ಎಂಕ್ಯೂ – 9 ಡ್ರೋನ್ ಖರೀದಿಗೆ ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ

ಎಂಕ್ಯೂ – 9 ಡ್ರೋನ್ ಖರೀದಿಗೆ ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ

ವಾಷಿಂಗ್ಟನ್‌: ಸುಮಾರು 300 ಕೋಟಿ ಅಮೆರಿಕನ್ ಡಾಲರ್ ವೆಚ್ಚದಲ್ಲಿ 30 ಎಂಕ್ಯೂ – 9 ಪ್ರಿಡೇಟರ್ ಶಸ್ತ್ರಸಜ್ಜಿತ ಡ್ರೋನ್ ಖರೀದಿಗೆ ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ ನಡೆಸಲಾಗಿದೆ.

ಈ ಡ್ರೋನ್ ಗಳು ಹಿಂದೂ ಮಹಾಸಾಗರ ಮತ್ತು ದೇಶದ ಗಡಿಯ ವಾಸ್ತವಿಕ ಗಡಿ ನಿಯಂತ್ರಣ ರೇಖೆ ( ಎಲ್ಎಸಿ) ಉದ್ದಕ್ಕೂ ಕಣ್ಗಾವಲು ಇಡಲು ಭಾರತಕ್ಕೆ ಸಹಕಾರಿಯಾಗಿದೆ. ಐದು ವರ್ಷಗಳ ನಿರಂತರ ಪ್ರಯತ್ನದ ಬಳಿಕ ಉಭಯ ದೇಶಗಳ ನಡುವೆ ಎಂಕ್ಯೂ-9ಬಿ ಪ್ರಿಡೇಟರ್‌ ಶಸ್ತ್ರಸಜ್ಜಿತ ಡ್ರೋನ್‌ಗಳ ಒಪ್ಪಂದ ಏರ್ಪಟ್ಟಿದೆ. ಇದು ದೇಶದ ಭದ್ರತೆಯನ್ನು ಹೆಚ್ಚಿಸುವ ಜತೆಗೆ ರಕ್ಷಣಾ ಅವಶ್ಯಕತೆಗಳನ್ನು ಪೂರೈಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕಾರು, ಬೈಕ್ ಆಯ್ತು ಈಗ ಎಲೆಕ್ಟ್ರಿಕ್ ವಿಮಾನ! -ಕಾರು, ಬೈಕ್ ಆಯ್ತು ಈಗ ಎಲೆಕ್ಟ್ರಿಕ್ ವಿಮಾನ! – ಯಾವಾಗಿನಿಂದ ಹಾರಾಟ

ಎಂಕ್ಯೂ – 9 ರೀಪರ್ ಅಥವಾ ಪ್ರಿಡೇಟರ್ ಬಿ ಎಂದು ಇದನ್ನು ಕರೆಯಲಾಗುತ್ತದೆ. ಇದು ಶಸ್ತ್ರಸಜ್ಜಿತ ಡ್ರೋನ್‌ ಆಗಿದ್ದು, ಲೇಸರ್-ಗೈಡೆಡ್ ಹೆಲ್‌ಫೈರ್ ಕ್ಷಿಪಣಿಗಳನ್ನು ಹೊಂದಿದೆ. ಈ ಡ್ರೋನ್ ಗಳನ್ನು ವೈಮಾನಿಕ ದಾಳಿ ವೇಳೆ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅಮೆರಿಕ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್‌ ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಪ್ರಸ್ತುತ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

suddiyaana