ಕರ್ಣ ಧಾರಾವಾಹಿಯಲ್ಲಿ ನಿತ್ಯ ಪಾತ್ರ ಮುಕ್ತಾಯವಾಯ್ತಾ? – ನಿಧಿ ಮದುವೆಯಾದ ಮೇಲೆ ಗರ್ಭಿಣಿ ನಿತ್ಯಾ ನಾಪತ್ತೆ?

ಕರ್ಣ ಧಾರಾವಾಹಿಯಲ್ಲಿ ನಿತ್ಯ ಪಾತ್ರ ಮುಕ್ತಾಯವಾಯ್ತಾ? – ನಿಧಿ ಮದುವೆಯಾದ ಮೇಲೆ ಗರ್ಭಿಣಿ ನಿತ್ಯಾ ನಾಪತ್ತೆ?

ಕರ್ಣ ಸೀರಿಯಲ್‌ನಲ್ಲಿ ಈಗ ನಿಧಿ ಮತ್ತು ಕರ್ಣ ಮದುವೆಯಾಗಿ ಸಂಸಾರ ಮಾಡುತ್ತಿದ್ದಾರೆ. ಆದರೆ, ಇವರಿಬ್ಬರ ಮದುವೆಯಾಗಿ ಬರೋಬ್ಬರಿ 22 ಎಪಿಸೋಡ್‌ ಆಯಿತು. ಗರ್ಭಿಣಿ ನಿತ್ಯಾ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ. ನಿತ್ಯಾಗೆ ಮಗುವಾಯ್ತಾ? ನಿತ್ಯಾ ಕಥೆ ಏನಾಯ್ತು ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ನಟ ರಿಷಭ್ ಶೆಟ್ಟಿ ಮಗನ ರಂಗಪ್ರವೇಶ– ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ ರಣ್ವಿತ್ ಶೆಟ್ಟಿ

ಕರ್ಣ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿಧಿ ಸುತ್ತವೇ ಕಥೆ ಸಾಗುತ್ತಿದೆ. ಆದರೆ, ಉಳಿದ ಪಾತ್ರಗಳ ಬಗ್ಗೆ ಅಪ್‌ಡೇಟ್ ಕೂಡಾ ಸಿಗುತ್ತಿಲ್ಲ. ಅದರಲ್ಲೂ ನಿಧಿ ಅಕ್ಕ ನಿತ್ಯಾಳ ಸುಳಿವೇ ಇಲ್ಲ. ಗರ್ಭಿಣಿ ನಿತ್ಯಾ ಹೋಗಿದ್ದೆಲ್ಲಿಗೆ? ನಿತ್ಯಾಳ ಹೆರಿಗೆ ಯಾವಾಗ?, ಇಷ್ಟೊತ್ತಿಗಾಗಲೇ ನಿತ್ಯಾಳಿಗೆ ಮಗು ಆಗಿರಬೇಕಲ್ವಾ ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ವೀಕ್ಷಕರು ಕೇಳುತ್ತಿದ್ದಾರೆ. ಮತ್ತೊಂದೆಡೆ ನಿತ್ಯಾ ಒಂಟಿಯಾಗಿಯೇ ಇರುತ್ತಾಳಾ, ನಿತ್ಯಾಳ ಮಗುವಿನ ಭವಿಷ್ಯವೇನು ಎಂದು ಕೇಳುತ್ತಿದ್ದಾರೆ ವೀಕ್ಷಕರು. ಆದರೆ, ಕರ್ಣ ನಿಧಿ ಮದುವೆಯಾಗಿ ಬರೋಬ್ಬರಿ 22 ಎಪಿಸೋಡ್ ಮುಗಿಯುತ್ತಾ ಬಂತು. ಆದರೆ, ಎಲ್ಲೂ ಕೂಡಾ ನಿತ್ಯಾಳ ಸುಳಿವೇ ಇಲ್ಲ. ಒಂದು ಕಡೆ ಶಾಂತಿಯನ್ನು ತೋರಿಸಿದರೂ ಕೂಡ ನಿತ್ಯಾಳನ್ನು ಮಾತ್ರ ತೋರಿಸುತ್ತಿಲ್ಲ. ನಮ್ರತಾ ಗೌಡ ಅವರು ಕರ್ಣ ಧಾರಾವಾಹಿಯಿಂದ ಹೊರಗಡೆ ಬಂದರಾ? ಅಥವಾ ಸೀರಿಯಲ್‌ನಿಂದ ಬ್ರೇಕ್‌ ತಗೊಂಡಿದ್ದಾರಾ? ಎಂಬ ಬಗ್ಗೆ ಮಾಹಿತಿ ಇಲ್ಲ.

