12ಕ್ಕೆ ರಣಜಿ.. 14ಕ್ಕೆ IPL.. 15ಕ್ಕೆ ಭಾರತ – 3 ವರ್ಷದಲ್ಲೇ WONDER ಆದ ವೈಭವ್  
ಕ್ರಿಕೆಟ್ ಜಗತ್ತನ್ನೇ ಸೆಳೆದ ಸೂರ್ಯವಂಶಿ

12ಕ್ಕೆ ರಣಜಿ.. 14ಕ್ಕೆ IPL.. 15ಕ್ಕೆ ಭಾರತ – 3 ವರ್ಷದಲ್ಲೇ WONDER ಆದ ವೈಭವ್  ಕ್ರಿಕೆಟ್ ಜಗತ್ತನ್ನೇ ಸೆಳೆದ ಸೂರ್ಯವಂಶಿ

ವಿಶ್ವಕ್ರಿಕೆಟ್​ನಲ್ಲಿ ಜನರೇಷನಲ್ ಟ್ಯಾಲೆಂಟ್ ಅಂತಾನೇ ಟ್ರೆಂಡ್ ಸೆಟ್ ಮಾಡಿರೋ ವೈಭವ್ ಸೂರ್ಯವಂಶಿ ಹೊಸ ಇನ್ನಿಂಗ್ಸ್ ಆರಂಭವಾಗಿದೆ. ಟೀಂ ಇಂಡಿಯಾದಲ್ಲಿ ಇನ್ಮುಂದೆ ವಂಡರ್ ಕಿಡ್ ವೈಭವ ಮತ್ತಷ್ಟು ಹೆಚ್ಚಲಿದೆ. 15 ವರ್ಷಕ್ಕೇ ಟೀಂ ಇಂಡಿಯಾ ಸೀನಿಯರ್ಸ್​ಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರೋ ಸೂರ್ಯವಂಶಿ.

ಇದನ್ನೂ ಓದಿ : ಟೀಂ ಇಂಡಿಯಾಗೆ DO Or DIE –  AUS ವಿರುದ್ಧ ಗೆದ್ರಷ್ಟೇ ಸೆಮೀಸ್ ಟಿಕೆಟ್

ಕ್ರಿಕೆಟ್ ಲೋಕದಲ್ಲಿ ವೈಭವ್ ಸೂರ್ಯವಂಶಿ ಈಗ ಪ್ರಚಂಡ ಪುಟಾಣಿ. ಆತನ ಪ್ರತಿಭೆ, ಸಾಮರ್ಥ್ಯ, ಕಿಚ್ಚು, ಸ್ಥೈರ್ಯ ಕಂಡ ಸಾಕಷ್ಟು ಮಂದಿ ಆತನ ವಯಸ್ಸಿನ ಮೇಲೇ ಅನುಮಾನ ಪಡುವಂತೆ ಅಬ್ಬರಿಸಿದ್ದಾನೆ. ವರ್ಲ್ಡ್ ಕ್ಲಾಸ್ ಬೌಲರ್​ಗಳ ಎದುರಲ್ಲೂ ಲೀಲಾಜಾಲವಾಗಿ ಬ್ಯಾಟ್ ಬೀಸೋ ಸೂರ್ಯವಂಶಿ 15ನೇ ವಯಸ್ಸಿನಲ್ಲೇ ಅಸಾಧ್ಯ ಅನ್ನೋದನ್ನೂ ಸಾಧಿಸಿ ತೋರಿಸಿದ ಹುಡುಗ. ದಶಕಗಳ ಕಾಲ ಕ್ರಿಕೆಟ್​ನಲ್ಲಿ ಮೆರೆದ ದಿಗ್ಗಜರೂ ಕೂಡ ಸೂರ್ಯವಂಶಿಯನ್ನ ಕೊಂಡಾಡುತ್ತಿದ್ದಾರೆ. ಬಿಹಾರದಲ್ಲಿ ಹುಟ್ಟಿದ ಸೂರ್ಯವಂಶಿ ಈಗ ಜಗತ್ತೇ ತನ್ನತ್ತ ನೋಡುವಂತೆ ಮಾಡ್ತಿದ್ದಾನೆ.

ಸೂರ್ಯವಂಶಿಯ ವೈಭವ!

