ಆಡದ ಸೂರ್ಯವಂಶಿ.. ಗೆಲ್ಲದ ಭಾರತ – ಐರಿಷ್ ಎದುರು ಇಂಡಿಯಾ ಕ್ಲೀನ್ ಸ್ವೀಪ್
ವಿಶ್ವಕಪ್ ನಿಂದ ವುಮೆನ್ಸ್ ಟೀಂ OUT

ಮೊದ್ಲೆಲ್ಲಾ ಸಂಡೇ ಅಂದ್ರೆ ಟೀಂ ಇಂಡಿಯಾ ಪಾಲಿಗೆ ಸೂಪರ್ ಸಂಡೇ ಆಗಿತ್ತು. ಆದ್ರೆ ನಿನ್ನೆ ನಿಜಕ್ಕೂ ಬ್ಯಾಡ್ ಸಂಡೇ ಆಗಿತ್ತು. ಮೆನ್ಸ್ ಅಂಡ್ ವುಮೆನ್ಸ್ ಎರಡೂ ಸೋಲುಗಳು ದೊಡ್ಡ ಹೊಡೆತ ನೀಡಿವೆ. ಒಂದ್ಕಡೆ ಬಾಯ್ಸ್ ಟೀಂ ಐರಿಷ್ ವಿರುದ್ಧ ಕ್ಲೀನ್ ಸ್ವೀಪ್ ಆಗಿದ್ರೆ ಮತ್ತೊಂದುಕಡೆ ಗರ್ಲ್ಸ್ ಟೀಂ ವರ್ಲ್ಡ್ ಕಪ್ ಟೂರ್ನಿಯಿಂದಲೇ ಹೊರ ಬಿದ್ದಿದೆ.
ಇದನ್ನೂ ಓದಿ : ನಾಳೆಯಿಂದ ರಾಜ್ಯಾದ್ಯಂತ SIR ಆರಂಭ – ವೋಟರ್ ಐಡಿಯಿಂದ OUT, ಗ್ಯಾರಂಟಿ ಕಟ್.. ನೀವು ಏನು ಮಾಡಬೇಕು ಗೊತ್ತಾ?
16 ಸರಣಿ.. 1050 ದಿನಗಳು. 40+ ಪಂದ್ಯಗಳು. ಟೀಂ ಇಂಡಿಯಾ ಮೆನ್ಸ್ ಟಿ 20 ಐ ಟೀಂ ಒಂದೇ ಒಂದು ಸರಣಿ ಸೋತಿರಲಿಲ್ಲ. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿ ಯಲ್ಲಿ unbeaten ರೆಕಾರ್ಡ್ ಮಾಡಿತ್ತು. ಸರಣಿ ಇರ್ಲಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನೇ ಸೋತಿರಲಿಲ್ಲ. ಆದ್ರೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೊದಲ ಸರಣಿಯೇ ಕ್ಲೀನ್ ಸ್ವೀಪ್. ಅದು ಕೂಡ irelend ಅನ್ನೋ ಕ್ರಿಕೆಟ್ ಶಿಶು ಎದುರು. ಇನ್ನು ಈ ಪಂದ್ಯದಲ್ಲೂ ವೈಭವ್ ಸೂರ್ಯವಂಶಿಯನ್ನ ಆಡಿಸಲಿಲ್ಲ. ಪ್ರಿನ್ಸ್ ಯಾದವ್ ಮತ್ತು ಸೂರ್ಯಂಶ್ ಶೆಡ್ಗೆಗೆ ಡೆಬ್ಯೂ ಅವಕಾಶ ಸಿಕ್ರೂ ಸೂರ್ಯವಂಶಿಗೆ ಮತ್ತೆ ಬೆಂಚ್ ಕಾಯಿಸಿದ್ರು. ಬಹುಶಃ ಇದೇ ನಿರ್ಧಾರವೇ ಭಾರತದ ಸೋಲಿಗೆ ಕಾರಣ ಆಯ್ತು ಅನ್ಸುತ್ತೆ. ಮತ್ತೊಂದುಕಡೆ t20 ವರ್ಲ್ಡ್ ಕಪ್ ನಲ್ಲಿ ಸೆಮಿಸ್ ಟಿಕೆಟ್ ಗಾಗಿ ಡು ಓರ್ ಡೈ ಮ್ಯಾಚ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಸೋಲಿನೊಂದಿಗೆ ಟೂರ್ನಿಯಿಂದಲೇ ಹೊರ ಬಿದ್ದಿದೆ.
