IREನಲ್ಲಿ ಸೋತವ್ರು ENGನಲ್ಲಿ ಗೆಲ್ತಾರಾ? – ಭಾರತಕ್ಕೆ ಜುಲೈ 1ರಿಂದ ರಿಯಲ್ ಟಾಸ್ಕ್
ಶ್ರೇಯಸ್ & ಗಂಭೀರ್ ಗೆ ಈಗ ಅಗ್ನಿಪರೀಕ್ಷೆ!

2024ರ ಟಿ-20 ವಿಶ್ವಕಪ್ ಚಾಂಪಿಯನ್ಸ್.. 2026ರಲ್ಲಿ ಭಾರತದಲ್ಲೇ ಟ್ರೋಫಿ ವಿನ್ನರ್ಸ್.. ಟಿ-20ಐ ಫಾರ್ಮೆಟ್ನಲ್ಲಿ ಭಾರತವೇ ಬಾಸ್ ಅನ್ನೋದು ಎಲ್ರಿಗೂ ಗೊತ್ತಿರೋದೇ. ಆದರೆ ಈಗ ವಿಶ್ವಚಾಂಪಿಯನ್ ಟೀಂ ಇಂಡಿಯಾ ಕ್ರಿಕೆಟ್ನಲ್ಲಿ ಅಂಬೆಗಾಲಿಡ್ತಿರೋ ಐರ್ಲೆಂಡ್ ವಿರುದ್ಧ ಸೋಲು ಕಂಡಿದ್ದಾರೆ. ಶುಕ್ರವಾರದ ಪಂದ್ಯದ ಸೋಲು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. ಯಾಕಂದ್ರೆ ಜುಲೈ 1ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20ಐ ಸರಣಿ ನಡೆಯಲಿದೆ.
ಇದನ್ನೂ ಓದಿ : 5.. 1.. 3.. 148ಕ್ಕೆ ALL OUT – ಭಾರತದ ಅಹಂಗೆ ಐರ್ಲೆಂಡ್ ಪೆಟ್ಟು
ಐರ್ಲೆಂಡ್ ವಿರುದ್ಧದ 20 ವರ್ಷಗಳ ಭಾರತದ ಪಾರುಪತ್ಯ ಅಂತ್ಯವಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಫಾರ್ ದಿ ಫಸ್ಟ್ ಟೈಂ ಐರಿಷ್ ಪಡೆ ಟೀಂ ಇಂಡಿಯಾ ವಿರುದ್ಧ ಟಿ-20ಐ ಮ್ಯಾಚ್ ಗೆದ್ದಿದೆ. ಕಳೆದ 10 ಪಂದ್ಯಗಳಲ್ಲಿ ಒಮ್ಮೆಯೂ ಭಾರತ ಐರ್ಲೆಂಡ್ ವಿರುದ್ಧ ಸೋತಿರಲಿಲ್ಲ. ಬಟ್ 11ನೇ ಮ್ಯಾಚಲ್ಲಿ ಈ ವಿಜಯಯಾತ್ರೆಗೆ ಬ್ರೇಕ್ ಬಿದ್ದಿದೆ. ಈ ಗೆಲುವಿನೊಂದಿಗೆ ಐರಿಷ್ ಪಡೆ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಸರಣಿ ಗೆಲ್ಲದಿದ್ದರೂ ಸೋಲೋದಂತೂ ಇಲ್ಲ. ಯಾಕಂದ್ರೆ ಎರಡೇ ಪಂಧ್ಯಗಳು ಇರೋದ್ರಿಂದ ಭಾರತ ಎರಡನೇ ಪಂದ್ಯದಲ್ಲಿ ಗೆದ್ರೂ ಸರಣಿ ಸಮಬಲವಾಗುತ್ತೆ. ಇಲ್ಲದಿದ್ರೆ ಐರಿಷ್ ಗೆದ್ರೆ ಸರಣಿ ಕೈವಶ ಮಾಡಿಕೊಳ್ಳುತ್ತೆ. ಐರ್ಲೆಂಡ್ನಂತ ಕ್ರಿಕೆಟ್ ಶಿಶುವಿನ ಎದುರೇ ಸೋತಿರೋ ಭಾರತಕ್ಕೆ ಅಸಲಿ ಟಾಸ್ಕ್ ನೆಕ್ಸ್ಟ್ ವೀಕ್ನಿಂದ ಶುರುವಾಗಲಿದೆ.
