ಮೈಸೂರು ಪ್ರವಾಸ ಹೋದ್ರೆ ಈ ದೇವಸ್ಥಾನಗಳಿಗೆ ಒಮ್ಮೆ ಹೋಗಿ – ಯಾವೆಲ್ಲಾ ದೇವಸ್ಥಾನಗಳು ಗೊತ್ತಾ?

ಮೈಸೂರು ಪ್ರವಾಸ ಹೋದ್ರೆ ಈ ದೇವಸ್ಥಾನಗಳಿಗೆ ಒಮ್ಮೆ ಹೋಗಿ – ಯಾವೆಲ್ಲಾ ದೇವಸ್ಥಾನಗಳು ಗೊತ್ತಾ?

ನಮ್ಗೆ ಮೈಸೂರು ಅಂದ್ರೆ ಫಟ್ ಅಂತ ನೆನಪಿಗೆ ಬರುವುದು ಮೈಸೂರು ಅರಮನೆ ಹಾಗೇ ಚಾಮುಂಡೇಶ್ವರಿ ದೇವಸ್ಥಾನ. ಆದ್ರೆ ನೀವು ಮೈಸೂರಿಗೆ ಭೇಟಿ ಕೊಟ್ಟಗ ಐದು ಐತಿಹಾಸಿಕ ದೇವಸ್ಥಾನಕ್ಕೆ ಹೋಗಬಹುದು. ಹಾಗಿದ್ರೆ ಐತಿಹಾಸಿಕ ದೇವಸ್ಥಾನಗಳು ಯಾವುದು ಅನ್ನೋದ್ದನ್ನ ನೋಡೋಣ ಬನ್ನಿ. 

ಮೈಸೂರು ಚಾಮುಂಡೇಶ್ವರಿ

ಮೈಸೂರು ಚಾಮುಂಡೇಶ್ವರಿ ದೇವಸ್ಥಾನವು 18 ಮಹಾ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಮೈಸೂರಿನಲ್ಲಿರುವ ಅತ್ಯಂತ ಪ್ರಸಿದ್ಧವಾದ ದೇವಸ್ಥಾನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನವು ಒಂದಾಗಿದ್ದು, ಇದು ಕರ್ನಾಟಕದ ಹೆಗ್ಗುರುತು ಕೂಡ ಹೌದು. ಈ ಆಲಯವು ಸುಮಾರು 1000 ಅಡಿ ಎತ್ತರದ ಬೆಟ್ಟದ ಮೇಲಿದೆ ದುರ್ಗಾ ದೇವಿಗೆ ಸಮರ್ಪಿತವಾದ ಈ ಪವಿತ್ರ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಹಾಗೂ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ದೊಡ್ಡ ನಂದಿ ಹಾಗೂ ಮಹಿಷಾಸುರನ ಪ್ರತಿಮೆಗಳಿವೆ.

ನಂಜನಗೂಡು ನಂಜುಂಡೇಶ್ವರ

ಮೈಸೂರಿನ ಈ ನಂಜನಗೂಡು ನಂಜುಂಡೇಶ್ವರ ದೇವಸ್ಥಾನವು ಚಾಮುಂಡೇಶ್ವರಿ ದೇವಸ್ಥಾನದ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಶೈವ ಕ್ಷೇತ್ರವಾಗಿದೆ. ಈ ಆಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಮಹಾಶಿವನಿಗೆ ಸಮರ್ಪಿತವಾಗಿದೆ. ದಂತಕಥೆಯ ಪ್ರಕಾರ, ಸಮುದ್ರಮಂಥನದಲ್ಲಿ ವಿಷವನ್ನು ಸೇವಿಸಿದ ನಂತರ ಶಿವನು ಇದೇ ಸ್ಥಳದಲ್ಲಿ ವಿಶ್ರಾಂತಿ ಪಡೆದನು. ಈ ಕಾರಣದಿಂದಲೇ ಈ ಸ್ವಾಮಿಯನ್ನು ನಂಜುಂಡೇಶ್ವರ ಎಂದು ಕರೆಯಲಾಯಿತು. ಇನ್ನು, ಈ ಆಲಯದಲ್ಲಿ ಗಂಗಾ ರಾಜವಂಶದ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.

