ಗಳೇ ಟೀಂ ಇಂಡಿಯಾಗೆ ವಿಲನ್ – ENG ತಂಡದಲ್ಲಿ RCB ಸ್ಟಾರ್ಸ್ ಹವಾ!

ಕಳೆದ ಎರಡು ವರ್ಷಗಳಿಂದ ಟಿ-20ಐ ಫಾರ್ಮೆಟ್​ನಲ್ಲಿ ಧೂಳೆಬ್ಬಿಸ್ತಿರೋ ಬ್ಯಾಟರ್ ಅಂದ್ರೆ ಅದು ಅಭಿಷೇಕ್ ಶರ್ಮಾ. ತಮ್ಮ ಪವರ್ ಹಿಟ್ಟಿಂಗ್ ಎಬಿಲಿಟಿ ಮೂಲಕವೇ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಅವ್ರನ್ನ ಕಟ್ಟಿಹಾಕೋಕೆ ಗ್ರೌಂಡ್ ವರ್ಕ್ ಮಾಡ್ಕೊಂಡು ಫೀಲ್ಡಿಗಿಳಿಯೋ ಲೆವೆಲ್​ಗೆ ಹವಾ ಇಟ್ಟಿದ್ದಾರೆ. ಆದ್ರೆ ಅದೇ ಅಭಿಷೇಕ್ ಶರ್ಮಾ ಆಡಿದ್ರೆ ಆರ್ಭಟ ಔಟ್ ಆದ್ರೆ ಝೀರೋ ಅನ್ನೋ ಥರ ಆಗಿದ್ದಾರೆ.

6 ತಿಂಗಳು.. 30 ಮ್ಯಾಚ್.. 9 ಸಲ ಸೊನ್ನೆಗೆ ಔಟ್!

ಅಭಿಷೇಕ್ ಶರ್ಮಾ ಕಳೆದ ಆರು ತಿಂಗಳಿಂದ ಆನ್ ಌಂಡ್ ಆಫ್ ರೀತಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ರು. ಅಭಿಷೇಖ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ಐರ್ಲೆಂಡ್‌ನ ಜೈ ಮೂಂದ್ರಾ ಅವರ ಮೊದಲ ಎಸೆತದಲ್ಲೇ ಔಟ್ ಆದರು, ಇದು T20I ಇತಿಹಾಸದಲ್ಲಿ ಪೂರ್ಣ ಸದಸ್ಯ ತಂಡಗಳ ನಡುವಿನ ಎರಡೂ ಆರಂಭಿಕ ಆಟಗಾರರು ಒಂದೇ ಇನ್ನಿಂಗ್ಸ್‌ನಲ್ಲಿ ಗೋಲ್ಡನ್ ಡಕ್ ಅನ್ನು ದಾಖಲಿಸಿದ ಎರಡನೇ ಬಾರಿಯಾಗಿದೆ. ಅಭಿಷೇಖ್ ಅಂತೂ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ನಲ್ಲಿ ಡಕ್ ಔಟ್ ಗಳಿಂದಲೇ ಈ ವರ್ಷ ಬೇಡದ ದಾಖಲೆ ಮಾಡಿದ್ದಾರೆ. ಈ ವರ್ಷ ಭಾರತದ ಪರ 15 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6 ಸಲ ಖಾತೆ ತೆರೆಯದೇ ಔಟ್ ಆಗಿದ್ದಾರೆ. ಹಾಗೇ 15 ಐಪಿಎಲ್ ಪಂದ್ಯಗಳನ್ನ ಆಡಿದ್ದು ಮೂರು ಸಲ ಸೊನ್ನೆಗೆ ಔಟ್ ಆಗಿದ್ದಾರೆ. ಈ ಮೂಲಕ ಜೂನ್ ಅಂತ್ಯದ ವೇಳೆಗೆ 30 ಪಂದ್ಯಗಳಿಂದ 9 ಸಲ ಡಕ್ ಔಟ್ ಆಗಿದ್ದಾರೆ.

ಭಾರತದ ರೆಕಾರ್ಡ್ ಮುರಿದು ವಿಶ್ವದ ಕಳಪೆ ದಾಖಲೆ ಹೊಸ್ತಿಲಲ್ಲಿ ಅಭಿಷೇಕ್!

