ಜೂ. ಮಿಸ್ಟರ್ ಕಬಿನಿ ಪ್ರತ್ಯಕ್ಷ – ಭೋಗೇಶ್ವರ ಆನೆಯ ನೆನಪಿಸಿದ ಜೂನಿಯರ್ ಗಜರಾಜ

ಕಬಿನಿ ಕಡೆ ಪ್ರವಾಸಕ್ಕೆ ಹೋದವರು ಫುಲ್ ಖುಷಿಯಾಗಿದ್ದಾರೆ. ಯಾಕೆಂದರೆ, ಅವರ ಕಣ್ಣಿಗೆ ಬಿದ್ದಿದ್ದು ಅಪರೂಪದಲ್ಲಿ ಅಪರೂಪದ ಗಜರಾಜ. ನೆಲ ಮುಟ್ಟುವಷ್ಟು ಉದ್ದನೆಯ ದಂತ. ರಾಜಗಾಂಭೀರ್ಯದ ನಡಿಗೆಯಲ್ಲಿ ಬಂದ ಜೂನಿಯರ್ ಭೋಗೇಶ್ವರ.
ಇದನ್ನೂ ಓದಿ:ಇಂದಿನಿಂದ ಕರುನಾಡಿನಲ್ಲಿ SIR ಶುರು – ಹೇಗೆ ನಡೆಯುತ್ತೆ? ನಿಮ್ಮ ಹತ್ತಿರ ಯಾವ ದಾಖಲೆ ಇರಬೇಕು?
ಕೆಲ ವರ್ಷಗಳ ಹಿಂದೆ ಮರೆಯಾಗಿದ್ದ ಮಿಸ್ಟರ್ ಕಬಿನಿ ಭೋಗೇಶ್ವರ ಆನೆ ಮತ್ತೆ ನೆನಪಿಗೆ ಬಂದಿದ್ದಾನೆ. ಇದಕ್ಕೆ ಕಾರಣ ಜೂನಿಯರ್ ಭೋಗೇಶ್ವರ. ಈತ ಈಗ ವೀಕೆಂಡ್ ಸಫಾರಿಗೆ ಕಬಿನಿ ಅರಣ್ಯಕ್ಕೆ ತೆರಳಿದ್ದ ಪ್ರವಾಸಿಗರ ಕಣ್ಣಿಗೆ ಬಿದ್ದಿದ್ದಾನೆ. ಭೋಗೇಶ್ವರ ಆನೆಯ ರೀತಿಯೇ ಉದ್ದನೆಯ ದಂತಗಳನ್ನು ಹೊಂದಿರುವ ಜೂನಿಯರ್ ಭೋಗೇಶ್ವರ ಇದೀಗ ಕಬಿನಿ ಅಂಗಳದಲ್ಲಿ ದರ್ಶನ ನೀಡಿದ್ದಾನೆ.
ಹೆಚ್.ಡಿ.ಕೋಟೆಯ ದಮ್ಮನಕಟ್ಟೆ ಸಫಾರಿ ವಲಯದ ಹಿನ್ನೀರಿನಲ್ಲಿ ಈ ಗಜರಾಜನ ದರ್ಶನವಾಗಿದೆ. ಕಬಿನಿಯ ಹಸಿರು ಬಯಲಿನಲ್ಲಿ ತನ್ನ ದೈತ್ಯ ರೂಪ ಮತ್ತು ನೆಲ ಮುಟ್ಟುವಂತಹ ಉದ್ದನೆಯ ಬಿಳಿ ದಂತಗಳನ್ನು ಹೊತ್ತು, ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದ ಜೂನಿಯರ್ ಭೋಗೇಶ್ವರನನ್ನು ನೋಡಿ ಪ್ರವಾಸಿಗರು ಖುಷಿಯಾಗಿದ್ದಾರೆ. ಆನೆಗಳ ಹಿಂಡಿನೊಂದಿಗೆ ಇದ್ದರೂ ತನ್ನದೇ ಆದ ಖದರ್ನಿಂದ ದರ್ಶನ್ ಕೊಟ್ಟ ಜೂನಿಯರ್ ಮಿಸ್ಟರ್ ಕಬಿನಿ ಪ್ರವಾಸಿಗರ ಮನಸೆಳೆದಿದ್ದಾನೆ.
ಏಷ್ಯಾದಲ್ಲೇ ಅತಿ ಉದ್ದನೆಯ ದಂತ ಹೊಂದಿದ್ದ ಭೋಗೇಶ್ವರನ ಅಗಲಿಕೆ ವನ್ಯಜೀವಿ ಪ್ರೇಮಿಗಳಿಗೆ ನೋವು ನೀಡಿತ್ತು. ಆದರೆ, ಈಗ ಅದೇ ಹೋಲಿಕೆಯ ದಂತಗಳನ್ನು ಹೊಂದಿರುವ ಜೂನಿಯರ್ ಭೋಗೇಶ್ವರ ಕಬಿನಿ ಕಾಡಿನಲ್ಲಿ ಬೆಳೆದು ನಿಂತಿರುವುದು ಪ್ರಕೃತಿ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ರಾಜ್ಯ ಸರ್ಕಾರ ಸಫಾರಿಗೆ ಗ್ರೀನ್ ಸಿಗ್ನಲ್ ನೀಡಿರುವ ಬೆನ್ನಲ್ಲೇ, ಈ ದೈತ್ಯ ಆನೆಯ ದರ್ಶನವು ಕಬಿನಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಆನೆ ಬಲ ತಂದಿದೆ.

ನೋಡಿರಿ

