ಪಾಂಡ್ಯಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! – MI ಕ್ಯಾಪ್ಟನ್ ಗೆ 4 ಫ್ರಾಂಚೈಸಿಗಳು ಗಾಳ
ಯಾವ ತಂಡ ಸೇರ್ತಾರೆ ಹಾರ್ದಿಕ್?

ಪಾಂಡ್ಯಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! – MI ಕ್ಯಾಪ್ಟನ್ ಗೆ 4 ಫ್ರಾಂಚೈಸಿಗಳು ಗಾಳಯಾವ ತಂಡ ಸೇರ್ತಾರೆ ಹಾರ್ದಿಕ್?

ಐಪಿಎಲ್​ನಲ್ಲಿ ಆಲ್ರೆಡಿ ಟ್ರೇಡ್ ಡೀಲ್ ಸ್ಟಾರ್ಟ್ ಆಗಿ ಲಕ್ನೋ ಮತ್ತು ಮುಂಬೈ ನಡುವೆ ಬಿಗ್ ಡೀಲ್ ಆಗಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಇಂಟ್ರೆಸ್ಟಿಂಗ್ ಅಂದ್ರೆ ಮತ್ತೊಬ್ಬ ಬಿಗ್ ಪ್ಲೇಯರ್ ಕೂಡ ಹೊಸ ಟೀಂ ಸೇರೋಕೆ ಕಾಯ್ತಿದ್ದಾರೆ. ಆದ್ರೆ ಆತನಿಗಾಗಿ ಫ್ರಾಂಚೈಸಿಗಳಲ್ಲೇ ರೇಸ್ ಸ್ಟಾರ್ಟ್ ಆಗಿದೆ.

ಇದನ್ನೂ ಓದಿ : ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ಕಿಚ್ ಸುದೀಪ್ ಕ್ಯಾರವನ್ – 6.5 ಕೋಟಿ ಕ್ಯಾರವನ್ ವಿಶೇಷತೆಯೇನು ಗೊತ್ತಾ?

ಹಾರ್ದಿಕ್ ಪಾಂಡ್ಯ. ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡರಲ್ಲೂ ತಂಡಕ್ಕೆ ಗೆಲುವು ತಂದುಕೊಡಬಲ್ಲ ಗೇಮ್ ಚೇಂಜರ್. ಆದ್ರೆ ಐಪಿಎಲ್​ನಲ್ಲಿ ಕಳೆದ ಮೂರು ಆವೃತ್ತಿಗಳೂ ಪಾಂಡ್ಯ ಪಾಲಿಗೆ ಕಷ್ಟವೇ ಆಗಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಇತಿಹಾಸ ಸೃಷ್ಟಿಸಿದ್ದ ಮುಂಬೈ ತಂಡ ಪಾಂಡ್ಯ ಕ್ಯಾಪ್ಟನ್ ಆದ್ಮೇಲೆ ತಂಡದಲ್ಲೇ ಒಡಕು ಮೂಡಿದೆ. ಅಲ್ದೇ ಪಾಂಡ್ಯರಿಂದ ತಂಡಕ್ಕೇನು ಲಾಭ ಆಗ್ತಿಲ್ಲ ತಂಡದಿಂದಲೂ ಇವ್ರಿಗೆ ಏನೂ ಪ್ಲಸ್ ಇಲ್ಲ. ಹೀಗಾಗಿ ಮುಂಬೈ ಕ್ಯಾಪ್ಟನ್ಸಿ ಬಿಟ್ಟು ತಂಡದಿಂದಲೇ ಹೊರಬರೋ ಪ್ಲ್ಯಾನ್​ನಲ್ಲಿದ್ದಾರೆ. ಅಟ್ ದಿ ಸೇಂ ಟೈಂ ಪಾಂಡ್ಯಗಾಗಿ ಹಲವು ತಂಡಗಳು ಗಾಳ ಹಾಕಿವೆ.

ಆಲ್ ರೌಂಡರ್ ಪಾಂಡ್ಯಗೆ ಗಾಳ ಹಾಕಿದ ಫ್ರಾಂಚೈಸಿಗಳು!