2011ರ ಮಾರ್ಚ್ 27 ರಂದು ಸಮಸ್ತಿಪುರ ಜಿಲ್ಲೆಯ ತಾಜ್‌ಪುರದಲ್ಲಿ ಜನನ

ನಾಲ್ಕನೇ ವಯಸ್ಸಿನಲ್ಲೇ ಮಗನ ಕೈಗೆ ಬ್ಯಾಟ್ ಕೊಟ್ಟಿದ್ದ ತಂದೆ ಸಂಜೀವ್

5ನೇ ವಯಸ್ಸಿನಲ್ಲೇ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿ ಅಭ್ಯಾಸ

12 ವರ್ಷದಲ್ಲಿ ಬಿಹಾರದ 19 ವರ್ಷದೊಳಗಿನವರ ವಿನೂ ಮಂಡಕ್ ಟ್ರೋಫಿ

2024ರ ಸೆಪ್ಟೆಂಬರ್ ನಲ್ಲಿ ಅಂಡರ್ 19ನಲ್ಲಿ ಆಸೀಸ್ ವಿರುದ್ಧ 58ಬಾಲಲ್ಲಿ ಶತಕ

2024ರ ಜನವರಿಯಲ್ಲಿ 12 ವರ್ಷ 284 ದಿನಗಳಲ್ಲೇ ರಣ ಕ್ರಿಕೆಟ್ ಗೆ ಪಾದಾರ್ಪಣೆ

ವೈಭವ್ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಮುಂಬೈ ವಿರುದ್ಧ ಪಾದಾರ್ಪಣೆ

ಬಿಹಾರ ಪರ ರಣಜಿ ಟ್ರೋಫಿ ಆಡಿದ ಎರಡನೇ ಕಿರಿಯ ಆಟಗಾರ ಮತ್ತು ಒಟ್ಟಾರೆ 4

ನವೆಂಬರ್ 2024 ರ ಹೊತ್ತಿಗೆ 13 ವರ್ಷ 241 ದಿನಗಳಲ್ಲಿ ಸೈಯದ್ ಮುಸ್ತಾಕ್ ಅಲಿ

13 ವರ್ಷ 269 ದಿನಗಳಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎ ಚೊಚ್ಚಲ ಪ್ರವೇಶ

ನವೆಂಬರ್ 2024 ರಲ್ಲಿ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ ಅತ್ಯಂತ ಕಿರಿಯ ಆಟಗಾರ

13 ವರ್ಷ ವಯಸ್ಸಿನಲ್ಲಿ ₹1.1 ಕೋಟಿಗೆ ರಾಜಸ್ಥಾನ್ ರಾಯಲ್ಸ್ ತಂಡ ಸೇರ್ಪಡೆ

ಏಪ್ರಿಲ್ 19, 2025 ರಂದು ಲಕ್ನೋ ವಿರುದ್ಧ ಮೊದಲ ಪಂದ್ಯವಾಡಿದ ವೈಭವ್

ಶಾರ್ದೂಲ್ ಠಾಕೂರ್ ಗೆ ಫಸ್ಟ್ ಬಾಲ್ ಸಿಕ್ಸ್ ಹೊಡೆದು ಆ ಪಂದ್ಯದಲ್ಲಿ 34(20) ರನ್ಸ್

ಏಪ್ರಿಲ್ 28, 2025 ರಂದು ಅಂದ್ರೆ 14 ವರ್ಷ 32 ದಿನಗಳಲ್ಲಿ 35 ಬಾಲಲ್ಲೇ ಶತಕ

ಎರಡನೇ ಅತ್ಯಂತ ವೇಗದ ಶತಕ ಮತ್ತು ಭಾರತೀಯರಿಂದ ಅತ್ಯಂತ ವೇಗದ ಶತಕ

ಎಲ್ಲಾ ಟಿ20 ಸ್ವರೂಪಗಳಲ್ಲಿ 50+ ರನ್ಸ್ ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು

2026ರಲ್ಲಿ 16 ಇನ್ನಿಂಗ್ಸ್ ಗಳಲ್ಲಿ 776 ರನ್ಸ್ ಗಳಿಸಿ ಆರೆಂಜ್ ಕ್ಯಾಪ್ ಪಡೆದರು

72 ಸಿಕ್ಸರ್ ಬಾರಿಸಿ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ

ಐಪಿಎಲ್ ಬಳಿಕ ಐದು ಪ್ರಮುಖ ಪ್ರಶಸ್ತಿಗಳನ್ನ ಬಾಚಿಕೊಂಡ ವೈಭವ್

Shantha Kumari

Leave a Reply

Your email address will not be published. Required fields are marked *