ತಲಕಾಡು ವೈದ್ಯನಾಥೇಶ್ವರ ದೇವಸ್ಥಾನ

ತಲಕಾಡು ವೈದ್ಯನಾಥೇಶ್ವರ ದೇವಸ್ಥಾನವು ಒಂದಾಗಿದೆ. ಇದು ತಲಕಾಡಿನ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ. ಈ ಆಲಯವು ಐದು ಲಿಂಗ ಯಾತ್ರಾ ಮಾರ್ಗದ ಒಂದು ಭಾಗವಾಗಿದೆ. 14 ನೇ ಶತಮಾನದಲ್ಲಿ ನಿರ್ಮಿತವಾಗಿ ಈ ಶಿವಾಲಯವು ಸುಬ್ರಹ್ಮಣ್ಯ ಸ್ವಾಮಿ, ಗಣೇಶ ಮತ್ತು ಮನೋನ್ಮಣಿ ದೇವತೆಗಳನ್ನು ಆಲಯದ ಸಂಕೀರ್ಣದಲ್ಲಿ ಹೊಂದಿದೆ.

ಸೋಮನಾಥಪುರ ದೇವಾಲಯ

ಮೈಸೂರಿನ ಮತ್ತೊಂದು ಪ್ರಮುಖ ದೇವಸ್ಥಾನಗಳಲ್ಲಿ ಈ ಸೋಮನಾಥಪುರ ದೇವಾಲಯವು ಒಂದಾಗಿದೆ. ಇದನ್ನು ‘ಪ್ರಸನ್ನ ಚೆನ್ನಕೇಶವ ದೇವಾಲಯ’ ಅಥವಾ ‘ಕೇಶವ ದೇವಾಲಯ’ ಎಂದೂ ಸಹ ಕರೆಯುತ್ತಾರೆ. ಈ ಆಲಯವು ವಿಷ್ಣುವಿಗೆ ಸಮರ್ಪಿತವಾಗಿದ್ದು, ದೇಶದ ಅನೇಕ ಭಾಗಗಳಿಂದ ಈ ಆಲಯಕ್ಕೆ ಸಂದರ್ಶಕರು ಭೇಟಿ ನೀಡುತ್ತಾರೆ. ಹೊಯ್ಸಳ ಸಾಮ್ರಾಜ್ಯದ ರಾಜರು ತಮ್ಮ ಆಡಳಿತದ ಸಮಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಿದ 1500 ದೇವಾಲಯಗಳಲ್ಲಿ ಈ ಚೆನ್ನಕೇಶವ ದೇವಾಲಯವು ಒಂದಾಗಿದೆ.

ಮಲ್ಲಿಕಾರ್ಜುನ ಸ್ವಾಮಿ

ತಲಕಾಡುವಿನಲ್ಲಿರುವ ಈ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವು ಮೈಸೂರಿನ ಪ್ರಾಚೀನ ದೇವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿ ಬ್ರಹ್ಮರಾಂಬಿಗೈ ದೇವಿಯ ಲಿಂಗಕ್ಕೆ ಸಮರ್ಪಿತವಾದ ಹಳೆಯ ದೇವಾಲಯವಾಗಿದೆ. ಕಾಮಧೇನುವಿಗೆ ಸೇರಿದೆ ಎಂದು ನಂಬಲಾದ ಲಿಂಗದ ಮೇಲಿನ ಪಾದದ ಗುರುತುಗಳನ್ನು ಇಲ್ಲಿ ವೀಕ್ಷಿಸಬಹುದು. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಕರ್ಷಕ ಕೃಷಿ ಮೇಳ ನಡೆಯುತ್ತದೆ.

Kishor KV

Leave a Reply

Your email address will not be published. Required fields are marked *