10 ತಂಡಗಳ ಪ್ರತಿಷ್ಠಿತ ಐಪಿಎಲ್​ನಲ್ಲಿ ಟ್ರೋಫಿ ಗೆಲ್ಲೋದು ಸುಲಭದ ಮಾತು ಅಲ್ವೇ ಅಲ್ಲ. ಲೋಕಲ್ ಟ್ಯಾಲೆಂಟೆಡ್ ಪ್ಲೇಯರ್ಸ್​ರಿಂದ ಹಿಡ್ದು ಅಂತಾರಾಷ್ಟ್ರೀಯ ಸ್ಟಾರ್ ಪ್ಲೇಯರ್ಸ್ ಕೂಡ ಅಖಾಡದಲ್ಲಿ ಇರ್ತಾರೆ. ಕೆಲವ್ರು ಬ್ಯಾಟಿಂಗ್​ನಲ್ಲಿ ಸದ್ದು ಮಾಡಿದ್ರೆ ಇನ್ನೂ ಕೆಲವ್ರು ಬೌಲಿಂಗ್​ನಲ್ಲಿ ಬಿರುಗಾಳಿ ಎಬ್ಬಿಸ್ತಾರೆ. ಆದ್ರೆ ಬ್ಯಾಟ್ ಹಾಗೇ ಬಾಲ್ ಎರಡ್ರಲ್ಲೂ ಇಂಪ್ಯಾಕ್ಟ್ ಮಾಡಬಲ್ಲ ಕೆಲವೇಕೆಲ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಟಾಪ್​ನಲ್ಲಿದ್ದಾರೆ. ಸಾಕಷ್ಟು ಎಕ್ಸ್​ಪೀರಿಯನ್ಸ್ ಇರೋ ಪ್ಲೇಯರ್. ಇದೇ ಕಾರಣಕ್ಕೆ ಪಾಂಡ್ಯ ಮುಂಬೈ ಬಿಡೋದು ಗೊತ್ತಾಗ್ತಿದ್ದಂತೆ ಹಲವು ಫ್ರಾಂಚೈಸಿಗಳು ಅವ್ರ ಮೇಲೆ ಕಣ್ಣಿಟ್ಟಿದ್ದಾರೆ.

ಪಾಂಡ್ಯಗಾಗಿ ಫ್ರಾಂಚೈಸಿಗಳ ಗಾಳ!

ಮುಂಬೈ ಮತ್ತು ರಾಜಸ್ಥಾನ ನಡುವೆ ಪಾಂಡ್ಯ-ಜೈಸ್ವಾಲ್ ಸ್ವ್ಯಾಪ್ ಡೀಲ್!

ರಿಷಬ್ ಪಂತ್ ಬಿಟ್ಟ ಮೇಲೆ ಲಕ್ನೋ ತಂಡ ಪಾಂಡ್ಯ ಮೇಲೆ ಕಣ್ಣಿಟ್ಟಿದ್ಯಾ?

ಕೊಲ್ಕತ್ತಾ ತಂಡದಿಂದ ರಹಾನೆಯನ್ನು ಬಿಟ್ಟು ಪಾಂಡ್ಯಗೆ ಪಟ್ಟದ ಪ್ಲ್ಯಾನ್

ಚೆನ್ನೈ ಸೂಪರ್ ಕಿಂಗ್ಸ್ ನಲ್ಲೂ ಅನುಭವಿ ಆಲ್ ರೌಂಡರ್ ಗಾಗಿ ಕಣ್ಣು

ಹೀಗೆ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ದಿನಕ್ಕೊಂದು ಟಾಪಿಕ್ ಸದ್ದು ಮಾಡ್ತಿದೆ. ನಿಜ ಹೇಳ್ಬೇಕಂದ್ರೆ ಪಾಂಡ್ಯ ನಿಜಕ್ಕೂ ಒಳ್ಳೆ ಆಟಗಾರ. ಬಟ್ ಮುಂಬೈ ಕ್ಯಾಪ್ಟನ್ ಆಗಿದ್ದೇ ಅವ್ರ ಕರಿಯರ್​ನಲ್ಲಿ ಸ್ವಲ್ಪ ತಿರುವು ಪಡ್ಕೊಂಡಿದೆ. ಪಾಂಡ್ಯಗೂ ಕೂಡ ಮುಂಬೈ ಬಿಟ್ರೆ ಆನ್​ಫೀಲ್ಡ್​ನಲ್ಲಿ ಉತ್ತಮ ಪ್ರದರ್ಶನ ನಿರೀಕ್ಷೆ ಮಾಡ್ಬೋದು.

Shantha Kumari

Leave a Reply

Your email address will not be published. Required fields are marked *