ಇಂಗ್ಲೆಂಡ್ಗೆ ಬಂದಿಳಿದ ಟೀಮ್ ಇಂಡಿಯಾ – ಜುಲೈ 1 ರಿಂದ ಟಿ20 ಸರಣಿ ಆರಂಭ

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಅಜೇಯ ಓಟ ಅಂತ್ಯಗೊಂಡಿದೆ. ಇದೀಗ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿ ಆಡಲು ಇಂಗ್ಲೆಂಡ್ ನೆಲಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ:ವೈಭವ್ ಬೆಂಚ್.. BCCIಗೆ ಬ್ಯಾಕ್ ಫೈರ್ – ENGನಲ್ಲಿ ಸೂರ್ಯವಂಶಿ DEBUT?
ಟಿ20 ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಐರ್ಲೆಂಡ್ ತಂಡವು ತಮ್ಮ ತವರು ನೆಲದಲ್ಲಿ ಇತಿಹಾಸ ನಿರ್ಮಿಸಿದೆ. ಈ ಸೋಲಿನೊಂದಿಗೆ, ಕಳೆದ 3 ವರ್ಷಗಳಿಂದ ಟಿ20 ಸರಣಿಯಲ್ಲಿ ಸೋಲಿಲ್ಲದ ಸರದಾರನಂತೆ ಮೆರೆಯುತ್ತಿದ್ದ ಟೀಂ ಇಂಡಿಯಾದ ಅಜೇಯ ಓಟಕ್ಕೆ ಅಂತ್ಯ ಸಿಕ್ಕಿದೆ. ಕ್ರಿಕೆಟ್ ಶಿಶುಗಳ ವಿರುದ್ಧ ಸೋತ ಟೀಮ್ ಇಂಡಿಯಾ ಇನ್ನು ಮುಂದೆ ಇಂಗ್ಲೆಂಡ್ ನೆಲದಲ್ಲಿ ಅದೃಷ್ಟಪರೀಕ್ಷೆಗಿಳಿಯಲಿದೆ. ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿ20 ಸರಣಿಯು ಜುಲೈ 1 ರಿಂದ ಆರಂಭವಾಗಲಿದೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಡರ್ಹಾಮ್ ತಲುಪಿದೆ. ಭಾರತದ ಆಟಗಾರರು ನೆಟ್ಸ್ನಲ್ಲಿ ಕಠಿಣ ಅಭ್ಯಾಸ ಆರಂಭಿಸಿದೆ.
ಜುಲೈ 01, ಬುಧವಾರ, ರಿವರ್ಸೈಡ್ ಗ್ರೌಂಡ್, ಚೆಸ್ಟರ್-ಲೆ-ಸ್ಟ್ರೀಟ್ ರಾತ್ರಿ 10:00 ಗಂಟೆಗೆ
2ನೇ ಟಿ20 ಪಂದ್ಯ, ಜುಲೈ 04, ಶನಿವಾರ, ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ ಸಂಜೆ 7:00 ಗಂಟೆಗೆ
3ನೇ ಟಿ20 ಪಂದ್ಯ, ಜುಲೈ 07, ಮಂಗಳವಾರ, ಟ್ರೆಂಟ್ ಬ್ರಿಡ್ಜ್, ನಾಟಿಂಗ್ಹ್ಯಾಮ್, ರಾತ್ರಿ 10:00 ಗಂಟೆಗೆ
4ನೇ ಟಿ20 ಪಂದ್ಯ,ಜುಲೈ 09, ಗುರುವಾರ,ಬ್ರಿಸ್ಟಲ್ ಕೌಂಟಿ ಗ್ರೌಂಡ್, ಬ್ರಿಸ್ಟಲ್, ರಾತ್ರಿ 10:00 ಗಂಟೆಗೆ
5ನೇ ಟಿ20 ಪಂದ್ಯ, ಜುಲೈ 11, ಶನಿವಾರ,ರೋಸ್ ಬೌಲ್, ಸೌತಾಂಪ್ಟನ್,ಸಂಜೆ 7:00 ಗಂಟೆಗೆ

ನೋಡಿರಿ

