ಅನಿರುದ್ಧ್-ಕಾವ್ಯಾ ಮಾರನ್ ಮದುವೆಗೆ ಮುಹೂರ್ತ ಫಿಕ್ಸ್ – ಚಿಕ್ಕಪ್ಪನಿಂದಲೇ ಮದುವೆ ಗುಟ್ಟು ರಟ್ಟು

ಅನಿರುದ್ಧ್-ಕಾವ್ಯಾ ಮಾರನ್ ಮದುವೆಗೆ ಮುಹೂರ್ತ ಫಿಕ್ಸ್ – ಚಿಕ್ಕಪ್ಪನಿಂದಲೇ ಮದುವೆ ಗುಟ್ಟು ರಟ್ಟು

ಕಾಲಿವುಡ್ ಜನಪ್ರಿಯ ಮೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಮತ್ತು ಐಪಿಎಲ್ ತಂಡ ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಕಾವ್ಯಾ ಮಾರನ್ ಮದುವೆಗೆ ಮುಹೂರ್ತ ಕೂಡಿ ಬಂದಿದೆ. ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿ:ಮಹೇಶ್‌ಬಾಬುಗೆ 100 ಟೇಕ್ ಹೇಳಿದ ರೌಜಮೌಳಿ – ಮರುದಿನವೂ ಅದೇ ಶಾಟ್.. ಅದೇ ರಿಪೀಟ್

ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್  ಚಿಕ್ಕಪ್ಪ ಹಿರಿಯ ನಟ ವೈ.ಜಿ. ಮಹೇಂದ್ರನ್ ಮಗನ ಮದುವೆ ಬಗ್ಗೆ ಮಾತಾಡಿದ್ದು, ಅನಿರುದ್ಧ್ ರವಿಚಂದರ್  ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನ ಸಿಇಒ ಕಾವ್ಯಾ ಮಾರನ್ ಮದುವೆಯಾಗುವ ವಿಚಾರ ರಿವೀಲ್ ಆಗಿದೆ. ಅನಿರುದ್ಧ್ ಅವರ ಚಿಕ್ಕಪ್ಪ

ವೈ.ಜಿ. ಮಹೇಂದ್ರನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು,  ಅನಿರುದ್ಧ್ ಶೀಘ್ರದಲ್ಲೇ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಅನಿರುದ್ಧ್ ತುಂಬಾ ಸೌಮ್ಯ ಸ್ವಭಾವದ ಹುಡುಗ. ಅವನಿಗೆ ಶುಭಾಶಯ ಹೇಳಲು ಇದು ಸರಿಯಾದ ಸಮಯ. ಅವನು ಮದುವೆಗೆ ಸಜ್ಜಾಗಿದ್ದಾನೆ ಎಂದು ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕೇವಲ ವದಂತಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವೈ.ಜಿ. ಮಹೇಂದ್ರನ್, ನನಗೆ ದೊರೆತಿರುವ ಮಾಹಿತಿಯ ಪ್ರಕಾರ ಈ ಸುದ್ದಿ ನಿಜ. ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಅನಿರುದ್ಧ್ ಚಿಕ್ಕಪ್ಪ ಹೇಳಿದ್ದಾರೆ. ಇನ್ನು ಕಾವ್ಯಾ ಮಾರನ್ ಕುರಿತು ಮಾತನಾಡಿದ ವೈ.ಜಿ. ಮಹೇಂದ್ರನ್,  ಕಾವ್ಯ ಸಾಮಾನ್ಯ ವ್ಯಕ್ತಿಯಲ್ಲ. ಸನ್‌ರೈಸರ್ಸ್ ಹೈದರಾಬಾದ್‌ನಂತಹ ದೊಡ್ಡ ಐಪಿಎಲ್ ಫ್ರಾಂಚೈಸಿಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಅವರಿಗಿದೆ. ಅನಿರುದ್ಧ್ ಮತ್ತು ಕಾವ್ಯಾ ಉತ್ತಮ ಜೋಡಿ ಎಂದು ಮೆಚ್ಚುಗೆಯ ಮಾತಾಡಿದ್ದಾರೆ.

Sulekha

Leave a Reply

Your email address will not be published. Required fields are marked *