ಐರಿಷ್ ವಿರುದ್ಧದ ಸೋಲಿಗೆ ಕಾರಣ!
ಟಾಸ್ ಗೆದ್ದ ಭಾರತ ಫಸ್ಟ್ ಬೌಲಿಂಗ್ ನಲ್ಲಿ ಒಳ್ಳೆ ಕಂಟ್ರೋಲ್
155 ರನ್ ಗಳ ಟಾರ್ಗೆಟ್ ಟೀಂ ಇಂಡಿಯಾಗೆ ದೊಡ್ಡ ಸ್ಕೋರ್ ಅಲ್ಲ
ಬ್ಯಾಟಿಂಗ್ ನಲ್ಲಿ ಕಂಪ್ಲೀಟ್ ಹಳ್ಳ ಹಿಡಿದ ಟಾಪ್ ಆರ್ಡರ್
ತಿಲಕ್ 50+ ಆಡಿದ್ರೂ ಸ್ವಲ್ಪ ಅಗ್ರೆಸ್ಸಿವ್ ಬ್ಯಾಟಿಂಗ್ ಬೇಕಿತ್ತು
ಲಾಸ್ಟ್ ಓವರ್ ನಲ್ಲಿ ಹರ್ಷಿತ್ ರಾಣಾ ಗೆಲುವಿನ ಆಸೆ ಮೂಡಿಸಿದ್ರೂ ಸೋಲು
20 ನೇ ಓವರ್ ಹೈಡ್ರಾಮದಲ್ಲಿ ಗೆದ್ದ ಐರಿಷ್ ಆಟಗಾರರು
ಬ್ಯಾಟಿಂಗ್ ಹಾಗೆ ಬೌಲಿಂಗ್ ನಲ್ಲಿ ಐರಿಷ್ ಪ್ಲೇಯರ್ಸ್ ಸೂಪರ್
ಮಹಿಳಾ ಟೀಂ ಸೋಲಿಗೆ ಕಾರಣಗಳು!
ಬ್ಯಾಟಿಂಗ್ ನಲ್ಲಿ ಇನ್ನೂ 10 ರಿಂದ 20 ರನ್ಸ್ ಹೆಚ್ಚುವರಿ ಬೇಕಿತ್ತು
ಆಸ್ಟ್ರೇಲಿಯಾ ವಿರುದ್ಧ 171 ಟಾರ್ಗೆಟ್ ಪ್ರೆಶರ್ ಸ್ಕೋರ್ ಅಲ್ಲ
ಬೌಲಿಂಗ್ ನಲ್ಲಿ ಆರಂಭ ಚೆನ್ನಾಗಿ ಸಿಕ್ಕರೂ ನಂತರ ಫೇಲ್
ಮಿಡಲ್ ಓವರ್ ನಲ್ಲಿ ಭಾರತೀಯರ ಬೌಲಿಂಗ್ ದುಬಾರಿ
ಫೀಲ್ಡಿಂಗ್ ನಲ್ಲೂ ಇನ್ನೂ ಸ್ವಲ್ಪ ಎಫರ್ಟ್ ಬೇಕಿತ್ತು
ಆಸ್ಟ್ರೇಲಿಯಾ ಪರ ಆಲ್ ರೌಂಡ್ ಪ್ರದರ್ಶನ ನೀಡಿದ ಪ್ಲೇಯರ್ಸ್

ನೋಡಿರಿ

