ಟೀಂ ಇಂಡಿಯಾಗೆ ಗಂಭೀರ ಗ್ರಹಣ – ಟೆಸ್ಟ್, ODI ಬಳಿಕ T-20Iಗೂ ಶಾಪ
2 ವರ್ಷ.. ಕೆಟ್ಟ ದಾಖಲೆಗಳ ಕೋಚ್

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಅವ್ರ ಬಗ್ಗೆ ನೆಗೆಟಿವ್ ಟಾಕ್ಸ್ ಅಂತೂ ಇದ್ದೇ ಇದೆ. ಟೀಂ ಸೆಲೆಕ್ಷನ್, ಪ್ಲೇಯಿಂಗ್ 11 ಫೈನಲ್, ಕೆಲವರಿಗೆ ಮಾತ್ರವೇ ಪ್ರಿಯಾರಿಟಿ, ಮತ್ತಷ್ಟು ಟ್ಯಾಲೆಂಟೆಡ್ ಪ್ಲೇಯರ್ಸ್ಗೆ ಅವಕಾಶ ನೀಡದೆ ಇರೋದು ಹೀಗೆ ಸಾಕಷ್ಟು ಕಂಪ್ಲೇಂಟ್ಸ್ ಇದ್ದೇ ಇದೆ. ಗಂಭೀರ್ ಕೋಚ್ ಆದ್ಮೇಲೆ ಟೆಸ್ಟ್ ಫಾರ್ಮೆಟ್ನಲ್ಲಿ ತಂಡ ಹಳ್ಳ ಹಿಡಿದಿದೆ. ಏಕದಿನ ಮಾದರಿಯಲ್ಲಿ ಅಪ್ಸ್ ಌಂಡ್ ಡೌನ್ ಇದೆ. ಬಟ್ ಟಿ-20ಐ ಫಾರ್ಮೆಟ್ನಲ್ಲಿ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ ಇತ್ತು. ಆದ್ರೀಗ ಐರ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಆದ್ಮೇಲೆ ಇಲ್ಲೂ ಕೂಡ ಟೀಕೆಗಳು ಎದುರಾಗ್ತಿವೆ. ಹಾಗಂತ ಗಂಭೀರ್ ಕೋಚ್ ಆದ್ಮೇಲೆ ಭಾರತ ಹೀಗೆ ಪಾತಾಳಕ್ಕೆ ಬಿದ್ದಿರೋದು ಮೊದ್ಲೇನು ಅಲ್ಲ. ಕಳೆದ 2 ವರ್ಷಗಳಿಂದ ಬೇಡದೇ ಇರೋ ದಾಖಲೆಗಳ ಸರಮಾಲೆಯೇ ಇದೆ.
ಇದನ್ನೂ ಓದಿ : ವೈಭವ್ ಬೆಂಚ್.. BCCIಗೆ ಬ್ಯಾಕ್ ಫೈರ್ – ENGನಲ್ಲಿ ಸೂರ್ಯವಂಶಿ DEBUT?
ಕಳೆದ 2 ವರ್ಷಗಳಿಂದ ಟಿ-20ಐ ಸರಣಿಗಳಲ್ಲಿ ಸೋಲನ್ನೇ ಕಾಣದ ಭಾರತ ಐರ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಆಗಿದ್ದು ಚಾಂಪಿಯನ್ ತಂಡಕ್ಕೆ ಅತಿದೊಡ್ಡ ಮುಖಭಂಗವಾಗುವಂತೆ ಮಾಡಿದೆ. ಕ್ರಿಕೆಟ್ ಶಿಶುಗಳ ಎದುರಿನ ಸೋಲಿನ ಗಾಯ ಮಾಯಬೇಕು ಅಂದ್ರೆ ಆಂಗ್ಲರ ನಾಡಲ್ಲಿ ಗೆದ್ದು ಮುಲಾಮು ಹಚ್ಚಬೇಕು. ಹಾಗಂತ ಅದು ಸುಲಭದ ಕೆಲಸವೂ ಅಲ್ಲ. ಆಟಗಾರರು, ಅವ್ರ ಪ್ರದರ್ಶನಕ್ಕಿಂತ ಜಾಸ್ತಿ ಸವಾಲಿರೋದು ಗೌತಮ್ ಗಂಭೀರ್ ಅವ್ರ ನಿರ್ಧಾರಗಳ ಬಗ್ಗೆ. ಅಲ್ಲೀವರೆಗೆ ಟೀಂ ಇಂಡಿಯಾ ಕಟ್ಟಿದ್ದ ದಾಖಲೆಗಳ ಕೋಟೆ ಗಂಭೀರ್ ಕೋಚ್ ಆದ್ಮೇಲೆ ಛಿದ್ರಛಿದ್ರವಾಗಿದೆ.
