ನನ್ ಹೆಂಡ್ತಿ ದಪ್ಪ ಎಂದು ಕೊಂದೇ ಬಿಟ್ಟ ಪಾಪಿ ಗಂಡ – ಮದುವೆಯಾದ ಒಂದೇ ವರ್ಷಕ್ಕೆ ಪತ್ನಿಯ ದುರಂತ ಅಂತ್ಯ

ಮದುವೆಯಾಗಿ ಇನ್ನೂ ಒಂದೂವರೆ ವರ್ಷವಾಗಿದ್ದಷ್ಟೇ. ಆಗಲೇ ಹೆಂಡತಿ ಬೋರ್ ಆಗಲು ಶುರುವಾಗಿತ್ತೋ ಏನೋ. ಕುಂತಲ್ಲಿ ನಿಂತಲ್ಲಿ ನಿಂದಿಸಲು ಶುರುಮಾಡಿದ್ದ ಪಾಪಿ ಪತಿರಾಯ. ಅದರಲ್ಲೂ ನೀನು ದಪ್ಪ, ನೀನು ಗರ್ಭಿಣಿಯಾಗಲ್ಲ ಎಂದು ಪದೇ ಪದೇ ಕಿರುಕುಳ ಕೊಡ್ತಿದ್ದನಂತೆ. ಕೊನೆಗೂ ಕಿರುಕುಳ ಕೊಲೆಯಲ್ಲಿ ಅಂತ್ಯವಾಗಿದೆ.
ಇದನ್ನೂ ಓದಿ:ತೀರ್ಥಹಳ್ಳಿಯಲ್ಲಿ ಎಣ್ಣೆ ವಿಷ್ಯಕ್ಕೆ ಕಿರಿಕ್- ಎಣ್ಣೆ ಕುಡಿಯಲ್ಲ ಎಂದಿದ್ದಕ್ಕೆ ಚಾ*ಕು ಇರಿತ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತದ್ದು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದ ಬಸವರಾಜ್ ವಡ್ಡರ್ ಎಂಬಾತ ತನ್ನ ಪತ್ನಿ ಪ್ರಿಯಾಂಕ ಕಮಲಾಕರ್ ಎಂಬಾಕೆಯನ್ನ ಮನೆಯಲ್ಲೇ ಕೊಲೆ ಮಾಡಿದ್ದಾನೆ. ಒಂದೂವರೆ ವರ್ಷದ ಹಿಂದೆ ಬಸವರಾಜ್ ಎಂಬಾತ ಪ್ರಿಯಾಂಕ ಕಮಲಾಕರ್ ಎಂಬುವವರನ್ನ ಮದುವೆಯಾಗಿದ್ದ. ಆರಂಭದಲ್ಲಿ ಗಂಡ ಹೆಂಡತಿ ಚೆನ್ನಾಗಿಯೇ ಇದ್ದರಂತೆ. ಆಮೇಲೆ ಪತ್ನಿ ಕಂಡರೆ ಬಸವರಾಜ್ ನೀನು ದಪ್ಪ ಎಂದು ಕಿರುಕುಳ ಕೊಡಲು ಶುರುಮಾಡಿದ್ದ. ನೀನು ತುಂಬಾ ದಪ್ಪ ಇದ್ದೀಯಾ, ಗರ್ಭಿಣಿ ಆಗೋಕೆ ಸಾಧ್ಯವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದನಂತೆ. ಜೊತೆಗೆ ಪ್ರಿಯಾಂಕಾಗಿ ತುಂಬಾ ಕಿರುಕುಳ ನೀಡುತ್ತಿದ್ದನಂತೆ. ಕೊನೆಗೂ ಸೋಮವಾರ ರಾತ್ರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಎರಡು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಂದ ನಾಲ್ವರ ಬಂಧನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪತಿ ಬಸವರಾಜ್, ರೇಣವ್ವ, ಸುಭಾಷ್, ಸಿದ್ದರಾಮೇಶ್ ಎಂಬ ಆರೋಪಿಗಳನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ಮಗಳನ್ನು ಮದುವೆ ಮಾಡಿಕೊಟ್ಟು, ಮಗಳ ಸಂಸಾರ ಚೆನ್ನಾಗಿರಲಿ ಎಂದು ಹಾರೈಸಿದ ಪ್ರಿಯಾಂಕ ತಂದೆ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು.

ನೋಡಿರಿ

