ಇಂದಿನಿಂದ ಇಂಗ್ಲೆಂಡ್ Vs ಭಾರತ T20I ಸರಣಿ – ಶ್ರೇಯಸ್ ಪಡೆಗೆ ಇರೋ ಚಾಲೆಂಜ್ ಏನು?

ಇಂದಿನಿಂದ ಇಂಗ್ಲೆಂಡ್ Vs ಭಾರತ T20I ಸರಣಿ – ಶ್ರೇಯಸ್ ಪಡೆಗೆ ಇರೋ ಚಾಲೆಂಜ್ ಏನು?

 ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಇಂದು ನಡೆಯಲಿದೆ.ಪಂದ್ಯ ರಾತ್ರಿ 10 ಗಂಟೆಗೆ ಆರಂಭ ಆಗಲಿದೆ.  ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು 8 ಪಂದ್ಯಗಳ ಸರಣಿ ನಡೆಯಲಿದೆ. ಮೊದಲಿಗೆ ಐದು ಮ್ಯಾಚ್​ಗಳ ಟಿ20 ಸರಣಿ ಜರುಗಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಐರ್ಲೆಂಡ್ ಮೇಲೆ ಸೋತಿರೋ ಟೀಂ ಇಂಡಿಯಾಗೆ ಇಂಗ್ಲೆಂಡ್ ಮೇಲೆ ಗಲ್ಲೋದು ಬಿಗ್ ಚಾಲೆಂಜ್ ಆಗಿದೆ.

ಐರ್ಲೆಂಡ್‌ ಸರಣಿ ಸೋಲನ್ನು ಮರೆತು ಶ್ರೇಯಸ್‌ ಅಯ್ಯರ್‌ ಪಡೆ ಪೂರ್ಣ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಬೇಕಿದೆ. ಇತ್ತಂಡಗಳ ಈ ಪಂದ್ಯ ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆಯಲಿದೆ.ಈ ವರ್ಷದ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ತಂಡವು ಆರಂಭಿಕ ಹಂತದಲ್ಲಿ ವೈಫಲ್ಯ ಕಂಡರೂ ಆ ಬಳಿಕ ಫಾರ್ಮ್‌ ಕಂಡುಕೊಂಡು ಸೆಮಿಫೈನಲ್‌ ತಲುಪಿತ್ತು. ಸೆಮಿಯಲ್ಲಿ ಭಾರತ ವಿರುದ್ಧವೇ ಸೋಲು ಕಂಡಿತ್ತು. ಇದೀಗ ಈ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಂಡಿತೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ಆಂಗ್ಲರ ಬೇಟೆಗೂ ಇಲ್ವಾ ವೈಭವ್ ಸೂರ್ಯವಂಶಿ – ಫೇಲ್ಯೂರ್ ಬ್ಯಾಟರ್ ಗಳನ್ನೇ ಆಡಿಸ್ತಾರಾ?

ಭಾರತಕ್ಕೆ ಹೋಲಿಸಿದರೆ ಇಂಗ್ಲೆಂಡ್‌ ತಂಡ ಅತ್ಯಂತ ಅನುಭವಿ ಆಟಗಾರರ ತಂಡವಾಗಿದೆ. ಫಿಲ್‌ ಸಾಲ್ಟ್‌, ಜಾಸ್‌ ಬಟ್ಲರ್‌, ನಾಯಕ ಹ್ಯಾರಿ ಬ್ರೂಕ್‌, ಜೋಫ್ರಾ ಆರ್ಚರ್‌, ಆದೀಲ್‌ ರಶೀದ್‌ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಭಾರತ ಎಷ್ಟು ಬಲಿಷ್ಠ ಎನ್ನುವುದು ಐರ್ಲೆಂಡ್‌ ಸರಣಿಯ ಫಲಿತಾಂಶವೇ ಉತ್ತಮ ನಿದರ್ಶನ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸುಧಾರಿಸದೇ ಇದ್ದರೆ ಮತ್ತೊಂದು ಸರಣಿ ಸೋಲು ಖಚಿತ.

ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದ ಮೇಲ್ಮೈಯಿಂದ ಬೌಲರ್‌ಗಳಿಗೆ ಹೆಚ್ಚಿನ ಸಹಾಯ ಸಿಗಲಿದೆ. ಪವರ್ ಪ್ಲೇ ಒಳಗೆ ಹೊಸ ಚೆಂಡು ಸೀಮ್ ಆಗುತ್ತದೆ ಮತ್ತು ಸ್ವಿಂಗ್ ಆಗುತ್ತದೆ. ಹೀಗಾಗಿ ಎರಡೂ ತಂಡಗಳ ಆರಂಭಿಕ ಬ್ಯಾಟರ್‌ಗಳು ಜಾಗರೂಕರಾಗಿರಬೇಕು. ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಿಕೊಳ್ಳುವ ಸಾಧ್ಯತೆ ಅಧಿಕ. ಏಕೆಂದರೆ ಮೇಲ್ಮೈಯಲ್ಲಿ ತೇವಾಂಶವಿದ್ದರೆ ಅದರ ಲಾಭ ಪಡೆಯಬಹುದು. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇಲ್ಲದ ಕಾರಣ ಸಂಪೂರ್ಣವಾಗಿ ಪಂದ್ಯ ವೀಕ್ಷಿಸಬಹುದು

Kishor KV

Leave a Reply

Your email address will not be published. Required fields are marked *