ಗಂಭೀರ್ ಕೋಚ್ ಆದ್ಮೇಲೆ ಜಾರಿದ್ದೇ ಜಾಸ್ತಿ ಭಾರತ!
2024ರ ಟಿ-20 ವಿಶ್ವಕಪ್ ಗೆದ್ದು ರಾಹುಲ್ ದ್ರಾವಿಡ್ ಅವ್ರು ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳೀತಾರೆ. ರಾಹುಲ್ ಕೋಚ್ ಸ್ಥಾನಬಿಟ್ಟುಕೊಟ್ಟಾಗ ಭಾರತ ಟಿ-20ಐ ಫಾರ್ಮೆಟ್ನಲ್ಲಿ ಚಾಂಪಿಯನ್ಸ್.. ಏಕದಿನ ವಿಶ್ವಕಪ್ನಲ್ಲಿ ರನ್ನರ್ ಅಪ್.. ಟೆಸ್ಟ್ ಫಾರ್ಮೆಟ್ನಲ್ಲಿ ಡಬ್ಲ್ಯೂಟಿಸಿ ಫೈನಲ್ ರೇಸ್ನ ಟಾಪ್-2ನಲ್ಲಿದ್ರು. ಸೋ ಮೂರೂ ಮಾದರಿಯಲ್ಲೂ ಟಾಪ್ನಲ್ಲೇ ಇತ್ತು. ಆದ್ರೆ ಗೌತಮ್ ಗಂಭೀರ್ ಕೋಚ್ ಪಟ್ಟಕ್ಕೇರಿದ್ದೇ ಏರಿದ್ದು ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಮಿಸ್. ಏಕದಿನ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ರೂ ಸಾಕಷ್ಟು ಸರಣಿಗಳಲ್ಲಿ ಸೋಲಬೇಕಾಯ್ತು. ತವರಿನಲ್ಲಂತೂ ಭಾರತ ಈಸಿಯಾಗಿ ಸರೆಂಡರ್ ಆಗೋದು ಮಾಮೂಲಾಗಿದೆ. ಅಟ್ಲೀಸ್ಟ್ ಟಿ-20ಐ ತಂಡವಾದ್ರೂ ಯಶಸ್ವಿಯಾಗಿ ಸಾಗ್ತಿದೆ ಅನ್ನುವಾಗ್ಲೇ ಅಲ್ಲಿಯೂ ಹೀನಾಯ ದಾಖಲೆ ಬರೆದಾಯ್ತು.
ಭಾರತಕ್ಕೆ ಗಂಭೀರ ಗ್ರಹಣ!
– 27 ವರ್ಷಗಳ ನಂತರ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು
– 36 ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ತವರು ಟೆಸ್ಟ್ ಸರಣಿ ಸೋಲು
– 15 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವನಲ್ಲಿ ಟೆಸ್ಟ್ ಪಂದ್ಯ ಸೋಲು
– 25 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ತವರು ಟೆಸ್ಟ್ ಸರಣಿ ಸೋಲು
– 47 ವರ್ಷಗಳ ನಂತರ ತವರು ನೆಲದಲ್ಲಿ ಸತತ 3 ಟೆಸ್ಟ್ ಸೋಲು
– 19 ವರ್ಷಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್ ಸೋಲು
– 12 ವರ್ಷಗಳ ನಂತರ ತವರು ನೆಲದಲ್ಲಿ ಟೆಸ್ಟ್ ಸರಣಿ ಸೋಲು
– ಇತಿಹಾಸದಲ್ಲಿ ಮೊದಲ ಬಾರಿ ತವರು ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ (3-0)
– ಮೊದಲ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ತಲುಪಲು ವಿಫಲ
– ಭಾರತದಲ್ಲಿ ಮೊದಲ ಬಾರಿ 50 ರನ್ ಗಳೊಳಗೆ ಆಲೌಟ್
– ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತಕ್ಕೆ ಅತೀ ದೊಡ್ಡ ಸೋಲು (408 ರನ್)
– ನ್ಯೂಜಿಲೆಂಡ್ ವಿರುದ್ಧ ಮೊದಲ ಬಾರಿ ತವರು ಏಕದಿನ ಸರಣಿ ಸೋಲು
– ಇತಿಹಾಸದಲ್ಲೇ ಮೊದಲ ಬಾರಿ ಐರ್ಲೆಂಡ್ ವಿರುದ್ಧ ಟಿ20 ಪಂದ್ಯ & ಸರಣಿ ಸೋಲು

ನೋಡಿರಿ

