ಗೆಳೆಯ ವೈಶಾಖ್ ಸಾವಿನ ಬಳಿಕ ಕೃಷಿ ತಾಪಂಡ ಮೊದಲ ಪ್ರತಿಕ್ರಿಯೆ – ನಾನು ಸಹಜ ಸ್ಥಿತಿಗೆ ಬರಲು ಸಾಧ್ಯವೇ ಎಂದು ಕೇಳಿದ ನಟಿ

ಗೆಳೆಯ ವೈಶಾಖ್ ಸಾವಿನ ಬಳಿಕ ಕೃಷಿ ತಾಪಂಡ ಮೊದಲ ಪ್ರತಿಕ್ರಿಯೆ – ನಾನು ಸಹಜ ಸ್ಥಿತಿಗೆ ಬರಲು ಸಾಧ್ಯವೇ ಎಂದು ಕೇಳಿದ ನಟಿ

ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಉದ್ಯಮಿ ವೈಶಾಖ್ ನಟಿ ಮನೆಯಲ್ಲೇ ಸಾವಿಗೆ ಶರಣಾಗಿರುವುದಿಂದ ಕೃಷಿ ಮತ್ತಷ್ಟು ಕುಗ್ಗಿ ಹೋಗಿದ್ದಾರೆ. ಇದೀಗ ನಟಿ ಈ ಎಲ್ಲಾ ವಿಚಾರವಾಗಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಹೆಂಡ್ತಿ ಜೊತೆ ಜಗಳ, ನಟಿ ಜೊತೆಯೇ ವಾಸ – ಉದ್ಯಮಿ ವೈಶಾಖ್ ದುರಂತ ಅಂತ್ಯಕ್ಕೆ ಕಾರಣ ಬಹಿರಂಗ

ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ ವಾಸವಿದ್ದ ಅಪಾರ್ಟ್‌ಮೆಂಟ್​​ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಖ್ ಬದುಕಿಗೆ ಅಂತ್ಯ ಹಾಡಿದ್ದರು. ಈ ಘಟನೆಯಿಂದ ನಟಿ ಕೃಷಿ ಆಘಾತಕ್ಕೊಳಗಾಗಿದ್ದರು. ಇದೀಗ ದುಃಖದಿಂದ ಇರುವ ನಟಿ ಕೃಷಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಕೆಲವು ದಿನಗಳು ನಾನು ಎಂದಿಗೂ ಊಹಿಸದ ರೀತಿಯಲ್ಲಿ ನನ್ನ ಜೀವನವನ್ನು ಬದಲಾಯಿಸಿವೆ. ಜೊತೆಗೆ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರನ್ನು ನಾನು ಕಳೆದುಕೊಂಡಿದ್ದೇನೆ. ಯಾವಾಗಲೂ ನನ್ನ ಜೊತೆಗಿದ್ದು, ನನ್ನನ್ನು ರಕ್ಷಿಸಿ, ಕೇವಲ ಪ್ರೀತಿಯಿಂದ ನನ್ನನ್ನು ನೋಡಿಕೊಂಡ ವ್ಯಕ್ತಿ ಅವರು. ಅವರನ್ನು ಕಳೆದುಕೊಂಡಿರುವುದು ಮಾತುಗಳಲ್ಲಿ ವಿವರಿಸಲಾಗದ ನೋವನ್ನು ಉಂಟು ಮಾಡಿದೆ. ಈ ನಷ್ಟವನ್ನು ಒಪ್ಪಿಕೊಂಡು ನಾನು ಸಹಜ ಸ್ಥಿತಿಗೆ ಬರಲು ಸಾಧ್ಯವೇ ಎಂದು ನನಗೆ ತಿಳಿಯುತ್ತಿಲ್ಲ. ಜೊತೆಗೆ ನಾನು ಬಹಳ ಸಮಯದಿಂದ ನೋವನ್ನು ಹೊತ್ತುಕೊಂಡೇ ಸಾಗುತ್ತಿದ್ದೇನೆ, ಮತ್ತು ಈಗ ನಾನು ಮತ್ತೊಂದು ಊಹಿಸಲೂ ಸಾಧ್ಯವಾಗದ ನಷ್ಟವನ್ನು ಎದುರಿಸಿದ್ದೇನೆ. ದಯವಿಟ್ಟು ಅವರ ಅಗಲಿಕೆಗೆ ಶಾಂತಿಯಿಂದ ದುಃಖಿಸಲು ನಮಗೆ ಕನಿಷ್ಠ ಗೌರವ ಮತ್ತು ಗೌಪ್ಯತೆಯನ್ನು ನೀಡಿ ಎಂದು ನಟಿ ಹೇಳಿದ್ದಾರೆ. ಜೊತೆಗೆ ನಿಮಗೆ ಯಾರನ್ನಾದರೂ ನಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರ ಕಣ್ಣೀರಿಗೆ ನೀವೇ ಕಾರಣವಾಗಬೇಡಿ. ನಿಮಗೆ ಯಾರಿಗಾದರೂ ಬದುಕಲು ಒಂದು ಕಾರಣವನ್ನು ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆಯನ್ನು ಕಳೆದುಕೊಳ್ಳಲು ನೀವೇ ಕಾರಣವಾಗಬೇಡಿ. ನಾನು ಕೈಮುಗಿದು ಪ್ರತಿಯೊಬ್ಬರಲ್ಲೂ ವಿನಂತಿಸುತ್ತೇನೆ, ದಯವಿಟ್ಟು ಅವರಿಗೆ ಶಾಂತಿಯಿಂದ ವಿಶ್ರಮಿಸಲು ಬಿಡಿ .ದಯವಿಟ್ಟು ಕಿಂಚಿತ್ತು ಮಾನವೀಯತೆ ತೋರಿಸಿ ಎಂದು ನಟಿ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ.

Sulekha

Leave a Reply

Your email address will not be published. Required fields are marked *