ಡಕ್ ಔಟ್ ನಿಂದಲೇ ಜಗತ್ತಿನಲ್ಲೇ ದಿ ಡಕ್ ಔಟ್ ಸ್ಪೆಷಲಿಸ್ಟ್ ಬ್ಯಾಟರ್ ದಾಖಲೆ ಬರೆಯೋಕೆ ಇನ್ನೊಂದೇ ಹೆಜ್ಜೆ ದೂರದಲ್ಲಿದ್ದಾರೆ. ಅಭಿಷೇಕ್ ಆಲ್ರೆಡಿ ಭಾರತದ ಪರ ಕ್ಯಾಲೆಂಡರ್​ ಇಯರ್​ನಲ್ಲಿ ಟಿ-20 ಮಾದರಿಯಲ್ಲಿ ಅತೀ ಹೆಚ್ಚು ಸಲ ಸೊನ್ನೆಗೆ ಔಟ್ ಆದ ಆಟಗಾರ ಎಂಬ ಕೆಟ್ಟ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ 6 ಸಲ ಔಟ್ ಆಗಿದ್ದ ರೋಹಿತ್ ಮೊದಲ ಸ್ಥಾನದಲ್ಲಿದ್ರು. ಆದ್ರೆ ಅಭಿಷೇಕ್ 9 ಸಲ ಡಕ್ ಔಟ್ ಆಗಿದ್ದಾರೆ. ಌಂಡ್ ಜಗತ್ತಿನಲ್ಲೇ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಪ್ಲೇಯರ್ ಆಗಲು ಇನ್ನೊಂದು ಔಟ್ ಅಷ್ಟೇ ಬೇಕಿದೆ. ಕ್ಯಾಲೆಂಡರ್ ಇಯರ್​ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆಗೆ ಔಟ್ ಆದ ಆಟಗಾರರ ಪಟ್ಟಿಯಲ್ಲಿ ಈಗ ಮೂವರು ಇದ್ದಾರೆ. 2019ರಲ್ಲಿ ರಶೀದ್ ಖಾನ್ ಟಿ-20 ಮಾದರಿಯಲ್ಲಿ 9 ಸಲ ಡಕ್ ಔಟ್.. 2024ರಲ್ಲಿ ಶಾದಾಬ್ ಖಾನ್ 9 ಸಲ ಡಕ್ ಔಟ್ ಆಗಿದ್ರು. ಈಗ ಅಭಿಷೇಕ್ ಆರು ತಿಂಗಳಲ್ಲೇ 9 ಸಲ ಸೊನ್ನೆ ಸುತ್ತಿ ಮೂವರೂ ಸಮ ಆಗಿದ್ದಾರೆ. ಈ ವರ್ಷ ಇನ್ನೂ ಆರು ತಿಂಗಳು ಬಾಕಿ ಇದೆ. ಹೀಗಾಗಿ ಮುಂದಿನ ಆರು ತಿಂಗಳಲ್ಲಿ ಭಾರತದ ಪರ ಟಿ-20ಐ ಪಂದ್ಯಗಳನ್ನ ಆಡೋ ಅಭಿಷೇಕ್ ಶರ್ಮಾ ಇನ್ನೊಂದು ಸಲ ಖಾತೆ ತೆರೆಯೋ ಮೊದಲೇ ಔಟ್ ಆದ್ರೆ ಕ್ಯಾಲೆಂಡರ್ ವರ್ಷದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಬಾರಿ ಔಟ್ ಆದ ಆಟಗಾರ ಅನ್ನೋ ಕೆಟ್ಟ ದಾಖಲೆ ಅಭಿಷೇಕ್ ಪಾಲಾಗುತ್ತೆ. ಒಟ್ನಲ್ಲಿ ಅಭಿಷೇಕ್ ಬ್ಯಾಟಿಂಗ್ ಹೆಂಗಾಗಿದ್ರೆ ಅಂದ್ರೆ ಹೊಡೆದ್ರೆ 20 ಬಾಲಲ್ಲೇ ಆಫ್ ಸೆಂಚುರಿ, ಸಿಕ್ಸ್ ಫೋರ್ ಗಳಲ್ಲೇ ಅಬ್ಬರ. ಔಟ್ ಆದ್ರೂ ಅಂದ್ರೆ ಅಕೌಂಟ್ ಓಪನ್ ಮಾಡೋ ಮೊದ್ಲೇ ಪೆವಿಲಿಯನ್ ಸೇರಿಕೊಳ್ತಾರೆ. ಹೀಗಾಗಿ ಅಭಿಷೇಕ್ ಭಾರತಕ್ಕೆ ಒಂಥರಾ ಪ್ಲಸ್ ಌಂಡ್ ಮೈನಸ್ ಎರಡೂ ಆಗಿದ್ದಾರೆ.

Shantha Kumari

Leave a Reply

Your email address will not be published. Required fields are marked *