ನಟ ರಿಷಭ್ ಶೆಟ್ಟಿ ಮಗನ ರಂಗಪ್ರವೇಶ– ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ ರಣ್ವಿತ್ ಶೆಟ್ಟಿ

ಕಾಂತಾರ ನಟ ರಿಷಭ್ ಶೆಟ್ಟಿ ತಮ್ಮ ಮನೆಯಲ್ಲಿ ಯಕ್ಷಗಾನ ಸೇವೆ ಮಾಡಿಸಿದ್ದಾರೆ. ಜೊತೆಗೆ ತನ್ನ ಮುದ್ದಿನ ಮಗ ರಿನ್ವಿತ್‌ಗೆ ಯಕ್ಷಗಾನ ವೇಷ ಹಾಕಿಸಿದ್ದಾರೆ. ರಂಗಸ್ಥಳದಲ್ಲಿ ಮಗನ ಹೆಜ್ಜೆ ನೋಡಿ ರಿಷಭ್ ಶೆಟ್ಟಿ ಕುಟುಂಬ ಸಂಭ್ರಮಿಸಿದ್ದಾರೆ. ಈ ವಿಡಿಯೋ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಅಧರ್ಮ ಅಳಿಸೋ ಜ್ವಾಲೆ ಈ ಜಗದ್ಧಾತ್ರಿ.. ಮೋಕ್ಷಿತಾ ಪೈ-ವಿಜಯ್ ಸೂರ್ಯ ಮಾಸ್ ಎಂಟ್ರಿಗೆ ಫ್ಯಾನ್ಸ್ ಫಿದಾ!
ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮನೆಯಲ್ಲಿ ನಡೆದ ಯಕ್ಷಗಾನ ಸೇವೆ ಹಾಗೂ ಧಾರ್ಮಿಕ ಆಚರಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ ನಮ್ಮ ಮನೆಯಲ್ಲಿ ನಡೆದಾಗ ಮನ ತುಂಬಿದ ಕ್ಷಣಗಳು ಎಂದು ರಿಷಬ್ ಶೆಟ್ಟಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಜೊತೆಯಾಗಿ ಪೂಜೆ ಸಲ್ಲಿಸಿದ್ದಾರೆ. ರಿಷಬ್ ಶೆಟ್ಟಿ ಅವರ ಮನೆಯಲ್ಲಿ ಯಕ್ಷಗಾನ ಸೇವೆ ಇತ್ತು. ಕಲಾವಿದರು ಬಣ್ಣ ಹಚ್ಚಿಕೊಳ್ಳುವ ದೃಶ್ಯದಿಂದ ಹಿಡಿದು, ಅದ್ಭುತ ರಂಗಪ್ರದರ್ಶನದವರೆಗಿನ ದೃಶ್ಯಗಳನ್ನು ರಿಷಭ್ ಶೆಟ್ಟಿ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ರಿಷಬ್ ಶೆಟ್ಟಿಯವರ ಮನೆಯಲ್ಲಿ ಯಕ್ಷಗಾನ ಮತ್ತು ಭಜನೆ ಸೇವೆ ಕೂಡಾ ನಡೆದಿದೆ. ಇದರಲ್ಲೊಂದು ವಿಶೇಷವೇನೆಂದರೆ, ರಿಷಬ್ ಶೆಟ್ಟಿ ಮೊದಲ ಬಾರಿಗೆ ತಮ್ಮ ಪುತ್ರ ರನ್ವಿತ್ಗೆ ಬಣ್ಣ ಹಚ್ಚಿಸಿದ್ದಾರೆ. ಯಕ್ಷಗಾನ ಪ್ರಸಂಗದಲ್ಲಿ ರಣ್ವಿತ್ ಪಾತ್ರವೊಂದನ್ನು ಮಾಡಿದ್ದಾರೆ. ರಂಗಸ್ಥಳದಲ್ಲಿ ಮಗ ರಿನ್ವಿತ್ ಹೆಜ್ಜೆ ಹಾಕಿದ ಕ್ಷಣ ನೋಡಿ ರಿಷಬ್ ಶೆಟ್ಟಿ ದಂಪತಿ ಸಂಭ್ರಮಿಸಿದ್ದಾರೆ.
ರಿಷಬ್ ಶೆಟ್ಟಿ ಮೂಲತಃ ಯಕ್ಷಗಾನ ಕಲಾವಿದರು. ಇದೀಗ 8 ವರ್ಷದ ರಿಷಬ್ ಪುತ್ರ ರಣ್ವಿತ್ ಕೂಡ ತಂದೆಯಂತೆ ಯಕ್ಷಗಾನ ರಂಗ ಪ್ರವೇಶ ಮಾಡಿದ್ದಾರೆ. ಪುಟ್ಟ ಪಾತ್ರವೊಂದಕ್ಕೆ ಅಭಿನಯಿಸಿ ಯಕ್ಷಗಾನ ವೇಷ ಧರಿಸಿ ಯಶಸ್ವಿ ರಂಗಪ್ರವೇಶ ಮಾಡಿದ್ದಾರೆ.

ನೋಡಿರಿ