ಮತ್ತೊಂದೆಡೆ ಸೀರಿಯಲ್‌ನಲ್ಲಿ ರಿಯಾ ಮತ್ತು ಸಂಜು ಮದುವೆ ನಡೆದಿದೆ. ಸಂಜುಗೆ ಮದುವೆ ಮಾಡಿಸಲು ಇಡೀ ಕುಟುಂಬಸ್ಥರು ಒಂದೆಡೆ ನೆರೆದಿರುತ್ತಾರೆ. ಈ ವೇಳೆ ಮಧ್ಯಪ್ರವೇಶಿಸುವ ಕರ್ಣ, ಮದುವೆ ನಿಲ್ಲಿಸುತ್ತಾನೆ. ಇದಕ್ಕೆ ಕಾರಣ ಕೇಳಿದಾಗ, ಸಂಜು ಮತ್ತು ರಿಯಾ ಪ್ರೀತಿಸುತ್ತಿದ್ದಾರೆ ಹಾಗೂ ರಿಯಾ ಈಗ ಗರ್ಭಿಣಿಯಾಗಿದ್ದಾಳೆ ಎಂಬ ಸತ್ಯವನ್ನು ಕರ್ಣ ಹೇಳುತ್ತಾನೆ. ತನ್ನ ಮೇಲಿನ ಆರೋಪಕ್ಕೆ ಸಾಕ್ಷಿ ಎಲ್ಲಿದೆ ಎಂದು ಸಂಜು ಗದರಿದಾಗ, ದಿವಾಕರ್ ಎಂಬಾತನ ಕಡೆಯಿಂದ ಅಸಲಿ ಸತ್ಯ ಹೊರಬರುತ್ತದೆ. ‘ರಿಯಾ ಕುಡಿಯುವ ಜ್ಯೂಸ್‌ಗೆ ಟ್ಯಾಬ್ಲೆಟ್ ಮಿಕ್ಸ್ ಮಾಡಿ ಅವಳು ಪ್ರಜ್ಞೆ ತಪ್ಪುವಂತೆ ಮಾಡಲಾಗಿತ್ತು. ಆ ಬಳಿಕ ಸಂಜು ಅವಳನ್ನು ರೂಮ್‌ಗೆ ಕರೆದುಕೊಂಡು ಹೋಗಿದ್ದ ಎಂಬ ಆಘಾತಕಾರಿ ರಹಸ್ಯ ಬಯಲಾಗುತ್ತದೆ. ರಿಯಾಗೆ ತಾಳಿ ಕಟ್ಟಿ ಆಕೆಯನ್ನು ಹೆಂಡತಿ ಎಂದು ಒಪ್ಪಿಕೊಳ್ಳಬೇಕು ಎಂಬ ಖಡಕ್ ಆದೇಶ ಕರ್ಣನಿಂದ ಬರುತ್ತದೆ. ಕೊನೆಗೂ ಕರ್ಣ ಇಬ್ಬರ ಮದುವೆ ಮಾಡಿಸುತ್ತಾನೆ.

Sulekha

Leave a Reply

Your email address will not be published. Required fields are marked *