ಕಣ್ಣಿನ ಆರೋಗ್ಯಕ ಈ ಹಣ್ಣು ಬೆಸ್ಟ್! – ಈ ಸೂಪರ್ ಹಣ್ಣಿನ ವಿಶೇಷತೆ ಏನು ಗೊತ್ತಾ?

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸರಿಯಾದ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ. ನಮ್ಮ ನಡುವೆ ಅನೇಕ ಬಗೆಯ ಆಹಾರಗಳಿವೆ. ಅವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಆರೋಗ್ಯಕ್ಕಾಗಿ ಏನನ್ನು ತಿನ್ನಬೇಕು ಅನ್ನೋ ಪ್ರಶ್ನೆ ಬಂದಾಗ ನಮ್ಮಲ್ಲಿ ಬರುವ ಮೊದಲ ಉತ್ತರ ಏನೆಂದರೆ, ಹಣ್ಣುಗಳು. ಅಂದಹಾಗೆ, ಹಣ್ಣುಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದ್ರಲ್ಲಿ ಕಿವಿ ಹಣ್ಣು ಕೂಡ ಒಂದು.
ಇದನ್ನೂ ಓದಿ: ತೂಕ ಇಳಿಕೆಗೆ ಈ ಹಣ್ಣು ಬೆಸ್ಟ್! – ಯಾವಾಗ ಈ ಹಣ್ಣು ಸೇವಿಸಬೇಕು?
ಕಿವಿ ಹಣ್ಣು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ದೊರೆಯುತ್ತವೆ. ಕಿವಿ ಹಣ್ಣು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಹಣ್ಣಾಗಿದೆ. ಪ್ರತಿದಿನ ಒಂದು ಕಿವಿ ಹಣ್ಣು ತಿನ್ನುವುದರಿಂದ ಕಣ್ಣಿನ ಸಮಸ್ಯೆಗಳು ಬರುವುದಿಲ್ಲ. ಕಿವಿ ಹಣ್ಣು ಕಣ್ಣಿನ ಪೊರೆ ಮತ್ತು ಅನೇಕ ಕಣ್ಣಿನ ಸಮಸ್ಯೆಗಳನ್ನು ದೂರವಿಡುತ್ತದೆ. ಕಿವಿಯಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನರಮಂಡಲ ಮತ್ತು ರಕ್ತ ಪರಿಚಲನೆಗೆ ಸಹಾಯ ಮಾಡುತ್ತವೆ. ಇದು ಕಣ್ಣುಗಳ ರಕ್ತ ಪರಿಚಲನೆಯನ್ನು ಚೆನ್ನಾಗಿ ಇಡುತ್ತದೆ.
ಕಿವಿ ಹಣ್ಣು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಕಂಡುಬರುತ್ತವೆ. ವಯಸ್ಸಾದಂತೆ ದೃಷ್ಟಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ತೊಂದರೆ ಕೊಡಲು ಪ್ರಾರಂಭಿಸುತ್ತವೆ. ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು, ನೀವು ಕಿವಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಕಿವಿ ತಿನ್ನುವುದರಿಂದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಹೇರಳವಾಗಿ ದೊರೆಯುತ್ತದೆ.
ಕಿವಿ ಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದರಲ್ಲಿರುವ ವಿಟಮಿನ್ ಸಿ ಪ್ರಮಾಣ ಕಿತ್ತಳೆಗಿಂತ ಎರಡು ಪಟ್ಟು ಹೆಚ್ಚು. ಕಿವಿ ಹಣ್ಣಿನಲ್ಲಿ ಫೈಬರ್ ಅಂಶವಿದ್ದು, ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಕಿವಿ ಹಣ್ಣಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅಂಶ ಮತ್ತು ಕಡಿಮೆ ಕ್ಯಾಲೋರಿಗಳಿದ್ದು, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ರೆಟಿನಾದ ಮಧ್ಯಭಾಗವಾದ ಮ್ಯಾಕುಲಾ, ಲುಟೀನ್, ಬೀಟಾ-ಕ್ಯಾರೋಟಿನ್ ಮತ್ತು ಜಿಯಾಕ್ಸಾಂಥಿನ್ ನಿಂದ ಮಾಡಲ್ಪಟ್ಟಿದೆ. ದೇಹವು ಈ ಫೈಟೊಕೆಮಿಕಲ್‌ಗಳನ್ನು ವಿಟಮಿನ್ ಎ ಗಾಗಿ ಬಳಸುತ್ತದೆ. ಇದು ಉತ್ತಮ ದೃಷ್ಟಿಗೆ ತುಂಬಾ ಉಪಯುಕ್ತವಾಗಿದೆ. ಕಣ್ಣುಗಳನ್ನು ಆರೋಗ್ಯವಾಗಿಡಲು ಕಿವಿ ಹಣ್ಣು ತಿನ್ನಬೇಕು.
ಕಿವಿ ಹಣ್ಣಿನಲ್ಲಿ ತಾಮ್ರ ಹೇರಳವಾಗಿದ್ದು, ಇದು ಕಣ್ಣುಗಳ ನರಗಳಿಗೆ ಪರಿಹಾರ ನೀಡುತ್ತದೆ. ಆದರೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣುಗಳಲ್ಲಿನ ಕಿರಿಕಿರಿ, ಊತ ಮತ್ತು ಕೆಂಪು ಬಣ್ಣವನ್ನು ನಿವಾರಿಸುತ್ತದೆ. ಕಿವಿ ತಿನ್ನುವುದರಿಂದ ಮಧುಮೇಹ ಮತ್ತು ಹೃದಯ ಆರೋಗ್ಯವಾಗಿರುತ್ತದೆ. ಈ ಎರಡೂ ಅಂಗಗಳು ಕಣ್ಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ನೋಡಿರಿ