ಭಾರತದ ವಿರುದ್ಧ ಸರಣಿ ಗೆಲ್ಲಲು ಬಲಿಷ್ಠ ಆಂಗ್ಲಪಡೆ ರೆಡಿ!
ಐರಿಷ್ ಸರಣಿ ಮುಗಿದ ಮೂರೇ ದಿನದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟಿ-20ಐ ಸರಣಿ ಆಡಲಿದೆ. ಜೂನ್ 28ಕ್ಕೆ ಐರ್ಲೆಂಡ್ ವಿರುದ್ಧ 2ನೇ ಮ್ಯಾಚ್ ಆಡಿದ ಬಳಿಕ ಜುಲೈ 1ರಿಂದ ಐದು ಪಂದ್ಯಗಳ ಟಿ-20ಐ ಸರಣಿ ಆರಂಭ ಆಗುತ್ತೆ. ಅದಾದ ಮೇಲೆ ಜುಲೈ 14ರಿಂದ ಮೂರು ಪಂದ್ಯಗಳ ಏಕದಿನ ಸರಣಿಯೂ ಇದೆ. ವಿಷ್ಯ ಅಂದ್ರೆ ಭಾರತ ಈಗ ಟಿ-20ಐ ಫಾರ್ಮೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ತಾರಾ ಅನ್ನೋದೇ ಚರ್ಚೆ ನಡೀತಿದೆ. ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಹ್ಯಾರಿ ಬ್ರೂಕ್ ನಾಯಕತ್ವದ ಈ ತಂಡದಲ್ಲಿ ಆರ್‌ಸಿಬಿಯ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಌಂಡ್ ಇಂಜುರಿಯಿಂದ ರಿಕವರ್ ಆಗಿ ಸ್ಟಾರ್ ಪ್ಲೇಯರ್ಸ್ ಕೂಡ ಕಂ ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ಟೀಂ ಬಲಿಷ್ಠವಾಗಿದೆ. ಮತ್ತೊಂದೆಡೆ ಭಾರತ ಐರಿಷ್ ವಿರುದ್ಧದ ಸರಣಿ ಆಡಿದವ್ರೇ ಇಂಗ್ಲೆಂಡ್ ವಿರುದ್ಧವೂ ಆಡೋದ್ರಿಂದ ಹೊಸ ಸವಾಲೂ ಎದುರಾಗಲಿದೆ.
ಆಂಗ್ಲರ ನಾಡಿನಲ್ಲಿ ಅಸಲಿ ಟಾಸ್ಕ್!
ತಂಡದಲ್ಲೇ ಇಲ್ಲದ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಮೂಲಕ ಕಂ ಬ್ಯಾಕ್
ಇಂಗ್ಲೆಂಡ್ ನಲ್ಲಿ ಟಿ-20ಐ ಮ್ಯಾಚ್ ಆಡಿ ಶ್ರೇಯಸ್ ನಾಲ್ಕು ವರ್ಷ ಕಳೆದಿದೆ
ಟಿ-20ಐ ಫಾರ್ಮೆಟ್ ನಲ್ಲಿ 2022ರ ಜುಲೈ 8ರಂದು ಕೊನೇ ಬಾರಿ ಆಟ
ಮಿಡಲ್ ಆರ್ಡರ್ ನಲ್ಲಿ ರನ್ಸ್ ಇಲ್ಲ, ಬೌಲಿಂಗ್ ನಲ್ಲೂ ಪ್ಲೇಯರ್ಸ್ ದುಬಾರಿ
ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ತಂಡದಲ್ಲಿ ಇಲ್ಲ
ಬಲಿಷ್ಠರ ಪಡೆಯನ್ನೇ ಕಣಕ್ಕಿಳಿಸೋಕೆ ರೆಡಿಯಾಗಿರೋ ಇಂಗ್ಲೆಂಡ್ ತಂಡ
ಹೆಡ್ ಕೋಚ್ ಗೌತಮ್ ಗಂಭೀರ್ ಗೂ ಕೂಡ ಇಂಗ್ಲೆಂಡ್ ಸರಣಿ ಪ್ರತಿಷ್ಠೆ

ನೋಡಿರಿ

